ನವದೆಹಲಿ :ರೂಪಾಂತರ ವೈರಸ್ನ ಹಾವಳಿ ಹೆಚ್ಚಾದ ಕಾರಣ ದಕ್ಷಿಣ ಆಫ್ರಿಕಾ ತಂಡದ ವಿರುದ್ಧದ ಟೆಸ್ಟ್ ಸರಣಿಗೆ ಆಸ್ಟ್ರೇಲಿಯಾ ಕೈಗೊಂಡಿದ್ದ ಪ್ರವಾಸ ರದ್ದುಪಡಿಸಿ ಮುಂದೂಡಿದ್ದಕ್ಕೆ ಇಂಗ್ಲೆಂಡ್ ಮಾಜಿ ಕ್ರಿಕೆಟಿಗ ಮೈಕಲ್ ವಾನ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ದಕ್ಷಿಣ ಆಫ್ರಿಕಾ ಪ್ರವಾಸದಿಂದ ಆಸೀಸ್ ಹೊರ ಬಂದಿರುವಂತೆ ಇದು ಭಾರತದ ಪ್ರವಾಸವಾಗಿದ್ದರೆ ಆಸೀಸ್ ಹೊರಬರುತಿತ್ತೇ ಎಂಬ ಪ್ರಶ್ನೆ ಕಾಡುತ್ತಿದೆ? ಕೊರೊನಾ ಸಂದರ್ಭದಲ್ಲಿ ಆರ್ಥಿಕ ಸಂಕಷ್ಟಕ್ಕೆ ಒಳಗಾದ ಮುಖ್ಯ ಮೂರು ಕ್ರಿಕೆಟ್ ಮಂಡಳಿಗಳಿಗೆ (ಭಾರತ, ಇಂಗ್ಲೆಂಡ್ ಮತ್ತು ಆಸ್ಟ್ರೇಲಿಯಾ-'ಬಿಗ್ 3') ಸಹಾಯ ಮಾಡಲು ಎಲ್ಲವನ್ನೂ ಮಾಡಬೇಕು ಎಂದು ವಾನ್ ತನ್ನ ಟ್ವೀಟ್ನಲ್ಲಿ ಹೇಳಿದ್ದಾರೆ.
ಇದನ್ನೂ ಓದಿ...ಆಸೀಸ್ನಲ್ಲಿ ಅಸಾಮಾನ್ಯ ಗೆಲುವು ಸಾಧಿಸಿದ ಭಾರತ : ಕೇನ್ ವಿಲಿಯಮ್ಸನ್ ಶ್ಲಾಘನೆ
ಒಬ್ಬರಿಗೆ ನ್ಯಾಯ ಇನ್ನೊಬ್ಬರಿಗೆ ಅನ್ಯಾಯ ಮಾಡಬಾರದು. ದಕ್ಷಿಣ ಆಫ್ರಿಕಾ ಸರಣಿ ಮುಂದೂಡುವ ಕ್ರಿಕೆಟ್ ಆಸ್ಟ್ರೇಲಿಯಾ (ಸಿಎ) ನಿರ್ಧಾರ ಪ್ರಶ್ನಿಸಿದ ವಾನ್, ಇದು ಭಾರತದ ಪ್ರವಾಸವಾಗಿದ್ದರೆ ಅವರು (ಆಸೀಸ್) ಕೂಡ ಹಾಗೆ ಮಾಡುತ್ತಿದ್ದರೆ? ಎಂದ ಅವರು, ಸುಮ್ಮನೆ ಹೇಳಿದೆ (Just saying) ಎಂದು ಹೇಳಿದ್ದಾರೆ.