ಕೊಲಂಬೊ:ಸೂರ್ಯಕುಮಾರ್ ಯಾದವ್ ತಮ್ಮ 360 ಡಿಗ್ರಿ ಆಟ ನೋಡುವುದು ಅದ್ಭುತವಾಗಿತ್ತು ಎಂದು ಭಾರತದ ನಾಯಕ ಶಿಖರ್ ಧವನ್ ಇಲ್ಲಿ ನಡೆದ ಮೊದಲ ಟಿ-20 ಅಂತಾರಾಷ್ಟ್ರೀಯ ಪಂದ್ಯದಲ್ಲಿ ಶ್ರೀಲಂಕಾ ವಿರುದ್ಧ 38 ರನ್‌ಗಳ ಜಯಗಳಿಸಿದ ನಂತರ ಅವರು ಈ ಮಾತನಾಡಿದ್ದಾರೆ.
ಶ್ರೀಲಂಕಾ ವಿರುದ್ಧ ನಡೆದ ಮೊದಲ ಟಿ20 ಪಂದ್ಯದಲ್ಲಿ ಸೂರ್ಯ ಕುಮಾರ್ ಯಾದವ್ 34 ಎಸೆತಗಳಲ್ಲಿ 50 ರನ್ ಗಳಿಸಿದ್ದಾರೆ. ಅವರ ನಾಲ್ಕನೇ ಟಿ- 20 ಅಂತಾರಾಷ್ಟ್ರೀಯ ಪಂದ್ಯ ಇದಾಗಿದ್ದು, ಎರಡನೇ ಅರ್ಧಶತಕವೂ ಬಂದಿದೆ. ಇನ್ನು ಧವನ್ ಮತ್ತು ಸೂರ್ಯಕುಮಾರ್ 62 ರನ್‌ಗಳ ಜತೆಯಾಟವಾಡಿ ತಂಡದ ಗೆಲುವಿನಲ್ಲಿ ಮಹತ್ವದ ಪಾತ್ರ ವಹಿಸಿದರು.
ಪಂದ್ಯ ಮುಕ್ತಾಯದ ಬಳಿಕ ಮಾತನಾಡಿದ ಧವನ್, ಸೂರ್ಯ ಒಬ್ಬ ಶ್ರೇಷ್ಠ ಆಟಗಾರ ಮತ್ತು ನಾವು ಆತನ ಬ್ಯಾಟಿಂಗ್ ಎಂಜಾಯ್ ಮಾಡಿದ್ದೇವೆ. ಅವರು ನನ್ನ ಮೇಲಿರುವ ಒತ್ತಡವನ್ನು ತಮ್ಮ ಆಟದ ಮೂಲಕ ಕಡಿಮೆಗೊಳಿಸಿದರು. ಅವರು ಆಡುವ ರೀತಿ ವೀಕ್ಷಿಸಲು ಅದ್ಭುತವಾಗಿತ್ತು ಎಂದು ಹೇಳಿದರು.
ಆರಂಭದಲ್ಲಿ ವಿಕೆಟ್‌ಗಳನ್ನು ಕಳೆದುಕೊಂಡರೂ ಸಹ ನಾವು ಸಾಕಷ್ಟು ಉತ್ತಮವಾಗಿ ಆಡಿದ್ದೇವೆ ಎಂದು ನಾನು ಭಾವಿಸುತ್ತೇನೆ. 10-15 ರನ್ಗಳು ಕಡಿಮೆಯಾದವು ಎಂದು ಅನಿಸುತ್ತಿತ್ತು. ಆದ್ರೆ ನಮ್ಮ ಸ್ಪಿನ್ನರ್‌ಗಳು ಉತ್ತಮವಾಗಿ ಕಾರ್ಯನಿರ್ವಹಿಸುತ್ತಾರೆ ಎಂಬ ವಿಶ್ವಾಸದಲ್ಲಿದ್ದಿದ್ದೇವು. ಅದರಂತೆ ಯುಜ್ವೇಂದ್ರ ಚಾಹಲ್ ಮತ್ತು ಕ್ರುನಾಲ್ ಪಾಂಡ್ಯ ಉತ್ತಮವಾಗಿ ದಾಳಿ ಮಾಡಿ ವಿಕೆಟ್ ಪಡೆದರು. ಇನ್ನು ಚೊಚ್ಚಲ ಪಂದ್ಯದಲ್ಲಿ ವರುಣ್ ಚಕ್ರವರ್ತಿ ಉತ್ತಮ ಪ್ರದರ್ಶನ ನೀಡಿ ವಿಕೆಟ್ ಪಡೆದಿದ್ದಾರೆ.
ನಮ್ಮ ಸ್ಪಿನ್ನರ್‌ಗಳು ವಿಕೆಟ್‌ಗಳನ್ನು ಪಡೆಯುವ ಕೆಲಸವನ್ನು ಮಾಡುತ್ತಾರೆಂದು ನಮಗೆ ತಿಳಿದಿತ್ತು. ಭುವಿ ಚೆನ್ನಾಗಿ ಬೌಲಿಂಗ್ ಮಾಡಿದರು, ಕ್ರುನಾಲ್ ಸಹ ಉತ್ತಮವಾಗಿ ಬೌಲಿಂಗ್ ಮಾಡಿದರು ಎಂದು ಧವನ್ ಹೇಳಿದರು.
ಶ್ರೀಲಂಕಾದ ನಾಯಕ ದಾಸುನ್ ಶಾನಕಾ ಮಾತನಾಡಿ, 165 ರ ಗುರಿಯನ್ನು ನಾವು ತಲುಪತ್ತೇವೆ ಎಂದು ತಿಳಿದಿದ್ದೀವಿ. ನಮ್ಮ ಬೌಲರ್‌ಗಳು ಉತ್ತಮವಾಗಿಯೇ ದಾಳಿ ಮಾಡಿದರು. ಆದ್ರೆ ಆಟವನ್ನು ಮುಗಿಸಲು ಮಧ್ಯಮ ಕ್ರಮಾಂಕದ ಬ್ಯಾಟರ್‌ಗಳು ನಮ್ಮ ಬಳಿ ಇರಲಿಲ್ಲ. ನಮ್ಮ ಬೌಲರ್‌ಗಳು ಅದ್ಭುತವಾಗಿ ಬೌಲಿಂಗ್ ಮಾಡಿದ್ದಾರೆ. ಮುಂದಿನ ಪಂದ್ಯದಲ್ಲಿ ನಾವು ಇದಕ್ಕಿಂತ ಉತ್ತಮ ಪ್ರದರ್ಶನ ನೀಡುತ್ತೇವೆ ಎಂದು ನಾನು ಭಾವಿಸುತ್ತೇನೆ ಅಂತಾ ಶಾನಕಾ ಪ್ರತಿಕ್ರಿಯಿಸಿದ್ದಾರೆ.