ಕರ್ನಾಟಕ

karnataka

ETV Bharat / sports

ಅಭಿಮಾನಿಗಳ ಪ್ರೋತ್ಸಾಹಕ್ಕೆ ಭಾವುಕರಾದ ರಸೆಲ್ ...  ಫ್ಯಾನ್ಸ್​​ಗೆ ಧನ್ಯವಾದ ಹೇಳಿದ ಶಾರುಕ್​ ಖಾನ್ - Andre Russell

ಸೋಲುವ ಭೀತಿಯಲ್ಲಿದ್ದ ಪಂದ್ಯವನ್ನು ತಮ್ಮ ಬ್ಯಾಟಿಂಗ್​ ಪವರ್​ನಿಂದ ಗೆಲ್ಲಿಸಿದ ರಸೆಲ್​ ತಂಡಕ್ಕೆ ಕೋಲ್ಕತ್ತ ಅಭಿಮಾನಿಗಳು ನೀಡಿದ ಪ್ರೋತ್ಸಾಹ ನೋಡಿ ತಮಗೆ ಅಳಬೇಕೆನಿಸುತ್ತಿದೆ ಎಂದು ಶಾರುಖ್​ ಬಳಿ ಹೇಳಿಕೊಂಡಿದ್ದಾರೆ.

russel

By

Published : Mar 25, 2019, 10:58 PM IST

ಕೋಲ್ಕತ್ತಾ: ಭಾನುವಾರ ಸನ್​ರೈಸರ್ಸ್​ ವಿರುದ್ಧ ನಡೆದ ಪಂದ್ಯದಲ್ಲಿ ಗೆಲುವು ಸಾಧಿಸಿದ ಬಳಿಕ ಭರ್ಜರಿ ಬ್ಯಾಟಿಂಗ್​ ಪ್ರದರ್ಶಿಸಿದ ರಸೆಲ್​ ಕೆಕೆಆರ್​ ಅಭಿಮಾನಿಗಳ ಅಭಿಮಾನ ನೋಡಿ ಅಳು ಬರುತ್ತಿದೆ ಎಂದು ತಮ್ಮೊಂದಿಗೆ ಹೇಳಿಕೊಂಡಿದ್ದರೆಂಬ ಮಾಹಿತಿಯನ್ನು ಶಾರುಖ್​ ಖಾನ್​ ತಿಳಿಸಿದ್ದಾರೆ.

ನಿನ್ನೆಯ ಪಂದ್ಯದಲ್ಲಿ ಕೇವಲ 19 ಎಸೆತಗಳಲ್ಲಿ 49 ರನ್​ಗಳಿಸಿ ಕೆಕೆಆರ್​ಗೆ ಭರ್ಜರಿ ಗೆಲುವು ತಂದುಕೊಟ್ಟಿದ್ದರು. ಇವರ ಜೊತೆಗೆ ಯುವ ಆಟಗಾರ ಗಿಲ್​ ಕೊನೆಯ ಓವರ್​ನಲ್ಲಿ 2 ಭರ್ಜರಿ ಸಿಕ್ಸರ್​ ಸಿಡಿಸಿ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಪಂದ್ಯ ಗೆಲುವಿನ ಬಳಿಕ ರಸೆಲ್ ತಮ್ಮ ಬಳಿ ಬಂದು ಇಲ್ಲಿನ ಅಭಿಮಾನಿಗಳು ನಮ್ಮ ತಂಡವನ್ನು ಬೆಂಬಲಿಸಿದನ್ನು ಕಂಡು ​​ತಮಗೆ ಅಳಬೇಕೆನಿಸುತ್ತಿದೆ ಎಂದಿದ್ದರು ಎಂಬ ಮಾಹಿತಿಯನ್ನು ಸ್ವತಃ ಶಾರುಖ್​ ತಮ್ಮ ಟ್ಟ್ವಿಟರ್​ ಮೂಲಕ ತಿಳಿಸಿದ್ದಾರೆ.

ಈಡನ್​ಗಾರ್ಡನ್​ನಲ್ಲಿ ನೆರೆದಿದ್ದ ಸಾವಿರಾರು ಅಭಿಮಾನಿಗಳು ತಮ್ಮನ್ನು ಬರಮಾಡಿಕೊಂಡ ಬಗೆಯನ್ನು ನೆನೆದು ಭಾವುಕರಾಗಿದ್ದರು. ನಾವು ಪಂದ್ಯ ಗೆಲ್ಲುವ ಮೂಲಕ ನಮ್ಮನ್ನು ಪ್ರೋತ್ಸಾಹಿಸುವ ಅಭಿಮಾನಿಗಳ ಕಣ್ಣಲ್ಲಿ ನೀರು ಬರದಿರುವಂತೆ ನೋಡಿಕೊಳ್ಳಲು ನಿರ್ಧಾರ ಮಾಡಿದ್ದೆವು. ಈ ಗೆಲುವಿಗೆ ಕಾರಣರಾದ ಉತ್ತಪ್ಪ, ಶುಭ್ಮನ್​ ಗಿಲ್​, ನಿತೀಸ್​ ರಾಣಾ ಸೇರಿದಂತೆ ಇಡೀ ತಂಡವೇ ಕೋಲ್ಕತ್ತಕ್ಕಾಗಿ ಆಡಿದೆ. ನಿಮ್ಮ ಪ್ರೀತಿಗೆ ಧನ್ಯವಾದ ಎಂದು ಟ್ವೀಟ್​ನಲ್ಲಿ ತಿಳಿಸಿದ್ದಾರೆ.

ಸನ್​ರೈಸರ್ಸ್​ ನೀಡಿದ್ದ 181 ರನ್​ಗಳ ಗುರಿಯನ್ನು ಕೆಕೆಆರ್​ ತಂಡ 19.4 ಓವರ್​ಗಳಲ್ಲಿ ಗುರಿ ತಲುಪುವ ಮೂಲಕ 6 ವಿಕೆಟ್​​ಗಳ ರೋಚಕ ಜಯಸಾಧಿಸಿತ್ತು.

ABOUT THE AUTHOR

...view details