ನವದೆಹಲಿ :ತನ್ನ ವೃತ್ತಿ ಜೀವನದ ಮೊದಲ ಪಂದ್ಯದಲ್ಲಿ ಭಾರತ ಮಹಿಳಾ ತಂಡದ ಶೆಫಾಲಿ ವರ್ಮಾ ಇಂಗ್ಲೆಂಡ್ ವಿರುದ್ಧ 96 ರನ್ ಸಿಡಿಸಿ ಭರ್ಜರಿ ಆಟ ಪ್ರದರ್ಶಿಸಿದ್ದರು. ಈ ಕುರಿತು ಶೆಫಾಲಿ ವರ್ಮಾ ತಂದೆ ಸಂಜೀವ್ ವರ್ಮಾ ಮಾತನಾಡಿದ್ದು, ಮಗಳ ಸಾಧನೆ ಕುರಿತು ಸಂತಸ ಹಂಚಿಕೊಂಡಿದ್ದಾರೆ.
ನನಗೆ ಆಕೆಯ ಆಟದ ಕುರಿತು ಯಾವುದೇ ರೀತಿ ಆಶ್ಚರ್ಯವಾಗಿಲ್ಲ. ಆಕೆ ಹರಿಯಾಣ ರಾಜ್ಯಕ್ಕಾಗಿ ರಣಜಿ ಟ್ರೋಫಿ ಆಡುವ ಪುರುಷ ಕ್ರಿಕೆಟಿಗರ ಜೊತೆ ತರಬೇತಿ ಪಡೆದಿದ್ದಾಳೆ. ಅವರಲ್ಲಿ ಸುಮಾರು 135 ರಿಂದ 140 ಕಿ.ಮೀಟರ್ನಲ್ಲಿ ಬೌಲಿಂಗ್ ಮಾಡುತ್ತಿದ್ದರು. ಆದರೆ, ಮಹಿಳಾ ಕ್ರಿಕೆಟರ್ಗಳ ಬೌಲಿಂಗ್ ವೇಗ ಇಷ್ಟು ವೇಗ ಇರುವುದಿಲ್ಲ. ಅವಳು ಆಕ್ರಮಣಕಾರಿಯಾಗಿ ಆಡಲು ತರಬೇತಿ ಪಡೆದಿದ್ದಳು. ಹೀಗಾಗಿ, ಉತ್ತಮ ಪ್ರದರ್ಶನ ನೀಡುವ ನಂಬಿಕೆ ನನ್ನಲ್ಲಿತ್ತು ಎಂದಿದ್ದಾರೆ.