ಲಕ್ನೋ :ಭಾರತ - ದ.ಆಫ್ರಿಕಾ ಮಹಿಳಾ ತಂಡಗಳ ನಡುವೆ ಇಲ್ಲಿನ ಅಟಲ್ ಬಿಹಾರಿ ವಾಜಪೇಯಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಏಕದಿನ ಸರಣಿಯ ನಾಲ್ಕನೇ ಪಂದ್ಯದಲ್ಲಿ ಭಾತರ ವನಿತೆಯರ ತಂಡ ಸ್ಪರ್ಧಾತ್ಮಕ ಮೊತ್ತ ಪೇರಿಸಿದೆ.
ಟಾಸ್ ಸೋತು ಬ್ಯಾಟಿಂಗ್ಗೆ ಇಳಿದ ಭಾರತದ ವನಿತೆಯರು ನಿಗದಿತ 50 ಓವರ್ಗಳಲ್ಲಿ 4 ವಿಕೆಟ್ ಕಳೆದುಕೊಂಡು 266 ರನ್ಗಳಿಸಿದರು. ಭಾರತದ ಪರ ಓಪನರ್ ಆಗಿ ಕಣಕ್ಕಿಳಿದ ಸ್ಮೃತಿ ಮಂದಾನ ಮತ್ತು ಪ್ರಿಯಾ ಪೂನಿಯಾ ತಂಡಕ್ಕೆ ಭದ್ರ ಬುನಾದಿ ಹಾಕಿಕೊಡುವಲ್ಲಿ ಮತ್ತೆ ಎಡವಿದರು. ಕೇವಲ 10 ರನ್ಗಳಿಸಿ ಮಂದಾನ ಔಟಾದರೆ, ಪ್ರಿಯಾ ಪೂನಿಯಾ 32 ರನ್ಗಳಿಸಿದ್ರು. ತಂಡದ ನಾಯಕಿ ಮಿಥಾಲಿ ರಾಜ್ 45 ರನ್ಗಳಿಸಿ ತಂಡದ ಮೊತ್ತ ಹೆಚ್ಚಿಸಿದರು.
ಇತ್ತ ಉತ್ತಮ ಇನ್ನಿಂಗ್ಸ್ ಕಟ್ಟಿದ ಪೂನಮ್ ರೌತ್ ಹಾಗೂ ಹರ್ಮನ್‌ಪ್ರೀತ್ ಕೌರ್ ತಂಡದ ಮೊತ್ತವನ್ನು 250ರ ಗಡಿ ದಾಟಿಸಿದರು. ಪೂನಮ್ ರೌತ್ 123 ಬಾಲ್ಗಳಲ್ಲಿ 10 ಬೌಂಡರಿ ಸಮೇತ 104 ರನ್ಗಳಿಸುವ ಮೂಲಕ ತಮ್ಮ ವೃತ್ತಿ ಜೀವನದ 3ನೇ ಏಕದಿನ ಶತಕ ಗಳಿಸಿದರು.