ಕರ್ನಾಟಕ

karnataka

ETV Bharat / sports

ಕೊನೆಯ 17 ಎಸೆತದಲ್ಲಿ 8 ರನ್​, 7 ವಿಕೆಟ್​​: ಕರ್ರನ್​ ಹ್ಯಾಟ್ರಿಕ್​ ದಾಳಿಗೆ ಮ್ಯಾಚ್​ ಕೈಚೆಲ್ಲಿದ ಶ್ರೇಯಸ್​ ಪಡೆ! - ipl

ಕರ್ರನ್ ಹ್ಯಾಟ್ರಿಕ್ ದಾಳಿಗೆ ತತ್ತರಿಸಿದ ಡೆಲ್ಲಿ. ಅಶ್ವಿನ್ ಪಡೆಯ ಕರಾರುವಕ್ಕಾದ ಬೌಲಿಂಗ್ ದಾಳಿಗೆ ಗೆಲ್ಲುವ ಅವಕಾಶ ಕೈಚೆಲ್ಲಿದ ಶ್ರೇಯಸ್ ಟೀಂ. 17 ಎಸೆತಗಳಲ್ಲಿ 7 ವಿಕೆಟ್ ಕಬಳಿಸಿ ಅಚ್ಚರಿ ಮೂಡಿಸಿದ ಪಂಜಾಬ್.

ಹ್ಯಾಟ್ರಿಕ್ ವಿಕೆಟ್ ಪಡೆದ ಕರ್ರನ್.

By

Published : Apr 2, 2019, 12:25 AM IST

ಮೊಹಾಲಿ: ಇಂಡಿಯನ್​ ಪ್ರೀಮಿಯರ್​ ಲೀಗ್​ನ ಡೆಲ್ಲಿ ಕ್ಯಾಪಿಟಲ್​ ವಿರುದ್ಧದ ಪಂದ್ಯದಲ್ಲಿ ಪಂಜಾಬ್​ 14ರನ್​ಗಳ ಭರ್ಜರಿ ಗೆಲುವು ದಾಖಲು ಮಾಡಿದೆ. ಅಶ್ವಿನ್ ಪಡೆಯ ಬೌಲಿಂಗ್​ ದಾಳಿಗೆ ದಿಢೀರ್​ ಕುಸಿತ ಕಂಡ ಶ್ರೇಯಸ್​ ಅಯ್ಯರ್ ಪಡೆ ಸೋತು ನಿರಾಸೆಗೊಳಗಾಗಿದೆ.

ಟಾಸ್​ ಸೋತು ಮೊದಲು ಬ್ಯಾಟಿಂಗ್​ ನಡೆಸಿದ ಪಂಜಾಬ್​ ತಂಡ ಗೇಲ್​ ಅಲಭ್ಯ ನಡುವೆ ಕೂಡ 20 ಓವರ್​ಗಳಲ್ಲಿ 8 ವಿಕೆಟ್​​ನಷ್ಟಕ್ಕೆ 166ರನ್ ​ಗಳಿಕೆ ಮಾಡಿತು. ತಂಡದ ಪರ ಸರ್ಫರಾಜ್​​(39), ಮಿಲ್ಲರ್​​​(43)ರನ್ ​ಗಳಿಸಿದರು.

ಗುರಿ ಬೆನ್ನತ್ತಿದ್ದ ಪಂಜಾಬ್​ ತಂಡ, ಅಶ್ವಿನ್​ ಎಸೆದ ಮೊದಲ ಓವರ್​ನ ಫಸ್ಟ್​ ಎಸೆತದಲ್ಲೇ ಪೃಥ್ವಿ ವಿಕೆಟ್ ಕಳೆದುಕೊಂಡಿತು. ಇದಾದ ಬಳಿಕ ಒಂದಾದ ಧವನ್​​ ಕ್ಯಾಪ್ಟನ್​ ಅಯ್ಯರ್​ ಜೋಡಿ ತಂಡಕ್ಕೆ ಉತ್ತಮ ಬುನಾದಿ ಹಾಕಿದರು. ಧವನ್​(30), ಶ್ರೇಯಸ್​ (28)ರನ್ ​ಗಳಿಸಿದರು.

ಅಯ್ಯರ್​ ವಿಕೆಟ್​ ಬೀಳುತ್ತಿದ್ದಂತೆ ಕಣಕ್ಕಿಳಿದ ಪಂತ್​ ಕೂಡ ಉತ್ತಮವಾಗಿ ಆಡಿದರು. 39 ರನ್ ​ಗಳಿಸಿದ್ದ ವೇಳೆ ಶಮಿ ಓವರ್​​ನಲ್ಲಿ ಸಿಕ್ಸರ್​ ಸಿಡಿಸುವ ಅವಸರದಲ್ಲಿ ಕ್ಲೀನ್​ ಬೊಲ್ಡ್​ ಆದರು. ಇದೇ ವೇಳೆ ಇನ್​ಗ್ರಾಮ್​(38)ಕೂಡ ಕರ್ರನ್​ ಓವರ್​​ನಲ್ಲಿ ವಿಕೆಟ್​ ಒಪ್ಪಿಸುತ್ತಿದ್ದಂತೆ ತಂಡ ಅಘಾತಕ್ಕೊಳಗಾಯಿತು.

ಬಳಿಕ ಬಂದ ಯಾವೊಬ್ಬ ಬ್ಯಾಟ್ಸ್​ಮನ್​ ಕೂಡ ಪಂಜಾಬ್​ ಬೌಲರ್​ಗಳನ್ನ ಎದುರಿಸಲು ಸಾಧ್ಯವಾಗಲಿಲ್ಲ. ಮೊರಿಸ್​​(0), ಹನುಮ ವಿಹಾರಿ(2), ಪಟೇಲ್​​(0), ರಬಾಡಾ(0), ಸಂದೀಪ್​​(0)ರನ್​ಗಳಿಸಿ ವಿಕೆಟ್​ ಒಪ್ಪಿಸಿದರು. ಕೊನೆಯದಾಗಿ 9.2 ಓವರ್​ಗಳಲ್ಲಿ ತನ್ನೆಲ್ಲ ವಿಕೆಟ್​ ಕಳೆದುಕೊಂಡು 152ರನ್​ ಮಾತ್ರ ಪೇರಿಸಿ, 14 ರನ್​ಗಳ ಸೋಲನುಭವಿಸುವಂತಾಯಿತು.

ಸುಲಭವಾಗಿ ಗೆಲುವಿನ ನಿರೀಕ್ಷೆಯಲ್ಲಿದ್ದ ಡೆಲ್ಲಿ ತಂಡಕ್ಕೆ ಸ್ಯಾಮ್​ ಕರ್ರನ್ ಮಾರಕವಾದರು. 2.2 ಓವರ್​​ನಲ್ಲಿ 11ರನ್​ ನೀಡಿ ಹ್ಯಾಟ್ರಿಕ್​ ಸೇರಿ ಪ್ರಮುಖ ನಾಲ್ಕು ವಿಕೆಟ್​ ಪಡೆದು ಸ್ಯಾಮ್ ಮಿಂಚಿದರು. ವಿಶೇಷವೆಂದರೆ ಡೆಲ್ಲಿ ಕೊನೆಯ 17 ಎಸೆತಗಳಲ್ಲಿ 8ರನ್ ​ಗಳಿಸಿ ಪ್ರಮುಖ ಏಳು ವಿಕೆಟ್​ ಕಳೆದುಕೊಂಡಿತು.

For All Latest Updates

TAGGED:

ipl

ABOUT THE AUTHOR

...view details