ನವದೆಹಲಿ: ಈ ಬಾರಿಯ ಐಪಿಎಲ್ನಲ್ಲಿ ಆಡಿದ ಐದೂ ಪಂದ್ಯಗಳಲ್ಲಿ ಸೋಲುಂಡಿರುವ ಆರ್ಸಿಬಿ, ಅಭಿಮಾನಿಗಳಿಗೆ ಭಾರಿ ನಿರಾಸೆ ಮೂಡಿಸಿದೆ. ನಿನ್ನೆ ಪಂದ್ಯದ ಸೋಲಿಗೆ ಬೌಲರ್ಗಳು ಕಾರಣ ಎಂಬರ್ಥದಲ್ಲಿ ಕ್ಯಾಪ್ಟನ್ ವಿರಾಟ್ ಕೊಹ್ಲಿ ಅಸಮಾಧಾನ ಹೊರಹಾಕಿದ್ದಾರೆ.
ಈ ಪಂದ್ಯವನ್ನು ಸೋಲ್ತೀವಿ ಅಂದುಕೊಂಡೇ ಇರಲಿಲ್ಲ. ಕೊನೆಯ ನಾಲ್ಕು ಓವರ್ಗಳಲ್ಲಿನ ಬೌಲಿಂಗ್ ಅಂತೂ ಒಪ್ಪಲಾಗದು. ಐಪಿಎಲ್ನಲ್ಲಿ ನಾವು ನಿಜವಾಗಿ ತೋರಿಸಬೇಕಿರುವ ಆಟ ಆಡಲಾಗ್ತಿಲ್ಲ. ಸಾಕಷ್ಟು ಧೈರ್ಯವಿಲ್ಲದೇ ಈ ರೀತಿ ಬೌಲಿಂಗ್ ಮಾಡಿದರೆ ಅಂಗಳದಲ್ಲಿ ರಸಲ್ನಂತಹ ಹೊಡಿಬಡಿ ಆಟಗಾರನಿದ್ದಾಗ ನಮಗೆ ತೀರ ಕಠಿಣ ಎನಿಸುತ್ತದೆ ಎಂದು ಹೇಳಿಕೊಂಡಿದ್ದಾರೆ.