ಕರ್ನಾಟಕ

karnataka

ETV Bharat / sports

ಫೈನಲ್ ತಲುಪಿದ ಮುಂಬೈಗೆ ಆಘಾತ: ವೇಗಿ ಟ್ರೆಂಟ್ ಬೌಲ್ಟ್​ಗೆ ಗಾಯ - ಮುಂಬೈ ಇಂಡಿಯನ್ಸ್

ಗಾಯದ ಸಮಸ್ಯೆಯಿಂದ ಕ್ವಾಲಿಫೈಯರ್ ಪಂದ್ಯದ ಅರ್ಧದಲ್ಲೇ ಮೈದಾನ ತೊರೆದ ವೇಗಿ ಟ್ರೆಂಟ್ ಬೌಲ್ಟ್ ಫೈನಲ್ ಪಂದ್ಯಕ್ಕೆ ಮರಳುವ ನಿರೀಕ್ಷೆ ಇದೆ ಎಂದು ಮುಂಬೈ ತಂಡದ ನಾಯಕ ರೋಹಿತ್ ಶರ್ಮಾ ಹೇಳಿದ್ದಾರೆ.

Boult should be back for finals, says Rohit
ವೇಗಿ ಟ್ರೆಂಟ್ ಬೌಲ್ಟ್​ಗೆ ಗಾಯ

By

Published : Nov 6, 2020, 6:43 AM IST

ದುಬೈ: ಗುರುವಾರ ನಡೆದ ಇಂಡಿಯನ್ ಪ್ರೀಮಿಯರ್ ಲೀಗ್​ನ ಮೊದಲ ಕ್ವಾಲಿಫೈಯರ್ ಪಂದ್ಯದಲ್ಲಿ ಮುಂಬೈ ಪರ ಅದ್ಭುತ ಬೌಲಿಂಗ್ ಪ್ರದರ್ಶನ ತೋರಿದ ಟ್ರೆಂಟ್ ಬೋಲ್ಟ್ ಗಾಯಗೊಂಡಿದ್ದು, ಹಾಲಿ ಚಾಂಪಿಯನ್ಸ್​ಗೆ ಅಘಾತ ಉಂಟುಮಾಡಿದೆ.

ಮೊದಲ ಓವರ್​ನಲ್ಲೇ ಪ್ರಮುಖ 2 ವಿಕೆಟ್ ಪಡೆದು, ಮುಂಬೈ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಬೋಲ್ಟ್ ನಿನ್ನೆ 2 ಓವರ್​ ಬೌಲಿಂಗ್ ನಡೆಸಿ ಪ್ರಮುಖ ಎರಡು ವಿಕೆಟ್ ಪಡೆದರು. ಪಂದ್ಯದ ವೇಳೆ ತೋಡೆಸಂದಿಯ ನೋವಿನಿಂದಾಗಿ ಮೈದಾನದಿಂದ ಹೊರನಡೆದ್ರು.

ವೇಗಿ ಟ್ರೆಂಟ್ ಬೌಲ್ಟ್

ಪಂದ್ಯ ಮುಗಿದ ಬಳಿಕ ಮಾತನಾಡಿದ ಮುಂಬೈ ಇಂಡಿಯನ್ಸ್ ತಂಡದ ನಾಯಕ ರೋಹಿತ್ ಶರ್ಮಾ, "ಸದ್ಯ ಬೋಲ್ಟ್ ಅವರನ್ನು ನೋಡಿಲ್ಲ. ಆದರೆ ಹೆಚ್ಚಿನ ತೊಂದರೆ ಏನು ಇಲ್ಲವೆಂದು ಭಾವಿಸುತ್ತೇನೆ. ಮೂರು ದಿನಗಳ ವಿಶ್ರಾಂತಿ ನಂತರ ಅವರು ಮತ್ತೆ ಮೈದಾನಕ್ಕೆ ಬರಬೇಕು. ಬುಮ್ರಾ ಮತ್ತು ಬೌಲ್ಟ್ ನಮ್ಮ ತಂಡದ ದೊಡ್ಡ ಶಕ್ತಿಯಾಗಿದ್ದಾರೆ" ಎಂದು ಹೇಳಿದ್ರು.

ಮೊದಲ ಕ್ವಾಲಿಫೈಯರ್ ಪಂದ್ಯದಲ್ಲಿ ಮಿಂಚಿದ ಬೋಲ್ಟ್ ಮತ್ತು ಬುಮ್ರಾ, ಡೆಲ್ಲಿ ಬ್ಯಾಟ್ಸ್​ಮನ್​ಗಳನ್ನು ಪೆವಿಲಿಯನ್ ಸೇರಿಸಿದ್ರು. ಮೊದಲ ನಾಲ್ಕು ಓವರ್​ಗಳಲ್ಲೇ ಪ್ರಮುಖ ನಾಲ್ಕು ವಿಕೆಟ್ ಕಬಳಿಸಿ ಮುಂಬೈ ತಂಡದ ಗೆಲುವನ್ನು ಸುಲಭಗೊಳಿಸಿದ್ರು. ಅದ್ಭುತ ಬೌಲಿಂಗ್ ಪ್ರದರ್ಶನ ತೋರಿದ ಯಾರ್ಕರ್ ಸ್ಪೆಷಲಿಸ್ಟ್​ ಬುಮ್ರಾ 4 ಓವರ್​ಗಳಲ್ಲಿ 14 ರನ್​ ನೀಡಿ 4 ವಿಕೆಟ್ ಪಡೆದರೆ, ಟ್ರೆಂಟ್ ಬೌಲ್ಟ್​ 2 ಓವರ್​ಗಳಲ್ಲಿ 9 ರನ್​ ನೀಡಿ 2 ವಿಕೆಟ್ ಪಡೆದರು.

ABOUT THE AUTHOR

...view details