ಕೊಲಂಬೊ:ಸೂರ್ಯಕುಮಾರ್ ಯಾದವ್ ಅದ್ಭುತ ಬ್ಯಾಟಿಂಗ್ ಮತ್ತು ಭುವನೇಶ್ವರ್ ಕುಮಾರ್ನ ಮಾರಕ ದಾಳಿಯಿಂದ ಭಾರತ ತಂಡ ಶ್ರೀಲಂಕಾ ವಿರುದ್ಧ ಸುಲಭವಾಗಿ ಜಯ ಗಳಿಸಿತು.
ಟಾಸ್ ಸೋತು ಬ್ಯಾಟಿಂಗ್ ಭಾರತಕ್ಕೆ ಶ್ರೀಲಂಕಾ ಆರಂಭಿಕ ಆಘಾತ ನೀಡಿತು. ಪಂದ್ಯದ ಮೊದಲ ಎಸೆತದಲ್ಲಿ ಪೃಥ್ವಿ ಶಾಗೆ ಚಮೀರ್ ಪೆವಿಲಿಯನ್ ಹಾದಿ ತೋರಿಸಿದರು. ಬಳಿಕ ಧವನ್ ಮತ್ತು ಸ್ಯಾಮ್ಸನ್ ಜೊತೆಗೂಡಿ 6 ಓವರ್ಗೆ 51 ರನ್ಗಳನ್ನು ಕಲೆ ಹಾಕಿ ಜವಾಬ್ದಾರಿಯುತ ಆಟವಾಡುತ್ತಿದ್ದರು. ಆದರೆ 6.1 ಓವರ್‌ನಲ್ಲಿ ಹಸರಂಗಾ ಎಸೆದ ಮೊದಲ ಬಾಲ್ನಲ್ಲಿ ಸ್ಯಾಮ್ಸನ್ ಎಲ್ಬಿಡಬ್ಲ್ಯೂ ಆಗಿ ಔಟಾದರು. ಭಾರತ ತಂಡ ಮತ್ತೆ ಸಂಕಷ್ಟಕ್ಕೆ ಸಿಲುಕಿತು.
ಲಂಕಾ ಬೌಲರ್ ಬೆವರಿಳಿಸಿದ ಬೌಲರ್
ಬಳಿಕ ಬಂದ ಸೂರ್ಯ ಕುಮಾರ್ ಯಾದವ್ ನಾಯಕ ಧವನ್ ಜೊತೆಗೂಡಿ ಶ್ರೀಲಂಕಾ ಬೌಲರ್ಗಳನ್ನು ಚೆನ್ನಾಗಿ ಬೆವರಿಳಿಸಿದರು. ಕೇವಲ 38 ಎಸೆತಗಳಲ್ಲಿ 5 ಬೌಂಡರಿ ಮತ್ತು 2 ಸಿಕ್ಸರ್ಗಳ ನೆರವಿನಿಂದ 50 ರನ್ಗಳನ್ನು ಕಲೆ ಹಾಕುವ ಮೂಲಕ ಅಂತರಾಷ್ಟ್ರೀಯ ಟಿ-20ಯಲ್ಲಿ ತಮ್ಮ ಎರಡನೇ ಅರ್ಧ ಶತಕ ಗಳಿಸಿದರು.
ಧವನ್ ಮತ್ತು ಸೂರ್ಯ ಕುಮಾರ್ ಜೊತೆಗೂಡಿ 62 ರನ್ಗಳನ್ನು ಕಲೆ ಹಾಕಿದರು. ಬಳಿಕ ಧವನ್ ಕರುಣಾರತ್ನೆಗೆ ವಿಕೆಟ್ ಒಪ್ಪಿಸಿದರು. ಧವನ್ ಔಟಾದ ಬಳಿಕ ಸೂರ್ಯ ಕುಮಾರ್ ಯಾದವ್ ಹೆಚ್ಚು ಸಮಯ ಮೈದಾನದಲ್ಲಿ ಆಡಲಿಲ್ಲ. ಹಸರಂಗಾ ಬೌಲಿಂಗ್ನಲ್ಲಿ ವಿಕೆಟ್ವೊಪ್ಪಿಸಿ ಪೆವಿಲಿಯನ್ ಹಾದಿ ಹಿಡಿದರು.
ನಂತರ ಆಗಮಿಸಿದ ಬ್ಯಾಟ್ಸ್ಮನ್ಗಳ ನೆರವಿನಿಂದ ಭಾರತ ತಂಡ ನಿಗದಿತ 20 ಓವರ್ಗಳಿಗೆ ಐದು ವಿಕೆಟ್‌ಗಳನ್ನು ಕಳೆದುಕೊಂಡು 164 ರನ್ಗಳನ್ನು ಕಲೆ ಹಾಕಿತು. ಭಾರತ ನೀಡಿದ ಗುರಿಯನ್ನು ಬೆನ್ನತ್ತಿದ್ದ ಶ್ರೀಲಂಕಾ ತಂಡಕ್ಕೆ ಸ್ವಲ್ಪಮಟ್ಟಿಗೆ ಉತ್ತಮ ಆರಂಭ ದೊರೆಯಿತು.
ಭರ್ಜರಿಯಾಗೇ ಸಾಗುತ್ತಿದ್ದ ಸಿಂಹಳಿಯರು
ಮೊದಲ ಎರಡು ಓವರ್‌ಗಳಲ್ಲಿ ಶ್ರೀಲಂಕಾ 20 ರನ್ಗಳನ್ನು ಕಲೆ ಹಾಕಿ ಭರ್ಜರಿ ಮುನ್ನುಗ್ಗುತ್ತಿತ್ತು. ಇದಕ್ಕೆ ಕಡಿವಾಣ ಹಾಕಲು ನಾಯಕ ಧವನ್ ಕ್ರುನಾಲ್ರನ್ನ ಕಣಕ್ಕಿಳಿಸಿದರು. ಕ್ರುನಾಲ್ನ ಮೂರನೇ ಎಸತಕ್ಕೆ ಮಿನೋದ್ ಭಾನುಕಾ ಸೂರ್ಯ ಕುಮಾರ್ ಯಾದವ್ಗೆ ಕ್ಯಾಚ್ ನೀಡಿ ಪೆವಿಲಿಯನ್ ಹಾದಿ ಹಿಡಿದರು. ಭಾನುಕಾ ಔಟಾದ ಬಳಿಕ ಶ್ರೀಲಂಕಾ ತಂಡದ ಅವಿಷ್ಕಾ ಫರ್ನಾಂಡೊ ಮತ್ತು ಧನಜಯ ಡಿ ಸಿಲ್ವಾ ಜೊತೆಗೂಡಿ ನಿಧಾನಗತಿಯಲ್ಲಿ ಬ್ಯಾಟ್ ಬೀಸುತ್ತಿದ್ದರು. ಈ ವೇಳೆ ನಾಯಕ ಧವನ್ ಚಹಾಲ್ರನ್ನು ಕಣಕ್ಕಿಸಿದರು. ಚಹಾಲ್ನ ಎರಡನೇ ಎಸೆತಕ್ಕೆ ಸಿಲ್ವಾ ಕ್ಲೀನ್ ಬೋಲ್ಡ್ ಆದರು.
ಇದಾದ ಬಳಿಕ ಸಿಲ್ವಾ ಔಟಾದರು. ಆ ಮೇಲೆ ಡೆಬ್ಯು ಆಟಗಾರ ಚಾರಿತ್ ಅಸಲಂಕಾ ಅವಿಷ್ಕಾ ಫರ್ನಾಂಡೊ ಜೊತೆಗೂಡಿದರು. ಅವಿಷ್ಕಾ ಫರ್ನಾಂಡೊ ಹೆಚ್ಚು ಕ್ರಿಸ್ನಲ್ಲಿ ನಿಲ್ಲದೇ ಭುವಿನೇಶ್ವರ್ ಕುಮಾರ್ ದಾಳಿಗೆ ತುತ್ತಾದರು. ಆದರೆ ಚಾರಿತ್ ಅಸಲಂಕಾಗೆ ಇದು ಮೊದಲ ಪಂದ್ಯವಾದರೂ ಭಾರತದ ವಿರುದ್ಧ ಉತ್ತಮವಾಗಿಯೇ ಪ್ರದರ್ಶನ ತೋರಿದರು. ಕೇವಲ 26 ಎಸೆತಗಳಲ್ಲಿ 3 ಬೌಂಡರಿ, 3 ಸಿಕ್ಸರ್ಗಳ ನೇತೃತ್ವದಲ್ಲಿ 44 ರನ್ಗಳನ್ನು ಕಲೆಹಾಕಿದರು. ಬಳಿಕ ಚಹಾರ್ ಬೌಲಿಂಗ್ಗೆ ವಿಕೆಟ್ವೊಪ್ಪಿಸಿದರು.
ಬಳಿಕ ಭಾರತದ ಮಾರಕ ದಾಳಿಗೆ ಶ್ರೀಲಂಕಾ 16 ನೇ ಓವರ್‌ನಲ್ಲಿ 111/4 ರಿಂದ ಕೊನೆಯ ಆರು ವಿಕೆಟ್‌ಗಳನ್ನು ಕೇವಲ 15 ರನ್‌ಗಳಿಗೆ ಕಳೆದುಕೊಂಡು ಹೀನಾಯ ಸೋಲುನುಭವಿಸಿತು. ಭಾರತ ಪರ ಯುಜ್ವೇಂದ್ರ ಚಹಲ್ 1, ದೀಪಕ್ ಚಹರ್ 2, ಭುವನೇಶ್ವರ್ 4 ವಿಕೆಟ್‌ಗಳನ್ನು ಕಬಳಿಸುವ ಮೂಲಕ ಆತಿಥೇಯರನ್ನು 18.3 ಓವರ್‌ಗಳಲ್ಲಿ 126 ರನ್‌ಗಳಿಗೆ ಆಲೌಟ್ ಮಾಡಿ ಸುಲಭ ಜಯದತ್ತ ಕಾಲಿನ್ನಿಟ್ಟರು.