ಕರ್ನಾಟಕ

karnataka

ETV Bharat / sports

ಎರಡು ಪಂದ್ಯದಿಂದ ಧೋನಿಯನ್ನು ನಿಷೇಧಿಸಿ... ಸಿಎಸ್​ಕೆ ನಾಯಕನ ವರ್ತನೆ ಖಂಡಿಸಿದ ವೀರು - ವೀರೆಂದ್ರ ಸೆಹ್ವಾಗ್​​

ಮೈದಾನದಲ್ಲಿ ಅತ್ಯಂತ ತಾಳ್ಮೆಯಿಂದ ವರ್ತಿಸುವ ಎಂ.ಎಸ್​.ಧೋನಿ ರಾಜಸ್ಥಾನ ರಾಯಲ್ಸ್​​ ವಿರುದ್ಧ ಪಂದ್ಯದ ಕೊನೆಯಲ್ಲಿ ಅಂಪೈರ್​ಗಳ ಎಡವಟ್ಟವನ್ನು ಪ್ರಶ್ನಿಸಿ ನೇರವಾಗಿ ಕ್ರೀಸ್​​ನತ್ತ ಆಗಮಿಸಿ ಆಕ್ರೋಶ ಹೊರಹಾಕಿದ್ದರು.

ವೀರು

By

Published : Apr 14, 2019, 10:48 AM IST

ಹೈದರಾಬಾದ್: ಜೈಪುರದ ಸವಾಯ್ ಮಾನ್​​ಸಿಂಗ್​ ಸ್ಟೇಡಿಯಂನಲ್ಲಿ ಚೆನ್ನೈ ಸೂಪರ್​ ಕಿಂಗ್ಸ್ ಹಾಗೂ ರಾಜಸ್ಥಾನ ರಾಯಲ್ಸ್​ ನಡುವಿನ ಪಂದ್ಯ ಕೊನೇ ಕ್ಷಣದಲ್ಲಿ ಒಂದಷ್ಟು ಗೊಂದಲ ಹಾಗೂ ಆಕ್ರೋಶಕ್ಕೆ ಕಾರಣವಾಗಿತ್ತು.

ಮೈದಾನದಲ್ಲಿ ಅತ್ಯಂತ ತಾಳ್ಮೆಯಿಂದ ವರ್ತಿಸುವ ಎಂ.ಎಸ್​.ಧೋನಿ ರಾಜಸ್ಥಾನ ರಾಯಲ್ಸ್​​ ವಿರುದ್ಧ ಪಂದ್ಯದ ಕೊನೆಯಲ್ಲಿ ಅಂಪೈರ್​ಗಳ ಎಡವಟ್ಟವನ್ನು ಪ್ರಶ್ನಿಸಿ ನೇರವಾಗಿ ಕ್ರೀಸ್​​ನತ್ತ ಆಗಮಿಸಿ ಆಕ್ರೋಶ ಹೊರಹಾಕಿದ್ದರು.

ಅಂಪೈರ್​​ಗಳ ಜೊತೆ ವಾಗ್ವಾದ ನಡೆಸುತ್ತಿರುವ ಎಂ.ಎಸ್​.ಧೋನಿ

ಇದೇ ವಿಚಾರವಾಗಿ ಪ್ರತಿಕ್ರಿಯಿಸಿರುವ ಟೀಮ್ ಇಂಡಿಯಾದ ಮಾಜಿ ಆಟಗಾರ ವೀರೆಂದ್ರ ಸೆಹ್ವಾಗ್​​, "ಧೋನಿ ಟೀಮ್ ಇಂಡಿಯಾದಲ್ಲಿ ಇಷ್ಟೊಂದು ಕೋಪದಲ್ಲಿ ವರ್ತಿಸಿದ್ದರೆ ನಾನು ಖುಷಿ ಪಡುತ್ತಿದ್ದೆ, ಆದರೆ ಇಂತಹ ಟೂರ್ನಮೆಂಟ್​ಗಳಲ್ಲಿ ಈ ರೀತಿಯ ವರ್ತನೆ ಅಗತ್ಯವಿಲ್ಲ" ಎಂದಿದ್ದಾರೆ.

"ನಿವೃತ್ತಿಯ ಸನಿಹದಲ್ಲಿ ಧೋನಿ ಈ ರೀತಿ ವರ್ತಿಸಬಾರದು. ಸಿಎಸ್​ಕೆ ನಾಯಕನ ನಿಯಮ ಉಲ್ಲಂಘನೆಯ ನಡತೆಗೆ ಒಂದು ಅಥವಾ ಎರಡು ಪಂದ್ಯಗಳಿಂದ ನಿಷೇಧ ಮಾಡಬೇಕು. ಮುಂದಿನ ದಿನಗಳಲ್ಲಿ ಯಾರೂ ಸಹ ಈ ರೀತಿಯಾಗಿ ವರ್ತಿಸಬಾರದು" ಎಂದು ಖಡಕ್​​ ಆಗಿ ಸೆಹ್ವಾಗ್​ ತನ್ನ ಅಭಿಪ್ರಾಯ ತಿಳಿಸಿದ್ದಾರೆ.

ABOUT THE AUTHOR

...view details