ನಾರ್ತ್ ಪಾಯಿಂಟ್ (ಆಂಟಿಗುವಾ): ಡರೆನ್ ಬ್ರಾವೋ ಮತ್ತು ಪೋಲಾರ್ಡ್ ಅದ್ಭುತ ಜೊತೆಯಾಟದ ನೆರವಿನಿಂದ ವೆಸ್ಟ್ ಇಂಡೀಸ್ ತಂಡ ಶ್ರೀಲಂಕಾ ವಿರುದ್ಧ ನಡೆದ 3ನೇ ಏಕದಿನ ಪಂದ್ಯದಲ್ಲಿ 5 ವಿಕೆಟ್ಗಳ ಭರ್ಜರಿ ಗೆಲವು ಸಾಧಿಸಿದೆ. ಈ ಗೆಲುವಿನ ಮೂಲಕ ಮೂರು ಪಂದ್ಯಗಳ ಏಕದಿನ ಸರಣಿಯನ್ನ ವೆಸ್ಟ್ ಇಂಡೀಸ್ 3-0 ದಿಂದ ಕೈ ವಶ ಮಾಡಿಕೊಂಡಿದೆ.
ಟಾಸ್ ಸೋತು ಬ್ಯಾಟಿಂಗ್ಗೆ ಇಳಿದ ಲಂಕಾ, ಕ್ಯಾಪ್ಟನ್ ಕರುಣರತ್ನೇ ಮತ್ತು ಗುಣತಿಲಕ್ ತಂಡಕ್ಕೆ ಉತ್ತಮ ಆರಂಭ ನೀಡಿದರು. ಮೊದಲ ವಿಕೆಟ್ಗೆ ಈ ಜೋಡಿ 68 ರನ್ ಕಲೆಹಾಕಿತು. 36 ರನ್ ಗಳಿಸಿದಾಗ ಗುಣತಿಲಕ್ ಜೋಶಫ್ಗೆ ವಿಕೆಟ್ ಒಪ್ಪಿಸಿದರು. ಕರುಣರತ್ನೇ 31 ರನ್ಗಳಿಸಿ ಔಟಾದರೆ, ನಂತರ ಬಂದ ಯಾವೋಬ್ಬ ಬ್ಯಾಟ್ಸ್ಮನ್ ತಂಡಕ್ಕೆ ಹೇಳಿಕೊಳ್ಳುವಂತಹ ಕೊಡುಗೆ ನೀಡಲಿಲ್ಲ.
ಮದ್ಯಮ ಕ್ರಮಾಂಕದಲ್ಲಿ ಆಶೆನ್ ಬಂಡರಾ ಹಾಗೂ ವನಿಂದು ಹಸರಂಗ ಜೋಡಿ ಶತಕದ ಜೋತೆಯಾಟವಾಡಿ ತಂಡವನ್ನ, ಸುಭದ್ರ ಸ್ಥಿತಿಗೆ ತಂದರು. 74 ಬೌಲ್ಗಳಲ್ಲಿ 3 ಬೌಂಡರಿ ಒಂದು ಸಿಕ್ಸರ್ ನೇರವಿನಿಂದ ಆಶೆನ್ ಬಂಡರಾ 55 ರನ್ಗಳಿಸಿದರೆ, ವನಿಂದು ಹಸರಂಗ ಅಬ್ಬರದ ಬ್ಯಾಟಿಂಗ್ ಮಾಡಿ ಕೇವಲ 60 ಎಸತಗಳಲ್ಲಿ 7 ಬೌಂಡರಿ, 3 ಭರ್ಜರಿ ಸಿಕ್ಸರ್ ನೇರವಿನಿಂದ 80 ರನ್ ಬಾರಿಸಿ ತಂಡಕ್ಕೆ ಉತ್ತಮ ಕೊಡುಗೆ ನೀಡಿದರು. ಅಂತಿಮ ವಾಗಿ ಶ್ರೀಲಂಕಾ ತಂಡ ನಿಗದಿತ 50 ಓವರ್ಗಳಲ್ಲಿ 6 ವಿಕೆಟ್ ಕಳೆದುಕೊಂಡು 274 ರನ್ಗಳಿಸಿತು. ವಿಂಡೀಸ್ ಪರ ಅಕೀಲ್ ಹೊಸೈನ್ 3/33, ಹಾಗೂ ಜೋಶಫ್ 1/51 ವಿಕೆಟ್ ಪಡೆದು ಮಿಂಚಿದರು.