ಮುಂಬೈ: ಒಂದೆಡೆ, ಮಳೆ ಹಿನ್ನೆಲೆಯಲ್ಲಿ ವಾಂಖೆಡೆ ಮೈದಾನ ತೇವಗೊಂಡಿದ್ದು ಟಾಸ್ ವಿಳಂಬವಾಗಿದೆ. ಇನ್ನೊಂದೆಡೆ, ಭಾರತ ಮತ್ತು ನ್ಯೂಜಿಲ್ಯಾಂಡ್ ತಂಡಗಳ ಆಟಗಾರರಲ್ಲಿ ಬದಲಾವಣೆ ಕಂಡು ಬಂದಿದೆ.
ಭಾರತ ತಂಡದಲ್ಲಿ ವೇಗಿ ಇಶಾಂತ್ ಶರ್ಮಾ, ಅಜಿಂಕ್ಯ ರಹಾನೆ ಮತ್ತು ರವೀಂದ್ರ ಜಡೇಜಾ ಗಾಯದ ಸಮಸ್ಯೆಯಿಂದ ಬಳಲುತ್ತಿದ್ದು, ಟೆಸ್ಟ್ನಿಂದ ಹೊರಗುಳಿಯಲಿದ್ದಾರೆ.
ನ್ಯೂಜಿಲ್ಯಾಂಡ್ ತಂಡದ ನಾಯಕ ಕೇನ್ ವಿಲಿಯಮ್ಸನ್ ಮೊಣಕಾಲಿನ ಸಮಸ್ಯೆಯಿಂದ ಬಳಲುತ್ತಿದ್ದು, ಅವರು ಸಹ ಈ ಟೆಸ್ಟ್ನಿಂದ ಹೊರಗುಳಿಯಲಿದ್ದಾರೆ. ಕೇನ್ ಬದಲಿಗೆ ನಾಯಕ ಸ್ಥಾನವನ್ನು ಟಾಮ್ ಲ್ಯಾಥಮ್ವಹಿಸಿಕೊಳ್ಳಲಿದ್ದಾರೆ. ಇದೇ ವೇಳೆ, ಕೇನ್ ವಿಲಿಯಮ್ಸನ್ ಬದಲಿ ಆಟಗಾರನ ಆಯ್ಕೆಯ ವಿಚಾರ ಟಾಸ್ ಬಳಿಕ ತಿಳಿಯಲಿದೆ.
ಮೊದಲನೇ ಟೆಸ್ಟ್ನಲ್ಲಿ ಭಾರತ ಗೆಲ್ಲುವ ಅವಕಾಶವನ್ನು ಕೂದಲೆಳೆ ಅಂತರಿಂದ ಕಳೆದುಕೊಂಡಿತ್ತು. ಇದೀಗ ಕಿವೀಸ್ ವಿರುದ್ಧ ಗೆದ್ದು ಮತ್ತೆ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ನಲ್ಲಿ ತನ್ನ ಸ್ಥಾನ ಭದ್ರ ಪಡಿಸಿಕೊಳ್ಳುವ ಉತ್ಸಾಹದಲ್ಲಿ ಭಾರತ ತಂಡವಿದೆ. ಇದುವರೆಗೆ ಭಾರತದಲ್ಲಿ ಒಂದೂ ಟೆಸ್ಟ್ ಸರಣಿ ಗೆಲ್ಲದ ನ್ಯೂಜಿಲ್ಯಾಂಡ್ ಐತಿಹಾಸಿಕ ಗೆಲುವನ್ನು ಎದುರು ನೋಡುತ್ತಿದೆ.