ಮುಂಬೈ : ಇಲ್ಲಿನ ವಾಂಖೆಡೆ ಸ್ಟೇಡಿಯಂನಲ್ಲಿ ಮುಂಬೈ ಹಾಗೂ ಹೈದರಾಬಾದ್ ನಡುವೆ ನಡೆದ ಐಪಿಎಲ್ ಪಂದ್ಯಸೂಪರ್ ಓವರ್ನಲ್ಲಿ ಅಂತ್ಯ ಕಂಡಿದ್ದು, ರೋಹಿತ್ ಪಡೆಗೆದ್ದು ಬೀಗಿದೆ.
ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಮುಂಬೈ ಇಂಡಿಯನ್ಸ್ ತಂಡ ನಿಗದಿತ 20 ಓವರ್ ಗಳಲ್ಲಿ 5 ವಿಕೆಟ್ ನಷ್ಟಕ್ಕೆ 162 ರನ್ ಗಳಿಸಿತ್ತು. ಮುಂಬೈ ಪರ ಕ್ವಿಂಟನ್ ಡಿ ಕಾಕ್ 69, ರೋಹಿತ್ ಶರ್ಮಾ 24, ಸೂರ್ಯಕುಮಾರ್ ಯಾದವ್ 23 ರನ್ಗಳಿಸಿದ್ರು. ಸನ್ ರೈಸರ್ಸ್ ತಂಡದ ಪರ ಕಲೀಲ್ ಅಹ್ಮದ್ 3, ಭುವನೇಶ್ವರ್ ಕುಮಾರ್ ಮತ್ತು ಮಹಮದ್ ನಬಿ 1 ವಿಕೆಟ್ ಪಡೆದು ಮಿಂಚಿದ್ರು.
163 ರನ್ಗಳ ಗುರಿ ಬೆನ್ನತ್ತಿದ ಸನ್ ರೈಸರ್ಸ್ ಹೈದರಾಬಾದ್ ತಂಡ ಆರಂಭದಲ್ಲಿ ಭರ್ಜರಿಯಾಗಿ ರನ್ಗಳಿಸಿತು. ಆದ್ರೆ ವಿಕೆಟ್ ಬೀಳುತಿದ್ದಂತೆ ಕ್ರಮೇಣವಾಗಿ ರನ್ ಗಳಿಸಿಲು ಪರದಾಡಿತು. ಈ ವೇಳೆ ಸನ್ ರೈಸರ್ಸ್ ತಂಡಕ್ಕೆ ಆಸರೆಯಾದ ಮನಿಷ್ ಪಾಂಡೆ 71 ರನ್ ಗಳಿಸಿ ಪಂದ್ಯವನ್ನ ಡ್ರಾ ಮಾಡುವಲ್ಲಿ ಯಶಸ್ವಿಯಾದ್ರು.
ಅಂತಿಮವಾಗಿ ಸೂಪರ್ ಓವರ್ನಲ್ಲಿ ಹೈದರಾಬಾದ್ ತಂಡ 0.4 ಓವರ್ಗಳಲ್ಲಿ 2 ವಿಕೆಟ್ ಕಳೆದುಕೊಂಡು 8 ರನ್ ಗಳಿಸಿತು. ಮುಂಬೈ ಇಂಡಿಯನ್ಸ್ ತಂಡ 0.3 ಓವರ್ಗಳಲ್ಲಿ 9 ರನ್ ಗಳಿಸುವ ಮೂಲಕ ಸನ್ ರೈಸರ್ಸ್ ತಂಡವನ್ನು ಮಣಿಸಿತು. ಮುಂಬೈ ಪರ ಸೂಪರ್ ಸ್ಪೆಲ್ ಮಾಡಿದ ಜಸ್ಪ್ರಿತ್ ಬಮ್ರಾ ಪಂದ್ಯ ಶೇಷ್ಠ ಪ್ರಶಸ್ತಿಗೆ ಭಾಜನರಾದ್ರು.