ಸೇಂಟ್ ಜಾನ್ಸ್ [ಆಂಟಿಗುವಾ]: ಸರ್ ವಿವಿಯನ್ ರಿಚರ್ಡ್ಸ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ವೆಸ್ಟ್ ಇಂಡೀಸ್ - ಶ್ರೀಲಂಕಾ ಎರಡನೇ ಟೆಸ್ಟ್ ಪಂದ್ಯದ ಎರಡನೇ ದಿನದಾಟ ಅಂತ್ಯವಾಗಿದ್ದು, ವಿಂಡೀಸ್ 218 ರನ್ಗಳ ಮುನ್ನಡೆ ಸಾಧಿಸಿದೆ.
ಮೊದಲ ದಿನ ಬ್ಯಾಟಿಂಗ್ ಮಾಡಿದ್ದ ವೆಸ್ಟ್ ಇಂಡೀಸ್ ತಂಡ 287 ರನ್ಗಳಿಗೆ 7 ವಿಕೆಟ್ ಕಳೆದುಕೊಂಡಿತ್ತು. ಎರಡನೇ ದಿನದಾಟದಲ್ಲಿ ವಿಂಡೀಸ್ 354 ರನ್ಗಳಿಸಿ ಆಲೌಟ್ ಆಯಿತು. ನಂತರ ಮೊದಲ ಇನ್ನಿಂಗ್ಸ್ ಆರಂಭಿಸಿದ ಶ್ರೀಲಂಕಾ ಆರಂಭದಲ್ಲೇ ನಾಯಕ ದಿಮುತ್ ಕರುಣರತ್ನ (1) ವಿಕಟ್ ಕಳೆದುಕೊಂಡಿತು. ಲಹಿರು ತಿರಿಮನ್ನೆ ಮತ್ತು ಒಶಾಡಾ ಫರ್ನಾಂಡೊ ಎರಡನೇ ವಿಕೆಟ್‌ಗೆ 46 ರನ್ ಗಳಿಸಿದರು. ಫರ್ನಾಂಡೊ 18 ರನ್ ಗಳಿಸಿ ಔಟಾದರು. ಇತ್ತ ತಂಡಕ್ಕೆ ಉತ್ತಮ ಕೊಡುಗೆ ನೀಡಿದ ಲಹಿರು ತಿರಿಮನ್ನೆ ಅರ್ಧ ಶತಕ ಸಿಡಿಸಿ ಮಿಂಚಿದರು. ದಿನದಾಟದ ಅಂತ್ಯದ ವೇಳೆಗೆ ಶ್ರೀಲಂಕಾ 136 ರನ್ಗಳಿಗೆ 3 ವಿಕೆಟ್ ಕಳೆದುಕೊಂಡಿದ್ದು, ಚಂಡಿಮಲ್ (34) ಮತ್ತು ಡಿ ಸಿಲ್ವಾ (23) ರನ್ಗಳಿಸಿ ಕ್ರೀಸ್ ನಲ್ಲಿದ್ದಾರೆ.