ಮುಂಬೈ:ನ್ಯೂಜಿಲ್ಯಾಂಡ್ ವಿರುದ್ಧದ 2ನೇ ಟೆಸ್ಟ್ ಪಂದ್ಯದಲ್ಲಿ ಭಾರತ ತಂಡ ಭರ್ಜರಿ ಗೆಲುವು ದಾಖಲಿಸಿದೆ.
ಕೊಹ್ಲಿ ಪಡೆ ನೀಡಿದ 540 ರನ್ ಗುರಿ ಬೆನ್ನಟ್ಟಿದ್ದ ನ್ಯೂಜಿಲ್ಯಾಂಡ್ 4ನೇ ದಿನದಾಟದ ಆರಂಭದ ಕೆಲವೇ ಹೊತ್ತಿನಲ್ಲಿ ತನ್ನೆಲ್ಲಾ ವಿಕೆಟ್ ಕಳೆದುಕೊಂಡು 167 ರನ್ಗಳಿಸಲಷ್ಟೇ ಶಕ್ತವಾಯಿತು. ಹೀಗಾಗಿ, ಭಾರತ 372 ರನ್ಗಳ ಬೃಹತ್ ಅಂತರದಿಂದ ಸರಣಿಯನ್ನು 1-0 ರಿಂದ ಗೆದ್ದು ಬೀಗಿತು.
ಭಾರತ ಮೊದಲ ಇನ್ನಿಂಗ್ಸ್ನಲ್ಲಿ 325 ರನ್ಗಳಿಗೆ ಆಲೌಟ್ ಆದರೆ, ಕಿವೀಸ್ ತನ್ನ ಮೊದಲ ಇನ್ನಿಂಗ್ಸ್ನಲ್ಲಿ ಅಶ್ವಿನ್ (8ಕ್ಕೆ4) ಮತ್ತು ಸಿರಾಜ್ (19ಕ್ಕೆ3) ದಾಳಿಗೆ ಸಿಲುಕಿ ಕೇವಲ 62 ರನ್ಗಳಿಗೆ ಸರ್ವಪತನ ಕಂಡಿತ್ತು. ಮೊದಲ ಇನ್ನಿಂಗ್ಸ್ನಲ್ಲಿ ಸಿಕ್ಕಿರುವ 263 ರನ್ಗಳ ಬೃಹತ್ ಮುನ್ನಡೆಯೊಂದಿಗೆ 2ನೇ ಇನ್ನಿಂಗ್ಸ್ ಆರಂಭಿಸಿದ್ದ ಭಾರತ 7 ವಿಕೆಟ್ ಕಳೆದುಕೊಂಡು 276 ರನ್ಗಳಿಸಿದ್ದ ವೇಳೆ ಡಿಕ್ಲೇರ್ ಘೋಷಿಸಿಕೊಂಡಿತು. ಈ ಮೂಲಕ ಪ್ರವಾಸಿ ತಂಡಕ್ಕೆ 540 ರನ್ಗಳ ಬೃಹತ್ ಟಾರ್ಗೆಟ್ ನೀಡಿತು.
ಇದನ್ನೂ ಓದಿ:ಮಾಸ್ಕ್, ಸಾಮಾಜಿಕ ಅಂತರವಿಲ್ಲದೇ ಕಾಲೇಜು ವಾರ್ಷಿಕೋತ್ಸವ: 42 ವೈದ್ಯಕೀಯ ವಿದ್ಯಾರ್ಥಿಗಳಿಗೆ ಕೋವಿಡ್
ಮಯಾಂಕ್ ಅಗರ್ವಾಲ್ 62, ಪೂಜಾರ 47, ಶುಬ್ಮನ್ ಗಿಲ್ 47, ಕೊಹ್ಲಿ 36 ಮತ್ತು ಅಕ್ಷರ್ ಪಟೇಲ್ 41 ರನ್ಗಳಿಸಿದ್ದರು. ಕಿವೀಸ್ ಪರ ಮೊದಲ ಇನ್ನಿಂಗ್ಸ್ನಲ್ಲಿ ಎಲ್ಲಾ 10 ವಿಕೆಟ್ ಪಡೆದಿದ್ದ ಅಜಾಜ್ ಮತ್ತೆ 4 ವಿಕೆಟ್ ಪಡೆದರೆ, ರಚಿನ್ ರವೀಂದ್ರ 3 ವಿಕೆಟ್ ಪಡೆದರು.