ಚೆನ್ನೈ: ಕ್ಯಾಪ್ಟನ್ ಕೂಲ್ ಎಂದು ಕರೆಸಿಕೊಳ್ಳುವ ಧೋನಿ ಎಂತಹ ಸಂದಿಗ್ಧ ಸನ್ನಿವೇಶದಲ್ಲೂ ತಾಳ್ಮೆ ಕಳೆದುಕೊಂಡದ್ದು ತೀರಾ ಕಡಿಮೆ. ತಮ್ಮ ತಾಳ್ಮೆಯಿಂದಲೇ ಹೆಸರುವಾಸಿಯಾದ ಎಂ.ಎಸ್ ಧೋನಿ ನಿನ್ನೆ ಚೆನೈ ಸೂಪರ್ ಕಿಂಗ್ಸ್ ಹಾಗೂ ಕಿಂಗ್ಸ್ XI ಪಂಜಾಬ್ ನಡುವೆ ನಡೆದ ಐಪಿಎಲ್ ಪಂದ್ಯದಲ್ಲಿ ಗರಂ ಆಗಿದ್ದು ಕಂಡುಬಂತು.
ಕ್ಯಾಪ್ಟನ್ ಕೂಲ್ ಧೋನಿ ಒಮ್ಮೊಮ್ಮೆ ಗರಂ ಆಗ್ತಾರೆ, ಅದ್ಹೇಗಿರುತ್ತೆ ನೋಡಿ.. - ದೀಪಕ್ ಚಹರ್
ಐಪಿಎಲ್ನಲ್ಲಿ ನೋಬಾಲ್ ಹಾಕಿದ ದೀಪಕ್ ಚಹರ್ ಮೇಲೆ ಧೋನಿ ಗರಂ ಆಗಿದ್ದ ವಿಡಿಯೋ ಈಗ ವೈರಲ್ ಆಗಿದೆ.
ಅಂದಹಾಗೆ, ಧೋನಿ ಗರಂ ಆಗಲು ಕಾರಣ ಬೌಲರ್ ದೀಪಕ್ ಚಹರ್. ನಿನ್ನೆಯ ಆಕರ್ಷಕ ಪಂದ್ಯದ ಕೊನೆಯ ಓವರ್ಗಳಲ್ಲಿ ಪಂಜಾಬ್ 12 ಬಾಲ್ಗಳಲ್ಲಿ 39 ರನ್ಗಳನ್ನ ಕಲೆಹಾಕಬೇಕಿತ್ತು. ಈ ವೇಳೆ ಬೌಲಿಂಗ್ಗೆ ಇಳಿದ ದೀಪಕ್ ಚಹರ್, ತಮ್ಮ ಓವರ್ನಲ್ಲಿ ಒಂದರ ಹಿಂದೆ ಒಂದರಂತೆ ನೋ ಬಾಲ್ಗಳನ್ನು ಎಸೆದರು. ಇದರಿಂದ ಕಸಿವಿಸಿಕೊಂಡ ಧೋನಿ ಕೂಡಲೇ ಚಹರ್ ಬಳಿ ಬಂದು ಗಂಭೀರ ಚರ್ಚೆ ನಡೆಸಿದರು.
ಚಹರ್ ಬಳಿ ಮಾತನಾಡುವಾಗ ಧೋನಿ ಗರಂ ಆಗಿದ್ದರು. ಅವರ ಮುಖದಲ್ಲಿ ಕೋಪ ಕಾಣಿಸುತ್ತಿತ್ತು. ಆ ಕ್ಷಣ ಚಹರ್ ಕೂಡ ಮುಜಗರಕ್ಕೆ ಒಳಗಾಗಿದ್ದರು. ತಕ್ಷಣ ಚುರುಕುಗೊಂಡ ಚಹರ್ ಅಪಾಯಕಾರಿ ಆಟಗಾರ ಡೇವಿಡ್ ಮಿಲ್ಲರ್ನ ವಿಕೆಟ್ ಕಿತ್ತು, ಸ್ವತಃ ಧೋನಿಗೇ ಶಾಕ್ ನೀಡಿದರು. ಇದರಿಂದ ಸಂಕಷ್ಟಕ್ಕೆ ಸಿಲುಕಿದ ಪಂಜಾಬ್ 22 ರನ್ಗಳಿಂದ ಸೋಲು ಕಾಣುವಂತಾಯ್ತು.