ಜೈಪುರ: ಮಹಿಳಾ ಐಪಿಎಲ್ನ ಮಿನಿ ಲೀಗ್ನಲ್ಲಿ ಮಿಥಾಲಿ ರಾಜ್ ಹಾಗೂ ಹರ್ಮನ್ ಪ್ರೀತ್ ಕೌರ್ ನೇತೃತ್ವದ ತಂಡಗಳು ಇಂದು ಜೈಪುರದಲ್ಲಿ ನಡೆಯುವ ಫೈನಲ್ನಲ್ಲಿ ಸೆಣಸಾಡಲಿವೆ.
ಮೂರು ತಂಡಗಳ ಈ ಮಿನಿಲೀಗ್ನಲ್ಲಿ ಮೂರು ತಂಡಗಳು ತಲಾ ಒಂದು ಗೆಲುವು ಹಾಗೂ ಒಂದು ಸೋಲು ಕಂಡಿದ್ದವು. ಆದರೆ, ರನ್ರೇಟ್ ಆಧಾರದ ಮೇಲೆ ಹರ್ಮನ್ ಪ್ರೀತ್ ಕೌರ್ ನೇತೃತ್ವದ ಸೂಪರ್ ನೊವಾಸ್ ಪ್ರಥಮ ಸ್ಥಾನ ಪಡೆದರೆ, ಮಿಥಾಲಿರಾಜ್ ನೇತೃತ್ವದ ವೆಲೋಸಿಟಿ 2ನೇ ಸ್ಥಾನ ಪಡೆದು ಪೈನಲ್ ಲಗ್ಗೆಯಿಟ್ಟವು.
ಮೊದಲ ಪಂದ್ಯದಲ್ಲೇ ಗೆದ್ದು ಬೀಗಿದ್ದ ಸ್ಮೃತಿ ಮಂಧಾನ ನೇತೃತ್ವದ ಟ್ರೈಬ್ಲೇಜರ್ ತಂಡ ಎರಡನೇ ಪಂದ್ಯದಲ್ಲಿ ಕೇವಲ 113 ರನ್ಗಳ ಟಾರ್ಗೆಟ್ ನೀಡಿತ್ತು. ಈ ಮೊತ್ತವನ್ನು ವೆಲೋಸಿಟಿ ಇನ್ನು 2 ಓವರ್ ಇರುವಂತೆಯೇ ಗುರಿ ತಲುಪುವ ಮೂಲಕ ಉತ್ತಮ ರನ್ರೇಟ್ ಪಡೆದಿತ್ತು. ಇದರಿಂದ ತನ್ನ 2 ನೇ ಪಂದ್ಯದಲ್ಲಿ 12 ರನ್ಗಳಿಂದ ಸೋತರೂ 2 ನೇಸ್ಥಾನ ಪಡೆದು ಫೈನಲ್ ಪ್ರವೇಶಿಸಿದೆ.