ಕರ್ನಾಟಕ

karnataka

By

Published : Sep 26, 2020, 3:49 PM IST

ETV Bharat / sports

ಐಪಿಎಲ್​​ 2020: ಡುಪ್ಲೆಸಿಗೆ ಆರೇಂಜ್​ ಕ್ಯಾಪ್​... ರಬಾಡಾಗೆ ಪರ್ಪಲ್​ ಕ್ಯಾಪ್​!

ಇಂಡಿಯನ್​​ ಪ್ರೀಮಿಯರ್​ ಲೀಗ್​​ 2020 ಆರಂಭಗೊಂಡು ಒಂದು ವಾರ ಪೂರ್ಣಗೊಂಡಿದೆ. ದಿನದಿಂದ ದಿನಕ್ಕೆ ರೋಚಕತೆ ಪಡೆದುಕೊಳ್ಳುತ್ತಿದೆ.

IPL 2020
IPL 2020

ದುಬೈ:ಪ್ರಸಕ್ತ ಸಾಲಿನ ಇಂಡಿಯನ್​ ಪ್ರೀಮಿಯರ್​ ಲೀಗ್​ ಆರಂಭಗೊಂಡು ವಾರ ಕಳೆದಿದೆ. ವಿವಿಧ ತಂಡಗಳಲ್ಲಿರುವ ಪ್ಲೇಯರ್ಸ್​ ಬ್ಯಾಟಿಂಗ್​, ಬೌಲಿಂಗ್​ ಅಬ್ಬರ ಜೋರಾಗಿದೆ. 2020ನೇ ಸಾಲಿನಲ್ಲಿ ಇದೀಗ ಅತಿ ಹೆಚ್ಚು ರನ್​ ಹಾಗೂ ಹೆಚ್ಚು ವಿಕೆಟ್​ ಪಡೆದ ಪ್ಲೇಯರ್ಸ್​ ಕ್ರಮವಾಗಿ ಆರೇಂಜ್​ ಹಾಗೂ ಪರ್ಪಲ್​ ಕ್ಯಾಪ್​ ಪಡೆದುಕೊಂಡಿದ್ದಾರೆ.

ಚೆನ್ನೈ ಬ್ಯಾಟ್ಸ್​ಮನ್ ಡುಪ್ಲೆಸಿ

ಚೆನ್ನೈ ಸೂಪರ್​ ಕಿಂಗ್ಸ್​ ತಂಡದ ಪಾಪು ಡುಪ್ಲೆಸಿ ಅತಿ ಹೆಚ್ಚು ರನ್​ಗಳಿಕೆ ಮಾಡಿದ್ದು ಅವರಿಗೆ ಆರೇಂಜ್​ ಕ್ಯಾಪ್​ ಹಾಗೂ ಡೆಲ್ಲಿ ಕ್ಯಾಪಿಟಲ್ಸ್​​ ತಂಡ ಕಗಿಸೋ ರಬಾಡಾ ಅತಿ ಹೆಚ್ಚು ವಿಕೆಟ್​ ಪಡೆದುಕೊಂಡಿದ್ದರಿಂದ ಪರ್ಪಲ್​ ಕ್ಯಾಪ್​ ಪಡೆದುಕೊಂಡಿದ್ದಾರೆ.

ಡೆಲ್ಲಿ ಬೌಲರ್​ ರಬಾಡ

ಮೂರು ಪಂದ್ಯಗಳಿಂದ ಡುಪ್ಲೆಸಿ 173ರನ್​ಗಳಿಕೆ ಮಾಡಿ ಟಾಪ್​ ಸ್ಕೋರ್​ ಮಾಡಿದ ಪಟ್ಟಿಯಲ್ಲಿ ಮೊದಲಿಗರಾಗಿದ್ದಾರೆ. ಇನ್ನು ಕಿಂಗ್ಸ್​ ಪಂಜಾಬ್​ ತಂಡದ ಕ್ಯಾಪ್ಟನ್​ ಎರಡು ಪಂದ್ಯಗಳಿಂದ 153ರನ್​ಗಳಿಕೆ ಮಾಡಿದ್ದಾರೆ. ಜತೆಗೆ ಕನ್ನಡಿಗ ಮಯಾಂಕ್​ ಅಗರವಾಲ್​ 115ರನ್​ಗಳಿಸಿ ನಂತರದ ಸ್ಥಾನಗಳಲ್ಲಿದ್ದಾರೆ.

ಆರೇಂಜ್​, ಪರ್ಪಲ್​ ಕ್ಯಾಪ್​​

ಬೌಲಿಂಗ್​ ವಿಭಾಗದಲ್ಲಿ ಎರಡು ಪಂದ್ಯಗಳಿಂದ ರಬಾಡ 5ವಿಕೆಟ್​ ಪಡೆದುಕೊಂಡಿದ್ದಾರೆ. ಸಿಎಸ್​ಕೆ ತಂಡದ ಸ್ಯಾಮ್​ ಕರ್ರನ್​​ ಮೂರು ಪಂದ್ಯಗಳಿಂದ 5ವಿಕೆಟ್​ ಪಡೆದುಕೊಂಡಿದ್ದಾರೆ. ಕಿಂಗ್ಸ್ ಪಂಜಾಬ್​ ತಂಡದ ಶಮಿ 4 ಹಾಗೂ ಆರ್​ಸಿಬಿ ತಂಡದ ಚಹಾಲ್​ ತಲಾ 4ವಿಕೆಟ್​ ಪಡೆದುಕೊಂಡಿದ್ದಾರೆ. ಇನ್ನು ಡೆಲ್ಲಿ ಎರಡು ಪಂದ್ಯಗಳಲ್ಲಿ ಗೆದ್ದು ಮೊದಲ ಸ್ಥಾನದಲ್ಲಿದ್ದು, ಪಂಜಾಬ್​ ಎರಡು ಪಂದ್ಯಗಳಲ್ಲಿ 1 ಗೆದ್ದು ಎರಡನೇ ಸ್ಥಾನ, ಮುಂಬೈ ಎರಡಲ್ಲಿ ಒಂದು ಗೆದ್ದು ಮೂರನೇ ಸ್ಥಾನದಲ್ಲಿವೆ. ಉಳಿದಂತೆ ರಾಜಸ್ಥಾನ, ಚೆನ್ನೈ, ಬೆಂಗಳೂರು, ಹೈದರಾಬಾದ್​, ಕೋಲ್ಕತ್ತಾ ನಂತರದ ಸ್ಥಾನದಲ್ಲಿವೆ.

ABOUT THE AUTHOR

...view details