ಕ್ರೈಸ್ಟ್‌ಚರ್ಚ್ :ನ್ಯೂಜಿಲೆಂಡ್‌ಗೆ ಬಂದಿಳಿದ ನಂತರ ಕ್ವಾರಂಟೈನ್ನಲ್ಲಿದ್ದ ವೆಸ್ಟ್ ಇಂಡೀಸ್ ತಂಡದ ಸೀಮಿತ ಓವರ್ ಮಾದರಿಯ ನಾಯಕ ಕೀರನ್ ಪೊಲಾರ್ಡ್ ಸೇರಿದಂತೆ ತಂಡದ ಆಟಗಾರರು ಬುಧವಾರ ಮೂರನೇ ಮತ್ತು ಅಂತಿಮ ಸುತ್ತಿನ ಕೋವಿಡ್-19 ಪರೀಕ್ಷೆಯನ್ನು ಪೂರ್ಣಗೊಳಿಸಿದರು. ಶುಕ್ರವಾರ ಆಕ್ಲೆಂಡ್‌ನಲ್ಲಿ ಆತಿಥೇಯ ನ್ಯೂಜಿಲೆಂಡ್ ವಿರುದ್ಧ ಟಿ 20-ಐ ಟೂರ್ನಿಗಳು ನಡೆಯಲಿದ್ದು ತಂಡ ಅದಕ್ಕೆ ಸಿದ್ಧತೆ ನಡೆಸಿದೆ.
ಇದನ್ನೂ ಓದಿ:ಪ್ರೀಮಿಯರ್ ಲೀಗ್ನ 8 ಆಟಗಾರರಿಗೆ ಕೋವಿಡ್ ಪಾಸಿಟಿವ್ ದೃಢ
ವೆಸ್ಟ್ ಇಂಡೀಸ್ ತಂಡದ ಬಹುತೇಕ ಆಟಗಾರರು ಯುಎಇಯಲ್ಲಿ ನಡೆದ ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಭಾಗಿಯಾಗಿದ್ದರು. ನವೆಂಬರ್ 14 ರಂದು ನ್ಯೂಜಿಲೆಂಡ್‌ಗೆ ಬಂದಿಳಿದಿದ್ದರು. ಇಂದು ಅಂತಿಮ ಸುತ್ತಿನ ಕೋವಿಡ್-19 ಪರೀಕ್ಷೆಯನ್ನು ಪೂರ್ಣಗೊಳಿಸಿದರು.
ನವೆಂಬರ್ 27 ರಂದು ಆಕ್ಲೆಂಡ್‌ನಲ್ಲಿ ಮೊದಲ ಟಿ 20-ಐ ನಡೆದರೆ ಎರಡನೇ ಮತ್ತು ಮೂರನೇ ಪಂದ್ಯವು ಮೌಂಟ್ ಮೌಂಗನುಯಿಯಲ್ಲಿ ನವೆಂಬರ್ 29 ಮತ್ತು 30 ರಂದು ನಡೆಯಲಿದೆ. ಇದರ ಬಳಿಕ ಹ್ಯಾಮಿಲ್ಟನ್ (ಡಿಸೆಂಬರ್ 3-7) ಮತ್ತು ವೆಲ್ಲಿಂಗ್ಟನ್ (ಡಿಸೆಂಬರ್ 11-15) ನಲ್ಲಿ ಎರಡು ಟೆಸ್ಟ್ ಪಂದ್ಯಗಳು ನಡೆಯಲಿವೆ. ಪೊಲಾರ್ಡ್ ಟಿ-20ಗೆ ನಾಯಕನಾಗಿದ್ದರೆ, ಜೇಸನ್ ಹೋಲ್ಡರ್ ಟೆಸ್ಟ್ ಸರಣಿಗೆ ನಾಯಕತ್ವ ವಹಿಸಿಕೊಳ್ಳಲಿದ್ದಾರೆ.
ನ್ಯೂಜಿಲೆಂಡ್ ಪ್ರವಾಸದಲ್ಲಿರುವ ವೆಸ್ಟ್ ಇಂಡೀಸ್ ತಂಡ ಟಿ 20-ಐ ನಾಯಕ ಕೀರನ್ ಪೊಲಾರ್ಡ್, ಟೆಸ್ಟ್ ನಾಯಕ ಜೇಸನ್ ಹೋಲ್ಡರ್, ಫ್ಯಾಬಿಯನ್ ಅಲೆನ್, ಶಿಮ್ರಾನ್ ಹೆಟ್ಮಿಯರ್, ಕೀಮೋ ಪಾಲ್, ನಿಕೋಲಸ್ ಪೂರನ್ ಮತ್ತು ಓಶೇನ್ ಥಾಮಸ್ ಸೇರಿದಂತೆ ಒಟ್ಟು ಏಳು ವೆಸ್ಟ್ ಇಂಡೀಸ್ ಆಟಗಾರರು ಐಪಿಎಲ್‌ನಲ್ಲಿ ಭಾಗವಹಿಸಿದ್ದರು. ಉಳಿದ ವೆಸ್ಟ್ ಇಂಡೀಸ್ ತಂಡದ ಆಟಗಾರರು ಅಕ್ಟೋಬರ್ 30ರಂದೇ ನ್ಯೂಜಿಲೆಂಡ್‌ಗೆ ಆಗಮಿಸಿ 14 ದಿನಗಳ ಕ್ವಾರಂಟೈನ್ ಮುಗಿಸಿದ್ದಾರೆ.
ಇದನ್ನೂ ಓದಿ:ಗ್ರಾಫಿಕ್ ಪೇಂಟಿಂಗ್ನಲ್ಲಿ ಮೂಡಿದ ಆರ್ಸಿಬಿ ಪ್ಲೇಯರ್ಸ್: ಮೈಸೂರು ಕಲಾವಿದನ ಕೈಚಳಕಕ್ಕೆ ಅಭಿಮಾನಿಗಳು ಫಿದಾ
ಗುರುವಾರ ನ್ಯೂಜಿಲೆಂಡ್ 'ಎ' ವಿರುದ್ಧ ಅಭ್ಯಾಸ ಪಂದ್ಯ ಆಡಲಿರುವ ವೆಸ್ಟ್ ಇಂಡೀಸ್ ತಂಡ ಟೂರ್ನಿಯಲ್ಲಿ ಉತ್ತಮ ಪ್ರದರ್ಶನ ತೋರಿಸಲಿದೆ. ತಂಡದ ಮುಖ್ಯ ಕೋಚ್ ಫಿಲ್ ಸಿಮ್ಮನ್ಸ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.