ಕ್ವೀನ್ಸ್ಲ್ಯಾಂಡ್ (ಆಸ್ಟ್ರೇಲಿಯಾ): ಭಾರತ ಮಹಿಳಾ ಕ್ರಿಕೆಟ್ ತಂಡ ಎಡಗೈ ಆಟಗಾರ್ತಿ ಸ್ಮೃತಿ ಮಂಧಾನ ಆಸಿಸ್ ನೆಲದಲ್ಲಿ ದಾಖಲೆ ಬರೆದಿದ್ದಾರೆ. ತಮ್ಮ ಮೊದಲ ಟೆಸ್ಟ್ ಶತಕ ದಾಖಲಿಸಿದ್ದು, ಟೆಸ್ಟ್ ಶತಕ ಸಿಡಿಸಿದ ಭಾರತದ ಮೊದಲ ಮಹಿಳಾ ಆಟಗಾರ್ತಿ ಎಂಬ ಕೀರ್ತಿ ಪಡೆದಿದ್ದಾರೆ.
ಆಸಿಸ್ ನೆಲದಲ್ಲಿ ಮೊದಲ ಟೆಸ್ಟ್ ಶತಕ ಗಳಿಸಿ ದಾಖಲೆ ಬರೆದ ಸ್ಮೃತಿ ಮಂಧಾನ - maiden Test century
ಭಾರತ ಮಹಿಳಾ ತಂಡ ಮೂರು ಏಕದಿನ ಪಂದ್ಯದಲ್ಲಿ ಎರಡರಲ್ಲಿ ಸೋಲು ಅನುಭವಿಸಿ ಒಂದನ್ನು ಗೆದ್ದುಕೊಂಡಿದೆ. ಇದೀಗ ಏಕೈಕ ಟೆಸ್ಟ್ ನಡೆಯುತ್ತಿದ್ದು, ಇದಾದ ಬಳಿಕ ಮೂರು ಟಿ-20 ಪಂದ್ಯ ಆಡಲಿದೆ.
ಕೆರಾರ ಓವಲ್ ಮೈದಾನದಲ್ಲಿ ಆಸ್ಟ್ರೇಲಿಯಾ ಮಹಿಳಾ ತಂಡದ ವಿರುದ್ಧ ನಡೆಯುತ್ತಿರುವ ಏಕೈಕ ಟೆಸ್ಟ್ ಪಂದ್ಯದಲ್ಲಿ ಈ ಸಾಧನೆ ಮಾಡಿದ್ದಾರೆ. ಎಡಗೈ ಆಟಗಾರ್ತಿ ಆರಂಭದಿಂದಲೇ ಅಬ್ಬರದ ಬ್ಯಾಟಿಂಗ್ ನಡೆಸಿದ್ದು, ಇತ್ತೀಚಿನ ವರದಿಯಲ್ಲಿ ಮಂಧಾನ 214 ಬಾಲ್ ಎದುರಿಸಿ 126 ಗಳಿಸಿದ್ದಾರೆ. ಇದರಲ್ಲಿ ಬರೋಬ್ಬರಿ 22 ಬೌಂಡರಿ ಹಾಗೂ 1 ಸಿಕ್ಸರ್ ಸೇರಿದೆ.
ಜೊತೆಗೆ ಮೊದಲ ಇನಿಂಗ್ಸ್ನಲ್ಲಿ ಭಾರತ ತಂಡ 1 ವಿಕೆಟ್ ಕಳೆದುಕೊಂಡು 193 ರನ್ ಗಳಿಸಿದೆ. ಇದಕ್ಕೂ ಮೊದಲು ಭಾರತ ಮಹಿಳಾ ತಂಡ ಮೂರು ಏಕದಿನ ಪಂದ್ಯದಲ್ಲಿ ಎರಡರಲ್ಲಿ ಸೋಲು ಅನುಭವಿಸಿ ಒಂದನ್ನು ಗೆದ್ದುಕೊಂಡಿದೆ. ಇದೀಗ ಏಕೈಕ ಟೆಸ್ಟ್ ನಡೆಯುತ್ತಿದ್ದು, ಇದಾದ ಬಳಿಕ ಮೂರು ಟಿ-20 ಪಂದ್ಯ ಆಡಲಿದೆ.