ಚಿಕ್ಕಮಗಳೂರು:ಭರವಸೆಯ ಹೆಜ್ಜೆ ಮೂಡಿಸಿರುವ ಕಾಫಿನಾಡಿನ ಶಿಶಿರ ಗೌಡ, ಅಂತರ್ ರಾಜ್ಯ ಮಹಿಳಾ ಏಕದಿನ ಕ್ರಿಕೆಟ್ ಟೂರ್ನಿಗೆ ಕರ್ನಾಟಕ ತಂಡಕ್ಕೆ ಆಯ್ಕೆಯಾಗಿದ್ದಾರೆ.
ಕರ್ನಾಟಕ ಮಹಿಳಾ ಕ್ರಿಕೆಟ್ ತಂಡದಲ್ಲಿ ಸ್ಥಾನ ಪಡೆದ ಕಾಫಿನಾಡಿನ ಶಿಶಿರ ಗೌಡ! - ಚಿಕ್ಕಮಗಳೂರು ಜಿಲ್ಲೆ ಸುದ್ದಿ
ಎಡಗೈ ಬ್ಯಾಟಿಂಗ್ ಹಾಗೂ ಬಲಗೈ ವೇಗದ ಬೌಲರ್ ಆಗಿ ಗುರುತಿಸಿಕೊಂಡಿರುವ ಚಿಕ್ಕಮಗಳೂರಿನ ಶಿಶಿರ ಗೌಡ ಕರ್ನಾಟಕ ತಂಡಕ್ಕೆ ಆಯ್ಕೆಯಾಗಿದ್ದಾರೆ.
ಶಿಶಿರಾಗೌಡ
ಎಡಗೈ ಬ್ಯಾಟಿಂಗ್ ಹಾಗೂ ಬಲಗೈ ವೇಗದ ಬೌಲರ್ ಆಗಿ ಗುರುತಿಸಿಕೊಂಡಿರುವ ಶಿಶಿರ ಗೌಡ, ಬೆಂಗಳೂರಿನಲ್ಲಿ ಇಂಜಿನಿಯರಿಂಗ್ ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಶಿಶಿರ ಗೌಡ 2015ರಿಂದ 16, 19 ಮತ್ತು 23ರ ವಯೋಮಾನದ ತಂಡದಲ್ಲೂ ಆಡಿ ತಮ್ಮದೇ ಆದ ಛಾಪು ಮೂಡಿಸಿದ್ದಾರೆ.
ಚಿಕ್ಕಮಗಳೂರಿನ ಡಾ. ಅಶ್ವತ್ಥ್ ಬಾಬು–ತ್ರಿವೇಣಿ ದಂಪತಿಯ ಪುತ್ರಿ ಶಿಶಿರ ಗೌಡ, ಆರ್.ಪಿ. ಕ್ರಿಕ್ರೆಟ್ ಅಕಾಡೆಮಿಯ ರಾಮದಾಸ್ ಪ್ರಭು ಅವರಲ್ಲಿ ತರಬೇತಿ ಪಡೆದಿದ್ದಾರೆ. ಶಿಶಿರ ನಾಲ್ಕನೇ ತರಗತಿಯಲ್ಲಿದ್ದಾಗಲೇ ಕ್ರಿಕೆಟ್‌ನಲ್ಲಿ ಆಸಕ್ತಿ ಬೆಳೆಸಿಕೊಂಡಿದ್ದರು.