ಬೆಂಗಳೂರು:ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಆರ್ಸಿಬಿ ಮತ್ತು ರಾಜಸ್ಥಾನ ನಡುವಿನ ಪಂದ್ಯ ಮಳೆಯಿಂದ ರದ್ದಾಗಿದ್ದು, ಎರಡು ತಂಡಗಳಿಗೆ ತಲಾ ಒಂದೊಂದು ಅಂಕ ನೀಡಲಾಗಿದೆ.
ಮಳೆಯ ಕಾರಣದಿಂದ ಪಂದ್ಯವನ್ನ 5 ಓವರ್ಗಳಿಗೆ ಕಡಿತಗೊಳಿಸಲಾಗಿತ್ತು. ಪರಿಣಾಮ ಮೊದಲ ಓವರ್ನಲ್ಲೇ ಅಬ್ಬರಿಸಿದ ಕೊಹ್ಲಿ-ಎಬಿಡಿ ಜೋಡಿ 23 ರನ್ ಪೇರಿಸಿದರು. ಗೋಪಾಲ್ ಎಸೆದ ಎರಡನೇ ಓವರ್ನಲ್ಲಿ ಮೊದಲೆರಡು ಎಸೆತಗಳಲ್ಲಿ ಬೌಂಡರಿ-ಸಿಕ್ಸರ್ ಸಿಡಿಸಿದ ಕೊಹ್ಲಿ(25) ಮೂರನೇ ಎಸೆತದಲ್ಲಿ ಕ್ಯಾಚ್ ನೀಡಿದರು. ನಂತರ 2 ಎಸೆತಗಳಲ್ಲಿ ಎಬಿಡಿ(10) ಹಾಗೂ ಸ್ಟೋಯ್ನಿಸ್(0) ಕೂಡ ಕ್ಯಾಚ್ ನೀಡಿ ಔಟಾದರು. ಶ್ರೇಯಸ್ ಗೋಪಾಲ್ ಹ್ಯಾಟ್ರಿಕ್ ವಿಕೆಟ್ ಪಡೆಯುವ ಮೂಲಕ ಮತ್ತೊಮ್ಮೆ ಆರ್ಸಿಬಿ ಪಾಲಿಗೆ ಕಂಟಕರಾದರು.
ಮೂರನೇ ಓವರ್ ಎಸೆದ ರಿಯಾನ್ ಪರಾಗ್ 10 ರನ್ ಬಿಟ್ಟುಕೊಟ್ಟು 6 ರನ್ಗಳಿಸಿದ್ದ ಗುರುಕಿರಾತ್ ವಿಕೆಟ್ ಪಡೆದರು. 4 ನೇ ಓವರ್ನಲ್ಲಿ ಉನಾದ್ಕಟ್ 9 ರನ್ ನೀಡಿ ಪಾರ್ಥೀವ್ ಪಟೇಲ್ ವಿಕೆಟ್ ಪಡೆದರು. ಕೊನೆಯ ಓವರ್ ಎಸೆದ ಒಸಾನೆ ಥಾಮಸ್ 6 ರನ್ ನೀಡಿ 2 ವಿಕೆಟ್ ಪಡೆದುಕೊಂಡರು.