ಕರ್ನಾಟಕ

karnataka

ETV Bharat / sports

ಐಪಿಎಲ್ 2020: ಅಕ್ಸರ್ ಪಟೇಲ್ ಬೌಲಿಂಗ್ ಹೊಗಳಿದ ಅನ್ರಿಚ್ ನಾರ್ಟ್ಜ್ - ದೆಹಲಿ ಕ್ಯಾಪಿಟಲ್ಸ್ ವೇಗಿ ಅನ್ರಿಚ್ ನಾರ್ಟ್ಜ್ ಹೇಳಿಕೆ

ಸ್ಪಿನ್ನರ್ ಅಕ್ಸರ್ ಪಟೇಲ್ ಯೋಜನೆಗಳು ಸ್ಥಿರ ಮತ್ತು ಸ್ಪಷ್ಟವಾಗಿದ್ದು, ಇದರಿಂದಾಗಿ ಬ್ಯಾಟ್ಸ್‌ಮನ್‌ಗಳು ಅವರ ವಿರುದ್ಧ ಹೋರಾಡಲು ಪ್ರಯಾಸ ಪಡುತ್ತಾರೆ ಎಂದು ದೆಹಲಿ ಕ್ಯಾಪಿಟಲ್ಸ್ ವೇಗಿ ಅನ್ರಿಚ್ ನಾರ್ಟ್ಜ್ ಹೇಳಿದ್ದಾರೆ.

axar
axar

By

Published : Sep 26, 2020, 12:09 PM IST

ದುಬೈ: ಸ್ಪಿನ್ನರ್ ಅಕ್ಸರ್ ಪಟೇಲ್ ಯೋಜನೆಗಳು ಸ್ಥಿರ ಮತ್ತು ಸ್ಪಷ್ಟವಾಗಿವೆ ಎಂದು ದೆಹಲಿ ಕ್ಯಾಪಿಟಲ್ಸ್ ವೇಗಿ ಅನ್ರಿಚ್ ನಾರ್ಟ್ಜ್ ಹೇಳಿದ್ದಾರೆ.

ಇದರಿಂದಾಗಿ ಬ್ಯಾಟ್ಸ್‌ಮನ್‌ಗಳು ಅವರ ವಿರುದ್ಧ ಹೋರಾಡಲು ಪ್ರಯಾಸ ಪಡುತ್ತಾರೆ ಎಂದು ಅನ್ರಿಚ್ ಹೇಳಿದ್ದಾರೆ.

ಅನ್ರಿಚ್ ನಾರ್ಟ್ಜ್

ದುಬೈ ಇಂಟರ್​ನ್ಯಾಷನಲ್​ ಸ್ಟೇಡಿಯಂನಲ್ಲಿ ನಡೆದ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಪಂದ್ಯದಲ್ಲಿ ದೆಹಲಿ ಕ್ಯಾಪಿಟಲ್ಸ್ ತಂಡ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು 44 ರನ್​ಗಳಿಂದ ಸೋಲಿಸಿದೆ.

ದೆಹಲಿ ಕ್ಯಾಪಿಟಲ್ಸ್ ವರ್ಸಸ್ ಚೆನ್ನೈ ಸೂಪರ್ ಕಿಂಗ್ಸ್

ಶ್ರೇಯಸ್ ಅಯ್ಯರ್ ನೇತೃತ್ವದ ದೆಹಲಿ ತಂಡ 3 ವಿಕೆಟ್ ನಷ್ಟಕ್ಕೆ 175 ರನ್ ಗಳಿಸಿದರೆ, ಸಿಎಸ್​ಕೆ 7 ವಿಕೆಟ್ ಕಳೆದುಕೊಂಡು ಕೇವಲ 131 ರನ್ ಗಳಿಸಿತು.

ದೆಹಲಿ ಕ್ಯಾಪಿಟಲ್ಸ್ ವರ್ಸಸ್ ಚೆನ್ನೈ ಸೂಪರ್ ಕಿಂಗ್ಸ್

ಅಕ್ಸರ್ ಪಟೇಲ್ ಮತ್ತೊಮ್ಮೆ ಸಿಎಸ್​ಕೆಯ ಶೇನ್ ವ್ಯಾಟ್ಸನ್​ರನ್ನು ಔಟ್ ಮಾಡುವ ಮೂಲಕ ಐಪಿಎಲ್​ನಲ್ಲಿ ಆರನೇ ಬಾರಿಗೆ ಔಟ್ ಮಾಡಿದ್ದಾರೆ.

"ಅಕ್ಸರ್ ಸಾಕಷ್ಟು ಸ್ಥಿರವಾಗಿದ್ದಾರೆ ಎಂದು ನಾನು ಭಾವಿಸುತ್ತೇನೆ. ಅವರು ಅದ್ಭುತ ಬೌಲರ್ ಆಗಿದ್ದು, ತಮ್ಮ ಯೋಜನೆಗಳಲ್ಲಿ ಬಹಳ ಸ್ಪಷ್ಟವಾಗಿರುತ್ತಾರೆ" ಎಂದು ನಾರ್ಟ್ಜ್ ಪಂದ್ಯದ ನಂತರದ ಸುದ್ದಿಗೋಷ್ಠಿಯಲ್ಲಿ ಹೇಳಿದರು.

ABOUT THE AUTHOR

...view details