ಚೆನ್ನೈ: ಇಂದು ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ದೆಹಲಿ ಕ್ಯಾಪಿಟಲ್ಸ್ ವಿರುದ್ಧ ಇಂದು ಮಹತ್ವದ ಪಂದ್ಯ ನಡೆಯಲಿದೆ. ಈ ನಡುವೆ, ದೆಹಲಿ ಕ್ಯಾಪಿಟಲ್ಸ್ ತಂಡದ ಮೆಂಟರ್ ಆಗಿರುವ ಮಾಜಿ ನಾಯಕ ಸೌರವ್ ಗಂಗೂಲಿ, ಮುಂದಿನ ವಿಶ್ವಕಪ್ ಬಗ್ಗೆ ಮಾತನಾಡಿದ್ದು, ವಿಂಡೀಸ್ನ ಆ್ಯಂಡ್ರೆ ರಸೆಲ್ ವಿಶ್ವಕಪ್ನ ಡಾರ್ಕ್ ಹಾರ್ಸ್ ಆಗುವುದು ಪಕ್ಕಾ ಎಂದು ಭವಿಷ್ಯ ನುಡಿದಿದ್ದಾರೆ.
ಇನ್ನು ವಿಶ್ವಕಪ್ ಟೂರ್ನಿಯಲ್ಲಿ ಭಾರತ ತಂಡದಲ್ಲಿ ನಾಲ್ಕನೇ ಕ್ರಮಾಂಕದಲ್ಲಿ ಯುವ ಆಟಗಾರ ವಿಜಯ್ ಶಂಕರ್ ಅತ್ಯುತ್ತಮ ಆಟಗಾರ ಆಗಬಲ್ಲರು ಎಂದಿರುವ ಸೌರವ್ ಗಂಗೂಲಿ, ಈ ಹಿಂದೆ ನ್ಯೂಜಿಲ್ಯಾಂಡ್, ಆಸ್ಟ್ರೇಲಿಯಾ ನೆಲದಲ್ಲಿ ನಡೆದ ಸರಣಿಯಲ್ಲಿ ಏನೇ ಆಗಿರಲಿ, ವಿಜಯ್ ಶಂಕರ್ ಅತ್ಯುತ್ತಮ ತಾಂತ್ರಿಕ ಕೌಸಲ ಹೊಂದಿದ್ದಾನೆ. ಮತ್ತೆ ಇಂಗ್ಲೆಂಡ್ನಲ್ಲಿ ಆತನ ಬೌಲಿಂಗ್ ನೆರವಿಗೆ ಬರಲಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ ಗಂಗೂಲಿ