ಹೈದರಾಬಾದ್:ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 13ನೇ ಆವೃತ್ತಿಯಲ್ಲಿ ಅತ್ಯುತ್ತಮ ಪ್ರದರ್ಶನ ತೋರುವ ಮೂಲಕ ಚೊಚ್ಚಲ ಬಾರಿಗೆ ಫೈನಲ್ ಪ್ರವೇಶಿಸಿ ರನ್ನರ್ಅಪ್ ಆಗಿದ್ದ ಡೆಲ್ಲಿ ಕ್ಯಾಪಿಟಲ್ಸ್ ತಂಡವು ಈ ಬಾರಿ ಜೇಸನ್ ರಾಯ್, ಅಲೆಕ್ಸ್ ಕ್ಯಾರಿ ಸೇರಿದಂತೆ 6 ಆಟಗಾರರನ್ನು ಹರಾಜಿಗಿಟ್ಟಿದೆ.
ಇದನ್ನೂ ಓದಿ...16 ಆಟಗಾರರನ್ನು ಉಳಿಸಿಕೊಂಡ ಪಂಜಾಬ್: ಮ್ಯಾಕ್ಸ್ವೆಲ್, ಕರುಣ್ ನಾಯರ್ಗೆ ಗೇಟ್ಪಾಸ್
ಕಳೆದ ಬಾರಿ ಮಿಂಚಿರುವ ಯುವಕರ ತಂಡ ಡೆಲ್ಲಿ ಕ್ಯಾಪಿಟಲ್ಸ್ ಶ್ರೇಯಸ್ ಅಯ್ಯರ್, ಅಜಿಂಕ್ಯ ರಹಾನೆ, ಕಾಗಿಸೋ ರಬಾಡ, ರಿಷಭ್ ಪಂತ್ ಸೇರಿದಂತೆ 18 ಆಟಗಾರರನ್ನು ಉಳಿಸಿಕೊಂಡಿದೆ. ಅಸಾಧಾರಣ ಪ್ರದರ್ಶನ ತೋರಿದ ಅನ್ರಿಚ್ ನಾರ್ಟ್ಜೆ ಅವರನ್ನು ಉಳಿಸಿಕೊಳ್ಳಲಾಗಿದೆ.
ತಂಡದಿಂದ ಕೈಬಿಡಲಾದ ಆಟಗಾರರಲ್ಲಿ ಮೂವರು ವಿದೇಶಿಯರು ಮತ್ತು ಇಬ್ಬರು ಭಾರತೀಯರು ಸೇರಿದ್ದಾರೆ. ಅಲೆಕ್ಸ್ ಕ್ಯಾರಿ ಮತ್ತು ಸಂದೀಪ್ ಲಮಿಚಾನೆ, ಜೇಸನ್ ರಾಯ್ ಒಂದೇ ಒಂದು ಪಂದ್ಯವನ್ನು ಆಡಿರಲಿಲ್ಲ. ಗಾಯದಿಂದಾಗಿ ಜೇಸನ್ ರಾಯ್ ಟೂರ್ನಿಯಿಂದ ಹೊರ ಬಂದಿದ್ದರು. ಸದ್ಯ ರಿಷಭ್ ಪಂತ್ ತಂಡದಲ್ಲಿ ಉಳಿಸಿಕೊಂಡಿದ್ದು, ತಂಡಕ್ಕೆ ಒಬ್ಬನೇ ವಿಕೆಟ್ ಕೀಪರ್ ಇದ್ದಂತಾಗಿದೆ.