ಅಬುಧಾಬಿ: ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್‌ಕೆ) ವಿರುದ್ಧ ಏಳು ವಿಕೆಟ್‌ಗಳ ಭರ್ಜರಿ ಗೆಲುವು ಸಾಧಿಸಿದ ನಂತರ ರಾಜಸ್ಥಾನ ರಾಯಲ್ಸ್ ತಂಡದ ನಾಯಕ ಸ್ಟೀವ್ ಸ್ಮಿತ್ ಮಾತನಾಡಿದ್ದು, ಅಬುಧಾಬಿ ಪಿಚ್ ಬ್ಯಾಟಿಂಗ್‌ಗೆ ಉತ್ತಮವಾಗಿಲ್ಲ ಎಂದು ಹೇಳಿದ್ದಾರೆ.
ಸ್ಟೀವ್ ಸ್ಮಿತ್ ನೇತೃತ್ವದ ರಾಜಸ್ಥಾನ ರಾಯಲ್ಸ್ ತಂಡ ಐಪಿಎಲ್ ಪಾಯಿಂಟ್ ಟೇಬಲ್‌ನಲ್ಲಿ 10 ಪಂದ್ಯಗಳಿಂದ 8 ಅಂಕಗಳನ್ನು ಪಡೆದು ಐದನೇ ಸ್ಥಾನಕ್ಕೆ ಜಿಗಿದಿದೆ. ಆದರೆ ಸಿಎಸ್‌ಕೆ ಕೇವಲ ಆರು ಪಾಯಿಂಟ್‌ಗಳೊಂದಿಗೆ ಕೆಳಮಟ್ಟದಲ್ಲಿದೆ. ಇನ್ನು ನಿನ್ನೆಯ ಪಂದ್ಯದಲ್ಲಿ ಸುಲಭದ ಗುರಿ ಬೆನ್ನತ್ತಿದ್ದ ರಾಜಸ್ಥಾನ ರಾಯಲ್ಸ್ ತಂಡ ಒಟ್ಟು 126 ರನ್ ಗಳಿಸಿ, ಏಳು ವಿಕೆಟ್ ಜಯ ಸಾಧಿಸಿತು. ಜೋಸ್ ಬಟ್ಲರ್ 70 ರನ್ ಗಳಿಸಿದರೆ, ನಾಯಕ ಸ್ಟೀವ್ ಸ್ಮಿತ್ ಅಜೇಯ 26 ರನ್ ಬಾರಿಸಿದರು.
ಬಳಿಕ ಮಾತನಾಡಿದ ಅವರು, "ಶಾರ್ಜಾ ಭಾರತಕ್ಕಿಂತ ಸ್ವಲ್ಪ ಭಿನ್ನವಾಗಿದೆ. ಬ್ಯಾಟಿಂಗ್ ಮಾಡಲು ಪಿಚ್ ಉತ್ತಮವಾಗಿಲ್ಲ. ಹೀಗಾಗಿ ಸೇಫ್ ಆಗಿ ಆಟವಾಡುವುದು ಒಳ್ಳೆಯದು. ನಾವು ಪವರ್ ಪ್ಲೇನಲ್ಲಿ ಉತ್ತಮವಾಗಿ ಬೌಲಿಂಗ್ ಮಾಡಿದ್ದೇವೆ. ತೆವಾಟಿಯಾ ಮತ್ತು ಶ್ರೇಯಾಸ್ ಉತ್ತಮ ಪ್ರದರ್ಶನ ನೀಡಿದ್ದಾರೆ. ಬಟ್ಲರ್ ಮತ್ತು ನನ್ನ ಜೊತೆಯಾಟ ಒತ್ತಡವನ್ನು ತಗ್ಗಿಸಿತು. ಇನ್ನು ಬಟ್ಲರ್ ಯಾವಾಗಲೂ ಉತ್ತಮ ಸ್ಟ್ರೈಕ್ ರೇಟ್ ನಿರ್ವಹಿಸುತ್ತಾರೆ" ಎಂದರು.