ಕರ್ನಾಟಕ

karnataka

ETV Bharat / sports

ಬ್ಯಾಕ್ ಟು ಬ್ಯಾಕ್ ಶತಕದ ದಾಖಲೆ ಬಗ್ಗೆ ತಿಳಿದಿರಲಿಲ್ಲ: ಶಿಖರ್ ಧವನ್ - ಶಿಖರ್ ಧವನ್ ಶತಕದ ದಾಖಲೆ

ಐಪಿಎಲ್‌ನಲ್ಲಿ ಬ್ಯಾಕ್ ಟು ಬ್ಯಾಕ್ ಶತಕ ಗಳಿಸಿದ ಮೊದಲ ಆಟಗಾರ ಎಂಬ ಹೆಗ್ಗಳಿಕೆಗೆ ಡೆಲ್ಲಿ ತಂಡದ ಆರಂಭಿಕ ಆಟಗಾರ ಶೀಖರ್ ಧವನ್ ಪಾತ್ರರಾಗಿದ್ದಾರೆ.

Shikhar Dhawan
ಶಿಖರ್ ಧವನ್

By

Published : Oct 21, 2020, 8:04 AM IST

ದುಬೈ: ನಿನ್ನೆ ನಡೆದ ಪಂದ್ಯದಲ್ಲಿ ಡೆಲ್ಲಿ ತಂಡದ ಆರಂಭಿಕ ಆಟಗಾರ ಶಿಖರ್ ಧವನ್ ಶತಕ ಸಿಡಿಸಿದ್ದು, ಐಪಿಎಲ್‌ನಲ್ಲಿ ಬ್ಯಾಕ್ ಟು ಬ್ಯಾಕ್ ಶತಕ ಗಳಿಸಿದ ಮೊದಲ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ಒಂದು ಕಡೆ ವಿಕೆಟ್ ಬೀಳುತ್ತಿದ್ದರೂ ಏಕಾಂಗಿ ಹೋರಾಟ ನಡೆಸಿದ ಧವನ್​ 61 ಎಸೆತಗಳಲ್ಲಿ 12 ಬೌಂಡರಿ ಹಾಗೂ 3 ಸಿಕ್ಸರ್​ಗಳ ಸಹಿತ 106 ರನ್​ಗಳಿಸಿ ಔಟಾಗದೆ ಉಳಿದರು. ಆದರೆ ಡೆಲ್ಲಿ ನೀಡಿದ ಗುರಿಯನ್ನು 19 ಓವರ್​ಗಳಲ್ಲೇ ಬೆನ್ನಟ್ಟಿದ ಪಂಜಾಬ್, ಐದು ವಿಕೆಟ್​ಗಳ ಗೆಲುವು ದಾಖಲಿಸಿತು.

ಪಂದ್ಯ ಮುಗಿದ ಬಳಿಕ ಮಾತನಾಡಿದ ಶಿಖರ್ ಧವನ್, "ಇಂದು ನಮ್ಮ ದಿನವಾಗಿರಲಿಲ್ಲ, ಇಲ್ಲದಿದ್ದರೆ ನಮ್ಮ ಹುಡುಗರು ಉತ್ತಮ ಪ್ರದರ್ಶನ ತೋರುತ್ತಿದ್ದರು. ಒಂದು ಬದಿಯಲ್ಲಿ ನಾನು ಜವಾಬ್ದಾರಿ ತೆಗೆದುಕೊಂಡು ತಂಡವನ್ನು ಮುನ್ನಡೆಸಿದೆ. ನನಗೆ ಅವಕಾಶ ಸಿಕ್ಕಾಗ ಬೌಂಡರಿ ಬಾರಿಸುತ್ತಿದ್ದೆ" ಎಂದಿದ್ದಾರೆ. ನೂತನ ದಾಖಲೆ ಬಗ್ಗೆ ಪ್ರಶ್ನಿಸಿದ್ದಕ್ಕೆ, ನನಗೆ ಈ ಬಗ್ಗೆ ತಿಳಿದಿರಲಿಲ್ಲ ಎಂದಿದ್ದಾರೆ.

ಶಿಖರ್ ಧವನ್

"ನಾನು ಇಂದಿನ ಪ್ರದರ್ಶನವನ್ನು ನಿಜವಾಗಿಯೂ ಆನಂದಿಸಿದೆ. ನನ್ನ ಚೊಚ್ಚಲ ಟೆಸ್ಟ್ ಪಂದ್ಯದಲ್ಲಿ ಈ ರೀತಿ ನಿರರ್ಗಳವಾಗಿ ಬ್ಯಾಟಿಂಗ್ ನಡೆಸಿದ್ದೆ. ನಾನು ಸ್ಥಿರವಾಗಿ ರನ್​ ಗಳಿಳುತ್ತಿರುವುದು ತಂತೋಷ ತರಿಸಿದೆ. ಇದರಿಂದ ಆತ್ಮವಿಶ್ವಾಸ ಹೆಚ್ಚಾಗಿದೆ. ನಾನು ಸರಿಯಾದ ವಿಶ್ರಾಂತಿ ಪಡೆದು, ಮುಂದಿನ ಪಂದ್ಯಕ್ಕೆ ಹೊಸದಾಗಿ ತಯಾರಾಗುತ್ತೇನೆ" ಎಂದಿದ್ದಾರೆ.

ಮೊದಲು ಬ್ಯಾಟಿಂಗ್ ನಡೆಸಿದ ಡೆಲ್ಲಿ ತಂಡ ಶಿಖರ್ ಧವನ್​​​(106) ಸಿಡಿಸಿದ ಅದ್ಭುತ ಶತಕದ ನೆರವಿನಿಂದ 20 ಓವರ್​ಗಳಲ್ಲಿ 164 ರನ್​ ಗಳಿಸಿತ್ತು.165 ರನ್​ಗಳ ಗುರಿ ಪಡೆದಿದ್ದ ಪಂಜಾಬ್ 20 ಓವರ್​ಗಳಲ್ಲಿ ಇನ್ನು ಒಂದು ಓವರ್​ ಬಾಕಿ ಉಳಿದಿರುವಂತೆ 5 ವಿಕೆಟ್​ ಕಳೆಂದುಕೊಂಡು ಗುರಿ ತಲುಪಿತು.

ABOUT THE AUTHOR

...view details