ಕರ್ನಾಟಕ

karnataka

ETV Bharat / sports

ಸ್ಮಿತ್, ವಾರ್ನರ್ ಉಪಸ್ಥಿತಿ ನಮ್ಮ ಗೆಲುವಿಗೆ ತಡೆಗೋಡೆಯಾಗಬಹುದು: ಚೇತೇಶ್ವರ ಪೂಜಾರ - ಚೇತೇಶ್ವರ ಪೂಜಾರ ಅಭಿಪ್ರಾಯಗಳು

ಭಾರತದ ವೇಗಿಗಳಾದ ಜಸ್ಪ್ರೀತ್ ಬುಮ್ರಾ, ಇಶಾಂತ್ ಶರ್ಮಾ ಮತ್ತು ಮೊಹಮ್ಮದ್ ಶಮಿ ಅವರು 2018-19ರಂತೆ ಮತ್ತೆ ಕೆಲವು ಮ್ಯಾಜಿಕ್ ಕೆಲಸ ಮಾಡಬಹುದು, ಇದು ನಮ್ಮ ತಂಡಕ್ಕೆ ವರದಾನವಾಗಿ ಎದುರಾಳಿ ತಂಡದ ಬ್ಯಾಟಿಂಗ್​ ಸಾಮರ್ಥ್ಯವನ್ನು ಕುಗ್ಗಿಸಬಹುದು ಎಂದು ಟೀಂ ಇಂಡಿಯಾ ಟೆಸ್ಟ್​ ಆಟಗಾರ ಚೇತೇಶ್ವರ ಪೂಜಾರ ಅಭಿಪ್ರಾಯಪಟ್ಟಿದ್ದಾರೆ.

Smith, Warner's presence a challenge but then victories don't come easy: Pujara
ಟೆಸ್ಟ್ ಸ್ಪೆಷಾಲಿಸ್ಟ್ ಚೇತೇಶ್ವರ ಪೂಜಾರ

By

Published : Nov 16, 2020, 11:56 PM IST

Updated : Nov 17, 2020, 12:08 AM IST

ಸಿಡ್ನಿ:ಅನುಭವಿ ಆಟಗಾರರಾದ ಡೇವಿಡ್ ವಾರ್ನರ್ ಮತ್ತು ಸ್ಟೀವ್ ಸ್ಮಿತ್ ಉಪಸ್ಥಿತಿಯು ಆಸ್ಟ್ರೇಲಿಯಾ ತಂಡಕ್ಕೆ ಬಲ ತುಂಬಿದೆ. ಹಾಗಾಗಿ ಭಾರತ ಪಂದ್ಯವನ್ನು ತನ್ನ ಕೈವಶ ಮಾಡಿಕೊಳ್ಳುವುದು ಅಷ್ಟು ಸುಲಭದ ಮಾತಲ್ಲಾ ಎಂದು ಭಾರತದ ಟೆಸ್ಟ್ ಸ್ಪೆಷಾಲಿಸ್ಟ್ ಚೇತೇಶ್ವರ ಪೂಜಾರ ಹೇಳಿದ್ದಾರೆ. ಬ್ಯಾಟ್ಸ್​ಮನ್‌ಗಳನ್ನು ಕಾಡುವ ಭಾರತೀಯ ಬೌಲರ್​​ಗಳು ಕೂಡ ಎದುರಾಳಿ ಆಸೀಸ್ ತಂಡವನ್ನು ಅಲ್ಪ ಮೊತ್ತಕ್ಕೆ ಕಟ್ಟಿಹಾಕಬಲ್ಲರು ಎಂದೂ ಸಹ ತಿಳಿಸಿದ್ದಾರೆ.

ಟೆಸ್ಟ್ ಸ್ಪೆಷಾಲಿಸ್ಟ್ ಚೇತೇಶ್ವರ ಪೂಜಾರ

2018-19ರಲ್ಲಿ ಆಸ್ಟ್ರೇಲಿಯಾಕ್ಕೆ ಪ್ರವಾಸ ಹೋಗಿದ್ದ ಟೀಂ ಇಂಡಿಯಾ ಟೆಸ್ಟ್ ಸರಣಿಯನ್ನು 2-1ರಿಂದ ಗೆದ್ದು ಇತಿಹಾಸ ನಿರ್ಮಿಸಿತ್ತು. ಆವತ್ತು ಕಲಾತ್ಮಕ ಆಟಗಾರ ಪೂಜಾರ ಮೂರು ಶತಕ ಬಾರಿಸಿದ್ದಲ್ಲದೇ ಒಟ್ಟು 500+ ರನ್ ಗಳಿಸುವ ಮೂಲಕ ತಂಡದ ಗೆಲುವಿಗೆ ಶ್ರಮಿಸಿದ್ದರು. 71 ವರ್ಷಗಳ ಬಳಿಕ ಭಾರತ ತಂಡ ಆಸ್ಟ್ರೇಲಿಯಾ ನೆಲದಲ್ಲಿ ಟೆಸ್ಟ್ ಸರಣಿ ಗೆದ್ದಿದ್ದು ಅದೇ ಮೊದಲು ಅನ್ನೋದು ಸಹ ಇಲ್ಲಿ ನೆನೆಪಿಡುವಂತಹ ವಿಶಯ.

ಸ್ಮಿತ್ ಹಾಗೂ ಡೇವಿಡ್ ವಾರ್ನರ್ ಸೇರ್ಪಡೆಯಾಗಿದ್ದರಿಂದ ಆಸ್ಟ್ರೇಲಿಯಾ ತಂಡ 2018-19ಕ್ಕಿಂತ ಈಗ ಹೆಚ್ಚು ಬಲಗೊಂಡಿರಬಹದು. ತಂಡದಲ್ಲಿ ಅಷ್ಟು ಅನುಭವಿ ಆಟಗಾರರ ಭರ್ತಿಯಿಂದ ನಮಗೆ ಗೆಲವು ಅನ್ನೋದು ಸಲೀಸಲ್ಲ. ಹಾಗಾಗಿ ಇಲ್ಲಿಂದ ಹೊರಗೆ ಹೋಗಿ ಗೆದ್ದು ಬರಬೇಕೆಂದರೆ ಶ್ರಮದ ಅತ್ಯವಶ್ಯಕತೆ ಹೆಚ್ಚಿರಬೇಕು ಎಂದಿದ್ದಾರೆ. 2018-19ರಲ್ಲಿ ಬಾಲ್​ ಟೆಂಪರಿಂಗ್​ ಮಾಡಿದ್ದರಿಂದ ಸ್ಮಿತ್ ಮತ್ತು ವಾರ್ನರ್​​ ಅವರನ್ನು ತಂಡದಿಂದ ಕೈಬಿಡಲಾಗಿತ್ತು.

ಭಾರತದ ವೇಗದ ವೇಗಿಗಳಾದ ಜಸ್ಪ್ರೀತ್ ಬುಮ್ರಾ, ಇಶಾಂತ್ ಶರ್ಮಾ ಮತ್ತು ಮೊಹಮ್ಮದ್ ಶಮಿ ಅವರು 2018-19ರಂತೆ ಮತ್ತೆ ಕೆಲವು ಮ್ಯಾಜಿಕ್ ಕೆಲಸ ಮಾಡಬಹುದು, ಇದು ನಮ್ಮ ತಂಡಕ್ಕೆ ವರದಾನವಾಗಿ ಅವರ ಬ್ಯಾಟಿಂಗ್​ ಸಾಮರ್ಥ್ಯವನ್ನು ಕುಗ್ಗಿಸಬಹುದು ಎಂದು ಪೂಜಾರ ಅಭಿಪ್ರಾಯಪಟ್ಟಿದ್ದಾರೆ.

ಟೆಸ್ಟ್ ಸ್ಪೆಷಾಲಿಸ್ಟ್ ಚೇತೇಶ್ವರ ಪೂಜಾರ

ಆಸ್ಟ್ರೇಲಿಯಾಕ್ಕೆ ಪ್ರವಾಸ ಹೋಗಲಿರುವ ಭಾರತ ತಂಡ ಅಲ್ಲಿ ಮೂರು ಪಂದ್ಯಗಳ ಏಕದಿನ ಸರಣಿ, ಮೂರು ಪಂದ್ಯಗಳ ಟಿ-20ಐ ಸರಣಿ ಮತ್ತು ನಾಲ್ಕು ಪಂದ್ಯಗಳ ಟೆಸ್ಟ್ ಸರಣಿಯನ್ನಾಡಲಿದೆ. ಈ ಸರಣಿ ನವೆಂಬರ್ 27ರಿಂದ ಆರಂಭಗೊಳ್ಳಲಿದೆ. ತಂಡದಲ್ಲಿ ನಿರ್ಣಾಯಕ ಪಾತ್ರ ವಹಿಸಲಿರುವ ಕಲಾತ್ಮಕ ಆಟಗಾರ ಪೂಜಾರ್​, ಇದರ ಮಧ್ಯೆಯೂ ಟೀಂ ಇಂದಿಯಾ ಈ ಬಾರಿಯೂ ಆಸ್ಟ್ರೇಲಿಯಾ ನೆಲದಲ್ಲಿ ಗೆದ್ದು ಹಳೆ ಇತಿಹಾಸವನ್ನು ಮತ್ತೆ ಪುನರಾವರ್ತನೆ ಮಾಡಬಹುದು ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಟೆಸ್ಟ್​ಗಾಗಿಯೇ ಪೂಜಾರ ತನ್ನ ತಂದೆಯ ಜೊತೆ ಎರಡು ತಿಂಗಳು ಅಭ್ಯಾಸ ಮಾಡಿದ್ದಾರೆ.

Last Updated : Nov 17, 2020, 12:08 AM IST

ABOUT THE AUTHOR

...view details