ನವದೆಹಲಿ:ಕೊರೊನಾ ವೈರಸ್ ಸಾಂಕ್ರಾಮಿಕದ ಹೊರತಾಗಿಯೂ ಇಂಡಿಯನ್ ಪ್ರೀಮಿಯರ್ ಲೀಗ್ ನಡೆಯುತ್ತಿರುವ ಬಗ್ಗೆ ಡೆಲ್ಲಿ ಕ್ಯಾಪಿಟಲ್ಸ್ ಆಟಗಾರ ಅಲೆಕ್ಸ್ ಕ್ಯಾರಿ ಉತ್ಸುಕರಾಗಿದ್ದು, ಇಲ್ಲಿಗೆ ಬಂದು ಆಡಲು ಏನು ಬೇಕಾದರೂ ಮಾಡಲು ಸಿದ್ಧರಾಗಿರುವುದಾಗಿ ತಿಳಿಸಿದ್ದಾರೆ.
ವಿಷಮ ಪರಿಸ್ಥಿತಿಯಲ್ಲಿ ಇಲ್ಲಿಗೆ (ಯುಎಇ) ಬಂದು ಆಡುತ್ತಿರುವುದು ಅದ್ಭುತ ಯೋಚನೆ. ಅದಕ್ಕಾಗಿ ನಾವು ಆಟಗಾರರಿಗೆ ಧನ್ಯವಾದ ಹೇಳುತ್ತೇವೆ. ನಮಗಾಗಿ ಎಲ್ಲವನ್ನೂ ಒಟ್ಟುಗೂಡಿಸಿದ್ದಕ್ಕಾಗಿ ಎಲ್ಲರಿಗೂ ಧನ್ಯವಾದಗಳು. ನಾವು ಇಂಗ್ಲೆಂಡಿನಲ್ಲಿದ್ದಾಗ, ಬಯೋ ಬಬಲ್ನಲ್ಲಿ ಕಾಲ ಕಳೆದಿದ್ದೇವೆ. ಅದು ನಿಜವಾಗಿಯೂ ಉತ್ತಮವಾಗಿದೆ ಎಂದು ಕ್ಯಾರಿ ಹೇಳಿದ್ದಾರೆ.
ಇಂಗ್ಲೆಂಡ್ನಲ್ಲಿನ ಪಂದ್ಯದ ನಂತರ ವಿಮಾನದಲ್ಲಿ ಯುಎಇಗೆ ಆಗಮಿಸಿ 24 ಗಂಟೆಗಳ ಕಾಲ ದುಬೈನ ಹೋಟೆಲ್ನಲ್ಲಿ ಉಳಿದು ಕೋವಿಡ್ ಪರೀಕ್ಷೆ ಮಾಡಿಸಿದ್ದೇವೆ. ಇಲ್ಲಿಗೆ ಬರಲು ಮತ್ತು ಆಡಲು ನಾವು ಏನು ಬೇಕಾದರೂ ಮಾಡಲು ಸಿದ್ಧರಿದ್ದೇವೆ ಎಂದಿದ್ದಾರೆ. ಮೊದಲ ಪಂದ್ಯದಲ್ಲಿ ಉತ್ತಮ ಪ್ರದರ್ಶನ ತೋರಿದ ಮಾರ್ಕಸ್ ಸ್ಟೊಯ್ನಿಸ್ ಅವರ ಶ್ರೇಷ್ಠ ಫಾರ್ಮ್ ಅನ್ನು ಮುಂದುವರಿಸಬಹುದು ಎಂದು ಹೇಳಿದ್ದಾರೆ.
ಮೊದಲ ಐಪಿಎಲ್ ಪಂದ್ಯದಲ್ಲಿ ಬೆಂಚ್ ಕಾದಿದ್ದ ಕ್ಯಾರಿ ಸಹ ಆಟಗಾರ ಕಾಗಿಸೊ ರಬಾಡಾ ಬಗ್ಗೆ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ರಬಾಡಾ ಸೂಪರ್ ಓವರ್‌ನಲ್ಲಿ ಪಂಜಾಬ್ ಅನ್ನು ನಿರ್ಬಂಧಿಸಲು ಗಮನಾರ್ಹವಾದ ಪ್ರದರ್ಶನವನ್ನು ನೀಡಿದ್ದರು ಎಂದಿದ್ದಾರೆ.