ದುಬೈ: ಇಲ್ಲಿನ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ಬುಧವಾರ ರಾಜಸ್ಥಾನ ರಾಯಲ್ಸ್ ವಿರುದ್ಧದ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವೇಗಿ ಅನ್ರಿಚ್ ನಾರ್ಟ್ಜ್ ಐಪಿಎಲ್ ಇತಿಹಾಸದಲ್ಲೇ ವೇಗದ ಎಸೆತವನ್ನು ಎಸೆದಿದ್ದಾರೆ.
ಡೆಲ್ಲಿ ಕ್ಯಾಪಿಟಲ್ಸ್ ಪರ ಬೌಲಿಂಗ್ ನಡೆಸಿದ ದಕ್ಷಿಣ ಆಫ್ರಿಕಾದ ವೇಗಿ ನಾರ್ಟ್ಜ್ ಮೂರನೇ ಓವರ್ನ ಮೊದಲ ಎಸೆತವನ್ನು148.2 ಕಿ.ಮೀ. ವೇಗದಲ್ಲಿ ಎಸೆದರು. ಈ ಎಸೆತದಲ್ಲಿ ಬಟ್ಲರ್ ಸಿಕ್ಸರ್ ಸಿಡಿಸಿದ್ರು. ನಂತರ ಕ್ರಮವಾಗಿ 152.3 ಕಿ.ಮೀ., 152.1 ಕಿ.ಮೀ., 146.4 ಕಿ.ಮೀ. ವೇಗದಲ್ಲಿ ಚೆಂಡು ಎಸೆದರು. 156.2 ಕಿ.ಮೀ. ವೇಗದಲ್ಲಿ ಎಸೆದ ಐದನೇ ಎಸೆತದಲ್ಲಿ ಬಟ್ಲರ್ ಬೌಂಡರಿ ಸಿಡಿಸಿದ್ರು. ಇದು ಐಪಿಎಲ್‌ನಲ್ಲಿ ಸಾರ್ವಕಾಲಿಕ ವೇಗದ ಎಸೆತ ಎಂಬ ದಾಖಲೆ ನಿರ್ಮಿಸಿದೆ.