ದುಬೈ :ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಕ್ರಿಸ್ ಮೋರಿಸ್ ಅವರನ್ನು ತಮ್ಮ ಮೊದಲ ಪಂದ್ಯದಿಂದ ಹೊರಗಿಟ್ಟಿದ್ದು ಕ್ರಿಕೆಟ್ ತಜ್ಞರು ಹುಬ್ಬೇರುವಂತೆ ಮಾಡಿತ್ತು. ಆದರೆ, ಅದರ ಅಸಲಿ ಕಾರಣ ಆರ್‌ಸಿಬಿ ತಂಡದ ನಿರ್ದೇಶಕ ಮೈಕ್ ಹೆಸ್ಸನ್ ಬಿಚ್ಚಿಟ್ಟಿದ್ದಾರೆ.
ಈ ಬಗ್ಗೆ ಆರ್‌ಸಿಬಿ ಬಿಡುಗಡೆ ಮಾಡಿರುವ ವಿಡಿಯೋದಲ್ಲಿ ಮಾತನಾಡಿರುವ ಹೆಸ್ಸನ್, ದುರದೃಷ್ಟವಶಾತ್ ಕ್ರಿಸ್ ಮೋರಿಸ್ಗೆ ಕೆಲ ದಿನಗಳ ಹಿಂದೆ ಪಕ್ಕೆ ನೋವು (ಸೈಡ್ ಸ್ಟ್ರೈನ್) ಕಾಣಿಸಿದೆ. ಅವರು ಮಧ್ಯಮ ಮತ್ತು ಡೆತ್ ಓವರ್‌ಗಳಲ್ಲಿ ತಂಡಕ್ಕೆ ದೊಡ್ಡ ಕಾಣಿಕೆ ನೀಡಬಹುದಿತ್ತು. ಅವರ ಬ್ಯಾಟಿಂಗ್ ಕೂಡ ಭಾರಿ ಪರಿಣಾಮ ಬೀರುತ್ತಿತ್ತು ಎಂದು ಹೆಸ್ಸನ್ ತಿಳಿಸಿದ್ದಾರೆ.