ಕರ್ನಾಟಕ

karnataka

ETV Bharat / sports

ಮುಂದಿನ ಪಂದ್ಯಗಳಲ್ಲಿ ಈ ಫಲಿತಾಂಶ ಪುನರಾವರ್ತಿಸಲು ಆಶಿಸುತ್ತೇವೆ: ಗೆಲುವಿನ ನಂತರ ಧೋನಿ ಹೇಳಿಕೆ - ಚೆನ್ನೈ ಸೂಪರ್ ಕೀಂಗ್ಸ್

ಪಂಜಾಬ್​ ವಿರುದ್ಧ ತೋರಿದ ಪ್ರದರ್ಶನವನ್ನು ಮುಂಬರುವ ಪಂದ್ಯಗಳಲ್ಲೂ ನಮ್ಮ ತಂಡ ಪುನರಾವರ್ತಿಸಲು ಪ್ರಯತ್ನಿಸುತ್ತದೆ ಎಂದು ಸಿಎಸ್​ಕೆ ನಾಯಕ ಎಂ.ಎಸ್.ಧೋನಿ ಆಶಿಸಿದ್ದಾರೆ.

MSD after 10-wkt win over Punjab
ಸಿಎಸ್​ಕೆ ನಾಯಕ ಎಂ.ಎಸ್. ಧೋನಿ

By

Published : Oct 5, 2020, 8:18 AM IST

ದುಬೈ:ಹ್ಯಾಟ್ರಿಕ್ ಸೋಲುಗಳಿಂದ ಕಂಗೆಟ್ಟಿದ್ದ ಚೆನ್ನೈ ಸೂಪರ್​ ಕಿಂಗ್ಸ್​ ತಂಡ ಪಂಜಾಬ್​ ವಿರುದ್ದ 10 ವಿಕೆಟ್​ಗಳ ಭರ್ಜರಿ ಜಯ ಸಾಧಿಸಿ ಗೆಲುವಿನ ಹಳಿಗೆ ಮರಳಿದೆ. ಮುಂಬರುವ ಪಂದ್ಯಗಳಲ್ಲಿ ತಂಡವು ಈ ಫಲಿತಾಂಶವನ್ನು ಪುನರಾವರ್ತಿಸಲು ಪ್ರಯತ್ನಿಸುತ್ತದೆ ನಾಯಕ ಎಂ.ಎಸ್.ಧೋನಿ ಆಶಿಸಿದ್ದಾರೆ.

ಪಂದ್ಯ ಮುಗಿದ ಬಳಿಕ ಮಾತನಾಡಿದ ಧೋನಿ, ನಾವು ಸಣ್ಣ ಕೆಲಸಗಳನ್ನು ಮಾಡಿದ್ದೇವೆ ಎಂದು ನಾನು ಭಾವಿಸುತ್ತೇನೆ. ಅದು ನಮಗೆ ಮುಖ್ಯವಾಗಿತ್ತು. ಬ್ಯಾಟಿಂಗ್​ನಲ್ಲಿ ಎಂತಹ ಆರಂಭ ಪಡೆದಿದ್ದೇವೋ ಅದೇ ನಮಗೆ ಬೇಕಾಗಿತ್ತು. ಆಶಾದಾಯಕವಾಗಿ, ಮುಂಬರುವ ಪಂದ್ಯಗಳಲ್ಲಿ ಇದನ್ನು ಪುನರಾವರ್ತಿಸಲು ಪಯತ್ನಿಸುತ್ತೇವೆ ಎಂದಿದ್ದಾರೆ.

ತಂಡಕ್ಕೆ 10 ವಿಕೆಟ್​ಗಳ ಜಯ ತಂದುಕೊಟ್ಟ ಆರಂಭಿಕ ಆಟಗಾರರಾದ ಶೇನ್ ವಾಟ್ಸನ್​ ಮತ್ತು ಫಾಫ್ ಡು ಪ್ಲೆಸಿಸ್​ ಆಟಕ್ಕೆ ಧೋನಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಹಿಂದಿನ ಪಂದ್ಯ ಸೋತರೂ ಧೋನಿ ಮತ್ತು ಸಿಎಸ್‌ಕೆ ಮ್ಯಾನೇಜ್‌ಮೆಂಟ್ ಅದೇ ತಂಡವನ್ನು ಆಯ್ಕೆ ಮಾಡಿತ್ತು.

ತಂಡದ ಆಯ್ಕೆಯಲ್ಲಿನ ಸ್ಥಿರತೆ ಬಗ್ಗೆ ಮಾತನಾಡಿದ ಧೋನಿ, ಕೆಲವೊಮ್ಮೆ ಫ್ಲೆಮಿಂಗ್‌ ಹೆಚ್ಚು ಕ್ರೆಡಿಟ್ ಪಡೆಯುವುದಿಲ್ಲ. ಅಂದರೆ ನಮ್ಮ ತಂಡದಲ್ಲಿ ಚರ್ಚೆಗಳು ನಡೆಯುವುದಿಲ್ಲ ಎಂದಲ್ಲ, ನಮ್ಮಲ್ಲಿ ಒಂದು ಯೋಜನೆ ಇದೆ. ಅದೇ ನಮ್ಮ ನಡುವಿನ ಉತ್ತಮ ಸಂಬಂಧವಾಗಿದೆ ಎಂದಿದ್ದಾರೆ.

ಟಾಸ್ ಗೆದ್ದು ಬ್ಯಾಟಿಂಗ್ ನಡೆಸಿದ್ದ ಪಂಜಾಬ್ ತಂಡ 8 ವಿಕೆಟ್ ಕಳೆದುಕೊಂಡು 178 ರನ್​ ಗಳಿಸಿತು. ಮರುತ್ತರವಾಗಿ ಬ್ಯಾಟಿಂಗ್ ನಡೆಸಿದ ಚೆನ್ನೈ 20 ಓವರ್​ಗಳಲ್ಲಿ ಯಾವುದೇ ವಿಕೆಟ್ ನಷ್ಟವಿಲ್ಲದೆ 181 ರನ್ ಗಳಿಸುವ ಮೂಲಕ 10 ವಿಕೆಟ್​ಗಳ ಭರ್ಜರಿ ಜಯ ದಾಖಲಿಸಿದೆ.

ABOUT THE AUTHOR

...view details