ಅಬುಧಾಬಿ:ಆರಂಭಿಕ ಆಟಗಾರನಾಗಿ ತಮ್ಮ ತಂಡವನ್ನು ಗೆಲುವಿನತ್ತ ಕೊಂಡೊಯ್ಯುವುದು ಮುಖ್ಯವಾಗಿದೆ ಎಂದು ಕೆಕೆಆರ್ ತಂಡದ ಆರಂಭಿಕ ಆಟಗಾರ ಶುಬ್ಮನ್ ಗಿಲ್ ಹೇಳಿದ್ದಾರೆ.
ನಿನ್ನೆ ನಡೆದ ಸನ್ರೈಸರ್ಸ್ ವಿರುದ್ಧದ ಪಂದ್ಯದಲ್ಲಿ ಅದ್ಭುತ ಪ್ರದರ್ಶನ ನೀಡಿದ ಯುವ ಆಟಗಾರ ಶುಬ್ಮನ್ 70 ರನ್ ಸಿಡಿಸಿ ಅಜೇಯರಾಗಿ ಉಳಿಯುವ ಮೂಲಕ ಕೆಕೆಆರ್ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.
ಪಂದ್ಯ ಮುಗಿದ ಬಳಿಕ ಮಾತನಾಡಿರುವ ಗಿಲ್, ನಮ್ಮ ಯೋಜನೆ ಸರಳವಾಗಿತ್ತು. ನಾನು ಆಟಕ್ಕೆ ಹೊಂದಿಕೊಳ್ಳುತ್ತ ತಂಡವನ್ನು ಗೆಲುವಿನತ್ತ ಕೊಂಡೊಯ್ಯುಲು ನೋಡುತ್ತಿದ್ದೆ. ಗುರಿ ಅಷ್ಟೇನು ದೊಡ್ಡದಲ್ಲವಾಗಿದ್ದರಿಂದ ನಾನು ಕ್ರೀಸ್ನಲ್ಲಿ ಇರುವುದು ಮುಖ್ಯವಾಗಿತ್ತು ಮತ್ತು ಬ್ಯಾಟಿಂಗ್ ಯುನಿಟ್ ಆಗಿ ನೋಡುವುದಾದ್ರೆ ನಾವೆಲ್ಲರೂ ಉತ್ತಮ ಪ್ರದರ್ಶನ ತೋರಿದ್ದೇವೆ ಎಂದು ಭಾವಿಸುತ್ತೇನೆ ಎಂದಿದ್ದಾರೆ.
ಶುಬ್ಮನ್ ಗಿಲ್, ಕೆಕೆಆರ್ ಆಟಗಾರ ಯಾವುದೇ ಆರಂಭಿಕ ಆಟಗಾರರಿಗೆ ತಮ್ಮ ತಂಡವನ್ನು ಗೆಲುವಿನತ್ತ ಕೊಂಡೊಯ್ಯುವುದು ಮುಖ್ಯವಾಗಿರುತ್ತದೆ. ಯಾರು ಆರಂಭಿಕನಾಗಿ ಕಣಕ್ಕಿಳಿಯಬೇಕು ಎಂಬುದು ತಂಡದ ನಿರ್ಧಾರವಾಗಿದೆ. ಇಲ್ಲಿಯವರೆಗೆ ಸುನಿಲ್ ನರೇನ್ ಅವರನ್ನು ಕಣಕ್ಕಿಳಿಸಲಾಗುತ್ತಿತ್ತು. ಅವರು ಈ ಹಿಂದೆ ಅದ್ಭುತ ಕೊಡುಗೆ ನೀಡಿದ್ದರು ಎಂದು ಗಿಲ್ ತಿಳಿಸಿದರು.
ನಿನ್ನೆ ನಡೆದ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ನಡೆಸಿದ ಹೈದರಾಬಾದ್ ತಂಡ 20 ಓವರ್ಗಳಲ್ಲಿ 4 ವಿಕೆಟ್ ಕಳೆದುಕೊಂಡು 142 ರನ್ ಗಳಿಸಿತ್ತು. ಇದಕ್ಕೆ ಉತ್ತರವಾಗಿ ಬ್ಯಾಟಿಂಗ್ ನಡೆಸಿದ ಕೆಕೆಆರ್ 18 ಓವರ್ಗಳಲ್ಲಿ 3 ವಿಕೆಟ್ ಕಳೆದುಕೊಂಡು 145 ರನ್ ಗಳಿಸಿ 7 ವಿಕೆಟ್ಗಳ ಭರ್ಜರಿ ಜಯ ದಾಖಲಿಸಿದೆ.