ಕರ್ನಾಟಕ

karnataka

ETV Bharat / sports

ರಾಹುಲ್, ಮಯಾಂಕ್​ಗೆ ಧೋನಿ ಸಲಹೆ: ಮೆಚ್ಚುಗೆಗೆ ಕಾರಣವಾಯ್ತು ಮಾಹಿ ನಡೆ - ಎಂ.ಎಸ್ ಧೋನಿ

ಭಾನುವಾರ ನಡೆದ ಪಂದ್ಯದ ನಂತರ ಸಿಎಸ್​ಕೆ ತಂಡದ ನಾಯಕ ಧೋನಿ, ಕೆ.ಎಲ್.ರಾಹುಲ್ ಮತ್ತು ಮಯಾಂಕ್​ ಅಗರ್ವಾಲ್​ಗೆ ಕೆಲವು ಸಲಹೆ ನೀಡುತ್ತಿರುವ ವಿಡಿಯೋಗೆ ಸಾಮಾಜಿಕ ಜಾಲತಾಣದಲ್ಲಿ ಮೆಚ್ಚುಗೆ ವ್ಯಕ್ತವಾಗುತ್ತಿದೆ.

Dhoni gives tips to KL Rahul and Mayank Agarwal
ರಾಹುಲ್, ಮಯಾಂಕ್​ಗೆ ಧೋನಿ ಸಲಹೆ

By

Published : Oct 5, 2020, 1:12 PM IST

ದುಬೈ:ಭಾನುವಾರ ನಡೆದ ಐಪಿಎಲ್ ಪಂದ್ಯದಲ್ಲಿ ಚೆನ್ನೈ ವಿರುದ್ಧ 10 ವಿಕೆಟ್​ಗಳ ಸೋಲು ಕಂಡ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ನಾಯಕ ಕೆ.ಎಲ್.ರಾಹುಲ್ ಮತ್ತು ಆರಂಭಿಕ ಆಟಗಾರ ಮಯಾಂಕ್ ಅಗರ್ವಾಲ್​ಗೆ ಸಿಎಸ್​ಕೆ ನಾಯಕ ಎಂ.ಎಸ್.ಧೋನಿ ಸಲಹೆ ನೀಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿದೆ.

ಟಾಸ್​ ಗೆದ್ದು ಬ್ಯಾಟಿಂಗ್ ನಡೆಸಿದ ಪಂಜಾಬ್ ತಂಡಕ್ಕೆ ಅದ್ಭುತ ಫಾರ್ಮ್​ನಲ್ಲಿರುವ ರಾಹುಲ್​-ಮಯಾಂಕ್ ಮೊದಲ ವಿಕೆಟ್​ಗೆ 61 ರನ್​ಗಳ ಜೊತೆಯಾಟ ನೀಡಿದರು. ಈ ಹಂತದಲ್ಲಿ ಮಯಾಂಕ್ ದೊಡ್ಡ ಹೊಡೆತಕ್ಕೆ ಕೈಯಾಕಿ ಚಾವ್ಲಾಗೆ ವಿಕೆಟ್ ನೀಡಿದರು.

ನಂತರ ಬಂದು ಬಿರುಸಿನ ಬ್ಯಾಟಿಂಗ್ ಪ್ರದರ್ಶನ ನೀಡಿದ ಮಂದೀಪ್ ಸಿಂಗ್​ 16 ಎಸೆತಗಳಲ್ಲಿ 2 ಸಿಕ್ಸರ್​ ಸಹಿತ 27 ರನ್ ​ಗಳಿಸಿ ಔಟಾದರು. ನಿಕೋಲಸ್ ಪೂರನ್​ 17 ಎಸೆತಗಳಲ್ಲಿ ಒಂದು ಬೌಂಡರಿ ಹಾಗೂ 3 ಸಿಕ್ಸರ್​ ಸಹಿತ 33 ರನ್ ​ಗಳಿಸಿ ಔಟಾದರು. ನಾಯಕ ಕೆ.ಎಲ್​.ರಾಹುಲ್​ 52 ಎಸೆತಗಳಲ್ಲಿ 7 ಬೌಂಡರಿ ಹಾಗೂ ಒಂದು ಸಿಕ್ಸರ್​ ಸಹಿತ 63 ರನ್ ​ಗಳಿಸಿ ತಂಡ ಉತ್ತಮ ಮೊತ್ತ ಕಲೆಹಾಕುವಲ್ಲಿ ಪ್ರಮುಖ ಪಾತ್ರ ವಹಿಸಿದ್ರು.

179 ರನ್​ಗಳ ಗುರಿ ಬೆನ್ನತ್ತಿದ ಸಿಎಸ್​ಕೆ ಪರ ಅನುಭವಿಗಳಾದ ಶೇನ್ ವಾಟ್ಸನ್​ ಹಾಗೂ ಪ್ಲೆಸಿಸ್​ ಪಂಜಾಬ್ ಬೌಲರ್​ಗಳನ್ನು ಮನಬಂದಂತೆ ದಂಡಿಸಿ ಬೌಂಡರಿ-ಸಿಕ್ಸರ್​ಗಳ ಸುರಿಮಳೆ ಸುರಿಸಿದರು. ಶೇನ್​ ವಾಟ್ಸನ್​ 53 ಎಸೆತಗಳಲ್ಲಿ 11 ಬೌಂಡರಿ ಹಾಗೂ 3 ಸಿಕ್ಸರ್​ ಸಹಿತ 83 ರನ್​ ಸಿಡಿಸಿದರೆ, ಪ್ಲೆಸಿಸ್​ 53 ಎಸೆತಗಳಲ್ಲಿ 11 ಬೌಂಡರಿ ಹಾಗೂ 1 ಸಿಕ್ಸರ್​ ಸಹಿತ 87 ರನ್​ ಕಲೆಹಾಕಿ ತಂಡವನ್ನು ಗೆಲುವಿನ ದಡ ಸೇರಿಸಿದರು.

ಪಂದ್ಯದ ನಂತರ ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕ ಮಹೇಂದ್ರ ಸಿಂಗ್ ಧೋನಿ ಕೆ.ಎಲ್.ರಾಹುಲ್ ಮತ್ತು ಮಯಾಂಕ್ ಅಗರ್ವಾಲ್​ಗೆ ಕೆಲವು ಸಲಹೆಗಳನ್ನು ನೀಡುತ್ತಿರುವ ವಿಡಿಯೋವನ್ನು ಐಪಿಎಲ್ ತನ್ನ ಟ್ವಿಟರ್ ಹ್ಯಾಂಡಲ್​ನಲ್ಲಿ ಪೋಸ್ಟ್ ಮಾಡಿದ್ದು, ಸಾಮಾಜಿಕ ಜಾಲತಾಣದಲ್ಲಿ ಸಖತ್ ಸದ್ದು ಮಾಡುತ್ತಿದೆ.

ABOUT THE AUTHOR

...view details