ಐಪಿಎಲ್ ಅಂದ್ರೆ ಬೌಂಡರಿ, ಸಿಕ್ಸರ್‌ಗಳ ಅಬ್ಬರ, ಜನರ ಚೀರಾಟಗಳೇ ನೆನಪಿಗೆ ಬರುತ್ತವೆ. ಕೊರೊನಾ ಕಾರಣದಿಂದಾಗಿ ಮುನ್ನೆಚ್ಚರಿಕಾ ಕ್ರಮವಾಗಿ ಈ ವರ್ಷದ ಐಪಿಎಲ್ ಸೀಸನ್ ಅಭಿಮಾನಿಗಳಿಲ್ಲದೆ ಅಪೂರ್ಣವಾಗಿ ಕೊನೆಗೊಂಡಿದೆ. ಅಭಿಮಾನಿಗಳು ಮನೆಯಲ್ಲೇ ಕುಳಿತು ಟಿವಿ ಮೂಲಕ ಪಂದ್ಯಗಳನ್ನು ಎಂಜಾಯ್ ಮಾಡಿದ್ದರು.
ಈ ಹಿಂದಿನ ಸೀಸನ್‌ವೊಂದರಲ್ಲಿ ಶಾರ್ಜಾದಲ್ಲಿ ನಡೆದ ಪಂದ್ಯವೊಂದರಲ್ಲಿ ಧೋನಿ ಸಿಡಿಸಿದ ಸಿಕ್ಸರ್ ಅನ್ನು ಇದೀಗ ಗೂಗಲ್ ಗುರುತಿಸಿದೆ.
'ಧೋನಿ ಸಿಕ್ಸ್' ಗುರುತಿಸಿದ ಗೂಗಲ್ ಮ್ಯಾಪ್ ಹೌದು, ಶಾರ್ಜಾ ಸ್ಟೇಡಿಯಂನಲ್ಲಿ ಚೆನ್ನೈ ಸೂಪರ್ ಕಿಂಗ್ಸ್- ರಾಜಸ್ಥಾನ್ ರಾಯಲ್ಸ್ ನಡುವೆ ನಡೆದ ಮ್ಯಾಚ್ ಅದು. ಈ ಮ್ಯಾಚ್ನಲ್ಲಿ ಧೋನಿ ಬಾರಿಸಿದ ಸಿಕ್ಸರ್ ಪರಿಣಾಮ, ಚೆಂಡು ಸ್ಟೇಡಿಯಂ ಹೊರಗಡೆಯ ರಸ್ತೆಗೆ ಹೋಗಿ ಬಿದ್ದಿತ್ತು. ಆ ಚೆಂಡನ್ನು ಅಭಿಮಾನಿಯೋರ್ವ ತೆಗೆದುಕೊಂಡು ಹೋಗಿರುವುದು ಕ್ಯಾಮರಾದಲ್ಲಿ ರೆಕಾರ್ಡ್ ಆಗಿತ್ತು.
ಆದ್ರೆ ಇದೀಗ ಆ ಚೆಂಡು ಬಿದ್ದ ಜಾಗವನ್ನು ಗೂಗಲ್ ಮ್ಯಾಪ್ನಲ್ಲಿ ಅಭಿಮಾನಿಗಳು ಗುರುತಿಸಿ ಅದಕ್ಕೆ 'ಧೋನಿ ಸಿಕ್ಸ್' ನಾಮಕರಣ ಮಾಡಿದ್ದಾರೆ. ಅದಕ್ಕೆ ಗೂಗಲ್ನಿಂದ ಅನುಮತಿಯೂ ದೊರೆತಿದೆ. ಇದು ಧೋನಿ ಅಭಿಮಾನಿಗಳ ಸಂತೋಷವನ್ನು ಇಮ್ಮಡಿಗೊಳಿಸಿದೆ.
ಈ ಬಾರಿ ಏಪ್ರಿಲ್-ಮೇನಲ್ಲಿ ನಡೆದ ಐಪಿಎಲ್ ಪಂದ್ಯಗಳು ಕೆಲವು ಆಟಗಾರರಿಗೆ ಕೊರೊನಾ ಬಂದ ಕಾರಣದಿಂದಾಗಿ ಅರ್ಧಕ್ಕೆ ನಿಂತುಹೋಯಿತು. ಉಳಿದ ಪಂದ್ಯಗಳನ್ನು ಯುಎಇನಲ್ಲಿ ಸಪ್ಟೆಂಬರ್-ಅಕ್ಟೋಬರ್ನಲ್ಲಿ ಮುಂದುವರೆಸುವ ಯೋಜನೆಯನ್ನು ಬಿಸಿಸಿಐ ಹಾಕಿಕೊಂಡಿದೆ.