ದುಬೈ: ಇಂಡಿಯನ್ ಪ್ರೀಮಿಯರ್ ಲೀಗ್ ಫೈನಲ್ ಪಂದ್ಯ ನಾಳೆ ಆಯೋಜನೆಗೊಂಡಿದ್ದು, ಇದು ಮುಕ್ತಾಯಗೊಳ್ಳುತ್ತಿದ್ದಂತೆ ಅರಬ್ ನಾಡಿನಲ್ಲಿ ಟಿ -20 ವಿಶ್ವಕಪ್ ಜ್ವರ ಆರಂಭಗೊಳ್ಳಲಿದೆ. ಅದಕ್ಕಾಗಿ ಈಗಾಗಲೇ ಎಲ್ಲ ತಂಡಗಳು ಸಜ್ಜಾಗಿದ್ದು, ಹೊಸ ಹೊಸ ಜೆರ್ಸಿಯಲ್ಲಿ ಮಿಂಚು ಹರಿಸಲಿವೆ.
ಟೀಂ ಇಂಡಿಯಾ ಕೂಡ ಟಿ-20 ವಿಶ್ವಕಪ್ಗಾಗಿ ನೂತನ ಜೆರ್ಸಿ ಅನಾವರಣ ಮಾಡಿದ್ದು, ಇದಕ್ಕೆ ಸಂಬಂಧಿಸಿದಂತೆ ಭಾರತೀಯ ಕ್ರಿಕೆಟ್ ಮಂಡಳಿ (ಬಿಸಿಸಿಐ) ನಿನ್ನೆ ಟ್ವೀಟ್ ಮಾಡಿ ಜೆರ್ಸಿ ಅನಾವರಣ ಮಾಡಿದೆ. ಇದರ ಬೆನ್ನಲ್ಲೇ ಇದೀಗ ದುಬೈನ ಐತಿಹಾಸಿಕ ಕಟ್ಟಡ ಬುರ್ಜ್ ಖಲೀಫಾ ಕಟ್ಟಡದ ಮೇಲೆ ಟೀಂ ಇಂಡಿಯಾ ಸಮವಸ್ತ್ರ ಅನಾವರಣಗೊಂಡಿದೆ.
ಇದೇ ಮೊದಲ ಸಲ ಟೀಂ ಇಂಡಿಯಾ ಜರ್ಸಿ ಬುರ್ಜ್ ಖಲೀಫಾ ಕಟ್ಟಡದ ಮೇಲೆ ಲೈಟಿಂಗ್ ಮೂಲಕ ಅನಾವರಣ ಮಾಡಲಾಗಿದೆ. ಟೀಂ ಇಂಡಿಯಾ ಕಿಟ್ ಪ್ರಾಯೋಜಕತ್ವವನ್ನ ಈ ಸಲ MPL ಹೊತ್ತುಕೊಂಡಿದ್ದು, ಬುರ್ಜ್ ಖಲೀಫಾ ಕಟ್ಟಡದ ಮೇಲೆ ಲೈಟಿಂಗ್ ಮೂಲಕ ಜರ್ಸಿ ರಿವೀಲ್ ಆಗಿದೆ. ಈ ಹಿಂದೆ ಸ್ವಾತಂತ್ರ್ಯೋತ್ಸವ, ಗಣರಾಜ್ಯೋತ್ಸವ ಸಂದರ್ಭದಲ್ಲಿ ಭಾರತದ ತ್ರಿವರ್ಣ ಧ್ವಜ ಈ ಕಟ್ಟಡದ ಮೇಲೆ ಲೈಟಿಂಗ್ ಮೂಲಕ ಅನಾವರಣಗೊಂಡಿತ್ತು. ಆದರೆ, ಇದೇ ಮೊದಲ ಸಲ ಜೆರ್ಸಿ ಲೈಟಿಂಗ್ನಲ್ಲಿ ಮಿಂಚಿದೆ.
ಇದನ್ನೂ ಓದಿರಿ:ನ್ಯೂಜಿಲ್ಯಾಂಡ್ ಸರಣಿಗೆ ಹಿರಿಯ ಪ್ಲೇಯರ್ಸ್ಗೆ ವಿಶ್ರಾಂತಿ.. ಹಂಗಾಮಿ ಕೋಚ್ ಆಗಲಿದ್ದಾರೆ ರಾಹುಲ್ ದ್ರಾವಿಡ್
ಐಸಿಸಿ ಟಿ-20 ವಿಶ್ವಕಪ್ನಲ್ಲಿ ಟೀಂ ಇಂಡಿಯಾ ಅಕ್ಟೋಬರ್ 24ರಂದು ಪಾಕ್ ವಿರುದ್ಧ ಸೆಣಸಾಟ ನಡೆಸುವ ಮೂಲಕ ತನ್ನ ಅಭಿಯಾನ ಆರಂಭಿಸಲಿದೆ. ಅದಕ್ಕೂ ಮುಂಚಿತವಾಗಿ ಇಂಗ್ಲೆಂಡ್ ಹಾಗೂ ಆಸ್ಟ್ರೇಲಿಯಾ ವಿರುದ್ಧ ಅಭ್ಯಾಸ ಪಂದ್ಯಗಳಲ್ಲಿ ಭಾಗಿಯಾಗಲಿದೆ.