ನವದೆಹಲಿ: 2019ರ ಐಪಿಲ್ ಟೂರ್ನಮೆಂಟ್ ಪ್ರಾರಂಭವಾದಾಗಿನಿಂದ ಬೌಲರ್ಗಳನ್ನ ಟ್ರೋಲ್ ಮಾಡಲು ಅತಿಹೆಚ್ಚು ಬಳಕೆಯಾಗುತ್ತಿರುವ ಪದ ಅಂದ್ರೆ ಅದು ದಿಂಡಾ ಅಕಾಡೆಮಿ. ಯಾಕಂದ್ರೆ ವೇಗಿ ಅಶೋಕ್ ದಿಂಡಾ ಈ ಹಿಂದೆ RCB ತಂಡದ ಪರ ಬೌಲಿಂಗ್ ಮಾಡುವಾಗ ಹಲವು ಪಂದ್ಯಗಳಲ್ಲಿ ಅತಿಹೆಚ್ಚು ರನ್ ಬಿಟ್ಟುಕೊಟ್ಟಿದ್ರು. ಹೀಗಾಗಿ ದುಬಾರಿಯಾಗಿ ರನ್ ಬಿಟ್ಟುಕೊಟ್ಟ ಬೌಲರ್ಗಳನ್ನ ದಿಂಡಾ ಅಕಾಡೆಮಿಗೆ ಸ್ವಾಗತ ಎಂದು ಟ್ರೊಲ್ ಮಾಡಲಾಗುತ್ತಿದೆ.
ದಿಂಡಾ ಅಕಾಡೆಮಿ ಎಂದು ಟ್ರೋಲ್ ಮಾಡುವವರಿಗೆ ಅಶೋಕ್ ದಿಂಡಾ ತಿರುಗೇಟು - undefined
ಐಪಿಎಲ್ ಅಂದ್ರೆನೆ ಹಾಗೆ ಅಲ್ಲಿ ಬೌಲರ್ಗಳು ಮಿಂಚೋದು ತೀರಾ ಕಡಿಮೆ. ಎಂಥಾ ಬೌಲರ್ಗಳೂ ತುಂಬಾ ದುಬಾರಿಯಾಗಿಬಿಡ್ತಾರೆ. ಇತ್ತೀಚೆಗೆ ಬೌಲರ್ಗಳು ಹೆಚ್ಚು ರನ್ ನೀಡಿದ್ರೆ ದಿಂಡಾ ಅಕಾಡೆಮಿ ಎಂದು ಟ್ರೋಲ್ ಮಾಡುತಿದ್ದು ಇದು ಅಶೋಕ್ ದಿಂಡಾ ಅವರ ಕಣ್ಣು ಕೆಂಪಗಾಗಿಸಿದೆ.
ಇತ್ತೀಚೆಗೆ ತೀರಾ ಅತಿಯಾದ ಟ್ರೋಲ್ಗಳನ್ನ ಗಮನಿಸಿರುವ ಅಶೋಕ್ ದಿಂಡಾ ಈ ಟ್ರೋಲ್ಗಳ ವಿರುದ್ಧ ಸಿಡಿದೆದ್ದಿದ್ದಾರೆ. ದೇಶೀಯ ಕ್ರಿಕೆಟ್ನಲ್ಲಿ ತಮ್ಮ ಅಂಕಿ ಅಂಶಗಳನ್ನ ಇನ್ಸ್ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿರುವ ದಿಂಡಾ. ವಿರೋಧಿಗಳೇ ನಿಮಗೆ ಸರಿಯಾದ ಅಂಕಿ ಅಂಶ ತಿಳಿದುಕೊಳ್ಳಲು ನಾನು ಸಹಾಯ ಮಾಡುತ್ತೇನೆ. ನಿಮ್ಮ ಅಭಿಪ್ರಾಯಗಳು ವಾಸ್ಥವವಲ್ಲ. ಆದ್ದರಿಂದ ನಿಮ್ಮ ಅಭಿಪ್ರಾಯದಿಂದ ನನ್ನನ್ನ ದೂರವಿಡಿ ಎಂದು ಪೋಸ್ಟ್ನಲ್ಲಿ ತಿರುಗೇಟು ಕೊಟ್ಟಿದ್ದಾರೆ.
ಚೆನ್ನೈ ವಿರುದ್ಧದ ಪಂದ್ಯದಲ್ಲಿ ಅತಿಹೆಚ್ಚು ರನ್ ನೀಡಿದ್ದ ಆರ್ಸಿಬಿ ಆಟಗಾರ ಉಮೇಶ್ ಯಾದವ್ ಅವರನ್ನ ದಿಂಡಾ ಅಕಾಡೆಮಿ ಎಂದು ಹೆಚ್ಚು ಟ್ರೋಲ್ ಮಾಡಲಾಗುತ್ತಿತ್ತು. ಇದಕ್ಕೆ ಉತ್ತರವಾಗಿ ಪಂಜಾಬ್ ವಿರುದ್ಧದ ಪಂದ್ಯದಲ್ಲಿ ಉತ್ತಮ ಪ್ರದರ್ಶನ ನೀಡಿದ್ದ ಉಮೇಶ್ ಯಾದವ್ ಅವರ ಫೋಟೊವನ್ನ ಆರ್ಸಿಬಿ ಅಫಿಸಿಯಲ್ ಟ್ವಿಟ್ಟರ್ನಲ್ಲಿ ಪೋಸ್ಟ್ ಮಾಡಿ ದಿಂಡಾ ಅಕಾಡೆಮಿ? ಹಾಗಂದ್ರೆ ಏನು? ಎಂದು ಪ್ರಶ್ನೆ ಮಾಡಲಾಗಿತ್ತು. ಇದು ಹಲವರ ಕೆಂಗಣ್ಣಿಗೆ ಗುರಿಯಾಗಿತ್ತು ಹೀಗಾಗಿ ಟ್ವೀಟ್ ಡಿಲೀಟ್ ಮಾಡಲಾಗಿದೆ.