ಕಾನ್ಪುರ(ಉತ್ತರಪ್ರದೇಶ):ಬ್ಯಾಟಿಂಗ್ ವೈಫಲ್ಯ ಅನುಭವಿಸಿರುವ ನಾಯಕ, ಸ್ಥಿರತೆಯಿಲ್ಲದ ವೇಗದ ಬೌಲರ್ಗಳು ಮತ್ತು ಕೆಲವು ವೈಟ್ ಬಾಲ್ ಕ್ರಿಕೆಟ್ಗೆ ಸೀಮಿತವಾಗಿದ್ದ ಆಟಗಾರರ ಸಂಯೋಜನೆಯನ್ನು ಒಳಗೊಂಡಿರುವ ಅಜಿಂಕ್ಯ ರಹಾನೆ ನೇತೃತ್ವದ ದ್ವಿತೀಯ ದರ್ಜೆಯ ಭಾರತ ತಂಡ ಗುರುವಾರದಿಂದ (ಇಂದಿನಿಂದ) ಆರಂಭವಾಗಲಿರುವ ನ್ಯೂಜಿಲ್ಯಾಂಡ್ ವಿರುದ್ಧ ದ ಟೆಸ್ಟ್ ಸರಣಿಯಲ್ಲಿ ಕಣಕ್ಕಿಳಿಯಲಿದೆ.
ಇಂತಹುದೇ ಯುವ ತಂಡ ಆಸ್ಟ್ರೇಲಿಯಾದಲ್ಲಿ ರೋಹಿತ್, ವಿರಾಟ್ ಕೊಹ್ಲಿ, ಬುಮ್ರಾ ಸೇರಿದಂತೆ ಸ್ಟಾರ್ ಆಟಗಾರರ ಅನುಪಸ್ಥಿತಿಯಲ್ಲಿ ಆಸೀಸ್ ಭದ್ರಕೋಟೆ ಗಬ್ಬಾದಲ್ಲಿ ಜಯ ಸಾಧಿಸಿ ಐತಿಹಾಸಿಕ ಟೆಸ್ಟ್ ಸರಣಿ ಜಯಿಸಿತ್ತು. ಇದೀಗ ಮತ್ತೆ ಅಂತಹುದೇ ತಂಡ ಇಂದಿನಿಂದ ಕಿವೀಸ್ ವಿರುದ್ಧ ಹೋರಾಟ ನಡೆಸಲು ಎದುರು ನೋಡುತ್ತಿದೆ.
ಓದಿ:ಜೂನಿಯರ್ ಹಾಕಿ ವಿಶ್ವಕಪ್: ಮೊದಲ ಪಂದ್ಯದಲ್ಲಿ ಭಾರತ ತಂಡ ಮಣಿಸಿದ ಫ್ರಾನ್ಸ್
ದಿಗ್ಗಜರ ಅನುಪಸ್ಥಿತಿಯಲ್ಲಿ ಕಣಕ್ಕಿಳಿಯುತ್ತಿರುವ ಭಾರತ ತಂಡದಲ್ಲಿ ಪೂಜಾರಾ, ರಹಾನೆ ಮತ್ತು ಮಯಾಂಕ್ ಮಾತ್ರ 10ಕ್ಕಿಂತ ಹೆಚ್ಚಿನ ಪಂದ್ಯಗಳನ್ನಾಡಿದ್ದಾರೆ. ಮೊದಲ ಟೆಸ್ಟ್ ಪಂದ್ಯದಲ್ಲಿ ಕೆ.ಎಲ್. ರಾಹುಲ್ ಅನುಪಸ್ಥಿತಿಯಲ್ಲಿ ಶುಬ್ಮನ್ ಗಿಲ್ಗೆ ತಮ್ಮ ಸಾಮರ್ಥ್ಯ ಸಾಬೀತು ಪಡಿಸಲು ಮತ್ತೊಂದು ಅವಕಾಶ ಸಿಕ್ಕಿದೆ. ಮ್ಯಾನೇಜ್ಮೆಂಟ್ ಅವರನ್ನು ಮಧ್ಯಮ ಕ್ರಮಾಂಕದಲ್ಲಿ ಆಡಿಸಲು ಬಯಸಿತ್ತು. ಆದರೆ, ರಾಹುಲ್ ಸರಣಿಯಿಂದ ಹೊರ ಬಿದ್ದಿರುವುದರಿಂದ ಮಯಾಂಕ್ ಅಗರ್ವಾಲ್ ಜೊತೆಗೆ ಇನ್ನಿಂಗ್ಸ್ ಆರಂಭಿಸಲಿದ್ದಾರೆ.
ಇವರಿಬ್ಬರಿಗೆ ಇತ್ತೀಚಿನ ಇಂಗ್ಲೆಂಡ್ ಸರಣಿಯಲ್ಲಿ ಫಾರ್ಮ್ ಕಂಡುಕೊಂಡಿರುವ ಅನುಭವಿ ಪೂಜಾರಾ ಸಾಥ್ ನೀಡಲಿದ್ದಾರೆ. 4ನೇ ಕ್ರಮಾಂಕದಲ್ಲಿ ಮುಂಬೈ ಸ್ಟಾರ್ ಶ್ರೇಯಸ್ ಅಯ್ಯರ್ ನಂತರ ನಾಯಕ ರಹಾನೆ ಮಧ್ಯಮ ಕ್ರಮಾಂಕದ ಬಲವಾಗಿದ್ದಾರೆ. ವಿಕೆಟ್ ಕೀಪರ್ ಸಹ 6ನೇ ಕ್ರಮಾಂಕದಲ್ಲಿ ಆಡಲಿದ್ದಾರೆ.
ಕಾನ್ಪುರದ ಗ್ರೀನ್ ಪಾರ್ಕ್ ಪಿಚ್ ಸ್ಪಿನ್ಗೆ ನೆರವು ನೀಡುವುದರಿಂದ ಭಾರತ ತಂಡ 3 ಸ್ಪಿನ್ನರ್ಗಳು ಅಂದ್ರೆ ರವಿಚಂದ್ರನ್ ಅಶ್ವಿನ್, ರವೀಂದ್ರ ಜಡೇಜಾ ಮತ್ತು ಅಕ್ಷರ್ ಪಟೇಲ್ ಅವರನ್ನು ಕಣಕ್ಕಿಳಿಸುವ ಸಾಧ್ಯತೆಯಿದೆ. ಉಮೇಶ್ ಯಾದವ್ ವೇಗಿಗಳ ವಿಭಾಗದಲ್ಲಿ ಮೊದಲ ಆಯ್ಕೆಯಾಗಿದ್ದಾರೆ. ಇವರಿಗೆ 100 ಟೆಸ್ಟ್ ಆಡಿರುವ ಇಶಾಂತ್ ಅಥವಾ ಯುವ ಬೌಲರ್ ಸಿರಾಜ್ ಸಾಥ್ ನೀಡುವ ನಿರೀಕ್ಷೆಯಿದೆ.
ಓದಿ:ಮೇಘಾಲಯ: ಮಾಜಿ ಸಿಎಂ ಸೇರಿದಂತೆ ರಾತ್ರೋರಾತ್ರಿ ತೃಣಮೂಲ ಪಕ್ಷಕ್ಕೆ ಸೇರಿದ 12 ಕಾಂಗ್ರೆಸ್ ಶಾಸಕರು