ಕರ್ನಾಟಕ

karnataka

ETV Bharat / sports

ಹುತಾತ್ಮ ಯೋಧರ ಕುಟುಂಬಕ್ಕೆ ಬಿಸಿಸಿಐ ₹ 20 ಕೋಟಿ, ₹ಸಿಎಸ್‌ಕೆ 2 ಕೋಟಿ ರೂ. ನೆರವು

ಇಂಡಿಯನ್​ ಪ್ರೀಮಿಯರ್​ ಲೀಗ್​​ ಉದ್ಘಾಟನಾ ಪಂದ್ಯದಿಂದ ಬಂದ 2 ಕೋಟಿ ರೂಪಾಯಿನ್ನ ಸಿಎಸ್‌ಕೆ ತಂಡ ಹುತಾತ್ಮ ಯೊಧರ ಕುಟುಂಬಕ್ಕೆ ನೀಡಿದೆ.

ಹುತಾತ್ಮ ಯೋಧರ ಕಟುಂಬಕ್ಕೆ 2 ಕೋಟಿ ನೀಡಿದ ಸಿಎಸ್​ಕೆ

By

Published : Mar 24, 2019, 5:34 PM IST

ಚೆನ್ನೈ:ಐಪಿಎಲ್​ ಉದ್ಘಾಟನಾ ಪಂದ್ಯದಿಂದ ಬಂದ ಸುಮಾರು 2 ಕೋಟಿ ರೂಪಾಯಿಯನ್ನು ಸಿಎಸ್​ಕೆ ತಂಡದ ಆಡಳಿತ ಮಂಡಳಿ ಪುಲ್ವಾಮಾ ಉಗ್ರರ ದಾಳಿಯಲ್ಲಿ ಹುತಾತ್ಮರಾದ ಸಿಆರ್​ಪಿಎಫ್​ ಸೈನಿಕರ ಕುಟಂಬಕ್ಕೆ ನೀಡಿದೆ.

ಹಲವು ವರ್ಷಗಳಿಂದ ಹಬ್ಬದಂತೆ ವಿಜೃಂಭಣೆಯಿಂದ ನಡೆಯುತ್ತಿದ್ದ ಐಪಿಎಲ್​ ಉದ್ಘಾಟನೆಯನ್ನು ಈ ಬಾರಿ ಬಿಸಿಸಿಐ ರದ್ದುಗೊಳಿಸಿ 20 ಕೋಟಿ ಹಣವನ್ನು ಸೈನಿಕರ ಕಲ್ಯಾಣ ನಿಧಿಗೆ ನೀಡುವುದಾಗಿ ಘೋಷಿಸಿತ್ತು. ಇದರ ಬೆನ್ನಲ್ಲೇ ಸಿಎಸ್​ಕೆ ಕೂಡ ತನ್ನ ಮೊದಲ ಪಂದ್ಯದ ಟಿಕೆಟ್​ ಹಣವನ್ನು ಪುಲ್ವಾಮಾ ದಾಳಿಯಲ್ಲಿ ದೇಶಕ್ಕೋಸ್ಕರ ಪ್ರಾಣತ್ಯಾಗ ಮಾಡಿದ ವೀರ ಯೋದರ ಕುಟುಂಬಗಳಿಗೆ ನೀಡುವುದಾಗಿ ಘೋಷಿಸಿತ್ತು.

ಪಂದ್ಯ ಆರಂಭಕ್ಕೂ 10 ನಿಮಿಷ ಮುನ್ನ ಬಿಸಿಸಿಐ ₹ 20 ಕೋಟಿ ಹಾಗೂ ಸಿಎಸ್​ಕೆ ₹ 2 ಕೋಟಿ ರೂಪಾಯಿಯನ್ನು ಸಂಬಂಧಪಟ್ಟ ಅಧಿಕಾರಿಗಳಿಗೆ ಚೆಕ್ ಮೂಲಕ​ ಹಸ್ತಾಂತರಿಸಿದೆ.

ನಮ್ಮ ಸೈನಿಕರಿಗೆ ಗೌರವ ಸೂಚಿಸುವ ಸಲುವಾಗಿ ಸಂಭ್ರಮದ ಉದ್ಘಾಟನೆಯನ್ನು ರದ್ದುಗೊಳಿಸಿದ್ದೇವೆ. ಮುಂದಿನ ದಿನವೂ ನಮ್ಮ ಕೈಲಾದ ಸಹಾಯ ಮುಂದುವರಿಸುತ್ತೇವೆ ಎಂದು ಬಿಸಿಸಿಐ ಹಾಗೂ ಸಿಎಸ್​ಕೆ ತಂಡದ ಅಧಿಕಾರಿಗಳು ತಿಳಿಸಿದ್ದಾರೆ.

ABOUT THE AUTHOR

...view details