ಕರ್ನಾಟಕ

karnataka

ETV Bharat / sports

ನಿಧಾನಗತಿಯ ಬೌಲಿಂಗ್​: ಆರ್​ಸಿಬಿ ನಾಯಕನಿಗೆ ಬಿತ್ತು ದಂಡ..! - ದಂಡ

ಐಪಿಎಲ್​​​ ನಿಯಮದಂತೆ ಒವರ್​​ ರೇಟ್​ ಕಾಯ್ದುಕೊಳ್ಳುವಲ್ಲಿ ವಿರಾಟ್ ಕೊಹ್ಲಿ ವಿಫಲವಾದ ಕಾರಣ ದಂಡ ತೆರಬೇಕಾಗಿದೆ.

ವಿರಾಟ್ ಕೊಹ್ಲಿ

By

Published : Apr 14, 2019, 10:18 AM IST

ಮೊಹಾಲಿ: ಸತತ ಆರು ಪಂದ್ಯಗಳ ಸೋಲಿನಿಂದ ಕಂಗೆಟ್ಟಿದ್ದ ರಾಯಲ್​ ಚಾಲೆಂಜರ್ಸ್​ ಬೆಂಗಳೂರು ಶನಿವಾರ ಕಿಂಗ್ಸ್​ ಇಲೆವೆನ್ ಪಂಜಾಬ್​ ವಿರುದ್ಧದ ಮ್ಯಾಚ್​ನಲ್ಲಿ ಗೆಲುವಿನ ನಗೆ ಬೀರಿದೆ.

ಈ ಪಂದ್ಯದ ವೇಳೆ ನಿಧಾನಗತಿಯ ಬೌಲಿಂಗ್​​ ಮಾಡಿದ್ದಕ್ಕಾಗಿ ಆರ್​​ಸಿಬಿ ನಾಯಕ ವಿರಾಟ್​​ ಕೊಹ್ಲಿಗೆ 12 ಲಕ್ಷ ದಂಡ ವಿಧಿಸಲಾಗಿದೆ.

ಐಪಿಎಲ್​​​ ನಿಯಮದಂತೆ ಒವರ್​​ ರೇಟ್​ ಕಾಯ್ದುಕೊಳ್ಳುವಲ್ಲಿ ವಿರಾಟ್ ಕೊಹ್ಲಿ ವಿಫಲವಾದ ಕಾರಣ ದಂಡ ತೆರಬೇಕಾಗಿದೆ.

ಆರ್​ಸಿಬಿ ಹಾಗೂ ಕಿಂಗ್ಸ್​ ಇಲವೆನ್ ಪಂಜಾಬ್​​ ವಿರುದ್ಧದ ಪಂದ್ಯದಲ್ಲಿ ಆತಿಥೇಯರು ನೀಡಿದ 174 ರನ್​ಗಳ ಗುರಿಯನ್ನು ಆರ್​ಸಿಬಿ ಎರಡೇ ವಿಕೆಟ್​ ನಷ್ಟದಲ್ಲಿ ಪೂರೈಸಿ ಈ ಆವೃತ್ತಿಯಲ್ಲಿ ಚೊಚ್ಚಲ ಗೆಲುವು ಸಾಧಿಸಿದೆ.

ABOUT THE AUTHOR

...view details