ಚೆನ್ನೈ :ಫೆಬ್ರುವರಿ 5ರಿಂದ ಆರಂಭವಾಗಲಿರುವ ಭಾರತದ ವಿರುದ್ಧದ ನಾಲ್ಕು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಉತ್ತಮ ಪ್ರದರ್ಶನ ತೋರುವ ನಿರೀಕ್ಷೆ ಹೊಂದಿರುವ ಇಂಗ್ಲೆಂಡ್ ತಂಡದ ಬಲಗೈ ವೇಗದ ಬೌಲರ್ ಜೋಫ್ರಾ ಆರ್ಚರ್, ನಮ್ಮ ತಂಡದಲ್ಲಿ ಸಾಕಷ್ಟು ಸ್ಪಿನ್ನರ್ಗಳಿರುವ ಪರಿಣಾಮ ಔಟ್-ಸ್ಪಿನ್ನಲ್ಲಿ ಭಾರತ ತಂಡ ನಮ್ಮನ್ನು ಮೀರಿಸುವುದು ಕಷ್ಟ ಎಂದು ಹೇಳಿದ್ದಾರೆ.
ಔಟ್-ಸ್ಪಿನ್ನಲ್ಲಿ ನಮ್ಮನ್ನು ಭಾರತ ಮೀರಿಸುವುದು ಕಷ್ಟ: ಜೋಫ್ರಾ ಆರ್ಚರ್ - England pacer Jofra Archer
ಐಪಿಎಲ್‌ನಲ್ಲಿ ರಾಜಸ್ಥಾನ್ ರಾಯಲ್ಸ್ ಪರ ಆರ್ಚರ್ ಆಡುತ್ತಾನೆ. ಈವರೆಗೂ 35 ಪಂದ್ಯಗಳನ್ನು ಆಡಿರುವ ಅವರು 46 ವಿಕೆಟ್ಗಳನ್ನು ಗಳಿಸಿದ್ದಾರೆ. ಅಲ್ಲದೆ, 11 ಟೆಸ್ಟ್ ಪಂದ್ಯಗಳಲ್ಲಿ 38 ವಿಕೆಟ್ ಪಡೆದಿದ್ದಾರೆ. ಶ್ರೀಲಂಕಾದಲ್ಲಿ ಇಂಗ್ಲೆಂಡ್ 2-0 ಟೆಸ್ಟ್ ಸರಣಿಯ ಗೆಲುವು ದಾಖಲಿಸಿದ್ರೆ, ಭಾರತವು ಆಸ್ಟ್ರೇಲಿಯಾದಲ್ಲಿ 2-1 ಬಾರ್ಡರ್-ಗವಾಸ್ಕರ್ ಸರಣಿ ಗೆಲುವು ಸಾಧಿಸಿತು..
ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ಹಲವು ಪಂದ್ಯಗಳನ್ನು ಆಡಿರುವ ಅನುಭವ ಇದೆ. ಆದರೆ, ಬಿಳಿ ಚೆಂಡಿಗಿಂತ ಕೆಂಪು ಚೆಂಡಿನಲ್ಲಿ ಬೌಲಿಂಗ್ ಮಾಡುವುದು ಸವಾಲು ಎನಿಸಿದೆ. ಆದರೆ, ಪಿಚ್ಗಳನ್ನು ತಮಗೆ ಅನುಗುಣವಾಗಿ ಬಳಸಿಕೊಂಡ್ರೂ ಏಕಪಕ್ಷೀಯ ಪಂದ್ಯಗಳಿಗೆ ಸಾಕ್ಷಿಯಾಗುವುದಿಲ್ಲ. ಯಾಕೆಂದ್ರೆ, ನಮ್ಮಲ್ಲೂ ಗುಣಮಟ್ಟದ ಸ್ಪಿನ್ನರ್ಗಳಿದ್ದಾರೆ ಎಂದು ಆರ್ಚರ್ ತಮ್ಮ ಡೈಲಿ ಮೇಲ್ನಲ್ಲಿ ಬರೆದುಕೊಂಡಿದ್ದಾರೆ.
ಐಪಿಎಲ್‌ನಲ್ಲಿ ರಾಜಸ್ಥಾನ್ ರಾಯಲ್ಸ್ ಪರ ಆರ್ಚರ್ ಆಡುತ್ತಾನೆ. ಈವರೆಗೂ 35 ಪಂದ್ಯಗಳನ್ನು ಆಡಿರುವ ಅವರು 46 ವಿಕೆಟ್ಗಳನ್ನು ಗಳಿಸಿದ್ದಾರೆ. ಅಲ್ಲದೆ, 11 ಟೆಸ್ಟ್ ಪಂದ್ಯಗಳಲ್ಲಿ 38 ವಿಕೆಟ್ ಪಡೆದಿದ್ದಾರೆ. ಶ್ರೀಲಂಕಾದಲ್ಲಿ ಇಂಗ್ಲೆಂಡ್ 2-0 ಟೆಸ್ಟ್ ಸರಣಿಯ ಗೆಲುವು ದಾಖಲಿಸಿದ್ರೆ, ಭಾರತವು ಆಸ್ಟ್ರೇಲಿಯಾದಲ್ಲಿ 2-1 ಬಾರ್ಡರ್-ಗವಾಸ್ಕರ್ ಸರಣಿ ಗೆಲುವು ಸಾಧಿಸಿತು.