ದುಬೈ: ಗಾಯದ ಕಾರಣದಿಂದಾಗಿ ಐಪಿಎಲ್ನಿಂದ ಹೊರ ಬಿದ್ದಿರುವ ಡೆಲ್ಲಿ ತಂಡದ ಲೆಗ್ ಸ್ಪಿನ್ನರ್ ಅಮಿತ್ ಮಿಶ್ರಾ ಸ್ಥಾನಕ್ಕೆ ಕರ್ನಾಟಕದ ಆಟಗಾರ ಪ್ರವೀಣ್ ದುಬೆ ಅವರನ್ನು ಆಯ್ಕೆ ಮಾಡಲಾಗಿದೆ.
ಕನ್ನಡಿಗ ಪ್ರವೀಣ್ ದುಬೆ ರಾಜ್ಯದ ಪರ 14 ದೇಶೀಯ ಟಿ-20 ಪಂದ್ಯಗಳನ್ನು ಆಡಿದ್ದು, 16 ವಿಕೆಟ್ಗಳನ್ನು ಹೊಂದಿದ್ದಾರೆ, 6.87 ಎಕಾನಮಿ ಹೊಂದಿದ್ದಾರೆ.
2020ರ ಅಕ್ಟೋಬರ್ 3 ರಂದು ಶಾರ್ಜಾದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧದ ಪಂದ್ಯದ ವೇಳೆ ಅಮಿತ್ ಮಿಶ್ರಾ ಅವರ ಬೆರಳಿಗೆ ಗಾಯವಾಗಿದ್ದರಿಂದ ಟೂರ್ನಿಯಿಂದ ಹೊರಬಿದ್ದಿದ್ದರು. 37 ವರ್ಷದ ಮಿಶ್ರಾ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದು, ಸದ್ಯಕ್ಕೆ ಚೇತರಿಸಿಕೊಳ್ಳುತ್ತಿದ್ದಾರೆ .
ಈ ಸೀಸನ್ನಲ್ಲಿ ಮಿಶ್ರಾ ಮೂರು ಪಂದ್ಯಗಳನ್ನು ಆಡಿದ್ದಾರೆ. ಕೆಕೆಆರ್ ವಿರುದ್ಧ 14 ರನ್ಗಳಿಗೆ 1 ವಿಕೆಟ್, ಹೈದರಾಬಾದ್ ವಿರುದ್ಧ 25 ರನ್ಗಳಿಗೆ 2 ವಿಕೆಟ್ ಪಡೆದಿದ್ದಾರೆ. ಚೆನ್ನೈ ವಿರುದ್ಧದ ಪಂದ್ಯದಲ್ಲಿ 4 ಓವರ್ ಬೌಲಿಂಗ್ ನಡೆಸಿ 23 ರನ್ ಬಿಟ್ಟುಕೊಟ್ಟಿದ್ದ ಮಿಶ್ರಾ ವಿಕೆಟ್ ಪಡೆಯದಿದ್ರೂ, ಉತ್ತಮವಾಗಿ ಸ್ಪೆಲ್ ಮಾಡಿದ್ರು.
ಅಮಿತ್ ಮಿಶ್ರಾ ಐಪಿಎಲ್ ಟೂರ್ನಿಯಲ್ಲಿ 160 ವಿಕೆಟ್ ಪಡೆದಿದ್ದು, ಲಸಿತ್ ಮಲಿಂಗಾ(170 ವಿಕೆಟ್) ನಂತರ ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಎರಡನೇ ಬೌಲರ್ ಎಂಬ ಕೀರ್ತಿಗೆ ಪಾತ್ರರಾಗಿದ್ದಾರೆ.