ದುಬೈ : ಗಾಯದಿಂದ ವಿಶ್ರಾಂತಿ ಪಡೆಯುತ್ತಿರುವ ಟ್ರೆಂಟ್ ಬೌಲ್ಟ್, ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಐಪಿಎಲ್ ಫೈನಲ್ ಪಂದ್ಯದಲ್ಲಿ ಆಡುವ ಬಗ್ಗೆ ಮುಂಬೈ ಇಂಡಿಯನ್ಸ್ ತಂಡದ ಸ್ಕಿಪ್ಪರ್ ರೋಹಿತ್ ಶರ್ಮಾ ಆಶಾಭಾವನೆ ವ್ಯಕ್ತಪಡಿಸಿದ್ದಾರೆ.
ಮೊದಲ ಕ್ವಾಲಿಪೈರ್ ಪಂದ್ಯದ ವೇಳೆ ಎರಡು ಓವರ್ಗಳಲ್ಲಿ ಬೌಲ್ ಮಾಡಿದ ಟ್ರೆಂಟ್, ಬಳಿಕ ಫೀಲ್ಡ್ನಿಂದ ಹೊರ ನಡೆದಿದ್ದರು. ಈ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಸುಲಭವಾಗಿ ಗೆದ್ದಿತ್ತು.
ಟ್ರೆಂಟ್ ಫಿಟ್ನೆಸ್ ಬಗ್ಗೆ ವಿಚಾರಿಸಿದ್ದೇನೆ, ಅವರು ಚೇತರಿಸಿಕೊಳ್ಳುತ್ತಿದ್ದಾರೆ. ನಮ್ಮೊಂದಿಗೆ ಆಡಲಿದ್ದಾರೆ ಎಂಬ ಆಶಾಭಾವನೆಯನ್ನು ರೋಹಿತ್ ಶರ್ಮಾ ವ್ಯಕ್ತಪಡಿಸಿದ್ದಾರೆ. ಹೊಸ ಬೌಲಿಂಗ್ನೊಂದಿಗೆ ಟ್ರೆಂಟ್ ಉತ್ತಮ ಪ್ರದರ್ಶನ ನೀಡಲಿದ್ದಾರೆ. ಅವರ ತಂಡ ಯಾರನ್ನೂ ನಿರಾಶೆಗೊಳಿಸಿಲ್ಲ ಎಂದು ರೋಹಿತ್ ಹೇಳಿದ್ದಾರೆ.
ಈ ಬಾರಿಯ ಐಪಿಎಲ್ನಲ್ಲಿ ಅತೀ ಹೆಚ್ಚು ವಿಕೆಟ್ ಪಡೆದವರಲ್ಲಿ ಟ್ರೆಂಟ್ ಮೂರನೆಯವರಾಗಿದ್ದು, 22 ವಿಕೆಟ್ ಪಡೆದಿದ್ದಾರೆ. ಜಸ್ಪ್ರಿತ್ ಬುಮ್ರಾ 27 ವಿಕೆಟ್ ಪಡೆದವರಲ್ಲಿ ಎರಡನೆಯವರಾಗಿದ್ದು, ಡೆಲ್ಲಿ ಕ್ಯಾಪಿಟಲ್ಸ್ ವೇಗಿ ಕಗಿಸೊ ರಬಾಡಾ 29 ವಿಕೆಟ್ ಪಡೆದು ಮುಂಚೂಣಿಯಲ್ಲಿದ್ದಾರೆ.