ಕರ್ನಾಟಕ

karnataka

ETV Bharat / sports

ನಾಳೆಯಿಂದ ಬಾಂಗ್ಲಾ - ವಿಂಡೀಸ್​​ ಟೆಸ್ಟ್ : ಬ್ಯಾನ್​ ಬಳಿಕ ತಂಡ ಸೇರಿಕೊಂಡ ಶಕೀಬ್​  ಅಲ್ ಹಸನ್

ನಾಳೆಯಿಂದ ಬಾಂಗ್ಲಾದೇಶ ಹಾಗೂ ವೆಸ್ಟ್​​ ಇಂಡೀಸ್ ನಡುವಣ ಮೊದಲ ಟೆಸ್ಟ್ ಪಂದ್ಯ ಆರಂಭವಾಗಲಿದ್ದು, ಪಂದ್ಯ ಗೆಲ್ಲಲು ಬಾಂಗ್ಲಾ ಫುಲ್​ ತಯಾರಿ ನಡೆಸಿದೆ. ಇದಕ್ಕೂ ಮೊದಲು ವಿಂಡೀಸ್ ವಿರುದ್ಧ 3-0 ಅಂತರದಿಂದ ಏಕದಿನ ಸರಣಿ ವೈಟ್​​​ ವಾಷ್ ಮಾಡಿ ಬೀಗಿದೆ.

shakib-al-hasans
ಶಕೀಬಲ್ ಹಸನ್

By

Published : Feb 2, 2021, 8:19 PM IST

ಚಟ್ಟೋಗ್ರಾಮ್ (ಬಾಂಗ್ಲಾದೇಶ): ನಾಳೆಯಿಂದ ನಡೆಯಲಿರುವ ವೆಸ್ಟ್​ ಇಂಡೀಸ್ ವಿರುದ್ಧದ 2 ಟೆಸ್ಟ್ ಪಂದ್ಯಗಳಿಗೆ ಬಾಂಗ್ಲಾದೇಶ ತಂಡ ಸಿದ್ಧಗೊಂಡಿದೆ. ಈ ನಡುವೆ ತಂಡಕ್ಕೆ ಆಲ್​​​ರೌಂಡರ್ ಶಕೀಬ ಅಲ್ ಹಸನ್ ಎಂಟ್ರಿಕೊಟ್ಟಿದ್ದು, ಇದು ತಂಡಕ್ಕೆ ಇನ್ನಷ್ಟು ಬಲತುಂಬಲಿದೆ ಎಂದು ನಾಯಕ ಮೊಮಿನುಲ್ ಹಕ್​ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಇದಕ್ಕೂ ಮೊದಲು 2019ರಲ್ಲಿ ಕ್ರಿಕೆಟ್​ ಬೆಟ್ಟಿಂಗ್ ಬುಕ್ಕಿಗಳ ಸಂಪರ್ಕಕ್ಕೆ ಬಂದ ಆರೋಪದಡಿ ಎರಡು ವರ್ಷಗಳ ನಿಷೇಧ ಹಾಗೂ 1 ವರ್ಷ ಅಮಾನತಿಗೆ ಒಳಗಾಗಿದ್ದ ಶಕೀಬ ಅಲ್ ಹಸನ್​ ಇದೀಗ ಸರಣಿಯಲ್ಲಿ ಆಡುತ್ತಿದ್ದಾರೆ. ಇದರ ಮುಂದುವರಿದ ಭಾಗವಾಗಿ ಎರಡು ಟೆಸ್ಟ್ ಪಂದ್ಯದಲ್ಲೂ ಆಡಲಿದ್ದಾರೆ.

ಕಳೆದ ತಿಂಗಳಲ್ಲಿ ನಡೆದ ವಿಂಡೀಸ್​ ನಡುವಿನ ಏಕದಿನ ಪಂದ್ಯದ ವೇಳೆ ಉತ್ತಮ ಆಟವಾಡಿದ್ದ ಶಕೀಬ ಅಲ್, ಟೆಸ್ಟ್​​ನಲ್ಲೂ ಉತ್ತಮ ಫಾರ್ಮ್​​​ ಕಂಡುಕೊಳ್ಳಲಿದ್ದಾರೆ ಅವರು ಟೂ ಇನ್​ ಒನ್​​​​ ಆಟಗಾರ ಎಂದು ನಾಯಕ ಹೊಗಳಿದ್ದಾರೆ.

ಅಂತಹ ಆಟಗಾರ ಇರುವುದು ಯಾವುದೇ ತಂಡಕ್ಕೆ ವರದಾನವಿದ್ದಂತೆ. ಬ್ಯಾಟಿಂಗ್ ಹಾಗೂ ಬೌಲಿಂಗ್​​​ನಲ್ಲಿಯೂ ಉತ್ತಮ ಆಟಗಾರ. ಅವರ ಮರಳುವಿಕೆಯು ತಂಡ ಇನ್ನಷ್ಟು ಸಮತೋಲನವಾಗಲು ಸಹಾಯಕವಾಗಿದೆ ಎಂದಿದ್ದಾರೆ.

ಶಕೀಬ್ ಟೆಸ್ಟ್​​ನಲ್ಲಿ 39.40 ಬ್ಯಾಟಿಂಗ್ ಸರಾಸರಿ ಹೊಂದಿದ್ದರೆ, 31.12ರಷ್ಟು ಬೌಲಿಂಗ್ ಸರಾಸರಿ ಹೊಂದಿದ್ದಾರೆ.

ಇದನ್ನೂ ಓದಿ:ಟೆಸ್ಟ್​ ಚಾಂಪಿಯನ್ ಫೈನಲ್​ಗೆ ಕೀವಿಸ್ ಪಡೆ ಲಗ್ಗೆ, ಇದೀಗ ಭಾರತ - ಇಂಗ್ಲೆಂಡ್ ನಡುವೆ ಫೈಟ್​!

ABOUT THE AUTHOR

...view details