ನವದೆಹಲಿ:ಕಾಂಗರೂಗಳ ನಾಡಿನಲ್ಲಿ ಕಾದಾಟಕ್ಕಿಳಿಯರುವ ಟೀಂ ಇಂಡಿಯಾ ಭರ್ಜರಿ ತಯಾರಿ ಮಾಡಿಕೊಂಡಿದೆ. ಮೂರು ಏಕದಿನ, ಮೂರು ಟಿ-20 ಮತ್ತು 4 ಟೆಸ್ಟ್ ಪಂದ್ಯಗಳ ಸರಣಿ ನಡೆಯಲಿದ್ದು, ಟೀಂ ಇಂಡಿಯಾ ಆಟಗಾರರು ಭರ್ಜರಿ ಅಭ್ಯಾಸದಲ್ಲಿ ನಿರತರಾಗಿದ್ದಾರೆ.
2018-19ರಲ್ಲಿ ಬಲಿಷ್ಠ ಆಸ್ಟ್ರೇಲಿಯಾ ವಿರುದ್ಧ ಟೆಸ್ಟ್ ಸರಣಿಯನ್ನು ಕೈವಶ ಮಾಡಿಕೊಂಡಿದ್ದನ್ನು ಸ್ಮರಿಸಿಕೊಂಡಿರುವ ಭಾರತೀಯ ಮಾಜಿ ಬ್ಯಾಟ್ಸ್‌ಮನ್ ವಿ.ವಿ.ಎಸ್.ಲಕ್ಷ್ಮಣ್, ಕ್ಯಾಪ್ಟನ್ ವಿರಾಟ್ ಕೊಹ್ಲಿ ನೇತೃತ್ವದ ಟೀಂ ಇಂಡಿಯಾಗೆ ಕೆಲವು ಸಲಹೆಗಳನ್ನು ನೀಡಿದ್ದಾರೆ.
ರಾಹುಲ್ ದ್ರಾವಿಡ್ ಜೊತೆ ವಿ.ವಿ.ಎಸ್.ಲಕ್ಷ್ಮಣ್ ವಿರಾಟ್ ಕೊಹ್ಲಿ ನೇತೃತ್ವದ ಭಾರತೀಯ ತಂಡವು ಏಕದಿನ, ಟಿ-20 ಮತ್ತು ಟೆಸ್ಟ್ ಪಂದ್ಯಗಳ ಮೂರು ಸ್ವರೂಪಗಳಲ್ಲಿ ಆತಿಥೇಯ ಆಸ್ಟ್ರೇಲಿಯಾವನ್ನು ಸೋಲಿಸಲು ಇದು ಉತ್ತಮ ಅವಕಾಶ. 2018-19ರ ದಾಖಲೆಯನ್ನು ಮತ್ತೆ ರಚಿಸುವತ್ತ ಗಮನ ನೀಡಬೇಕು ಎಂದಿದ್ದಾರೆ. ಇದೇ ತಿಂಗಳ ನವೆಂಬರ್ 27ರಿಂದ ಸಿಡ್ನಿಯಲ್ಲಿ ಏಕದಿನ ಪಂದ್ಯದೊಂದಿಗೆ ಟೂರ್ನಿಗಳು ಆರಂಭವಾಗಲಿದ್ದು, ಶುಭ ಕೋರಿರುವ ಅವರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಆಸ್ಟ್ರೇಲಿಯಾ ತಂಡದ ಆಟದ ವಿಧಾನವನ್ನು ಬಹಿರಂಗಪಡಿಸಿದ ಟೆಸ್ಟ್ ಸ್ಪೆಷಲಿಸ್ಟ್ ವಿ.ವಿ.ಎಸ್.ಲಕ್ಷ್ಮಣ್, ಭಾರತೀಯ ಬೌಲರ್ಗಳು ಎಲ್ಲಾ ಸಮಯದಲ್ಲೂ ಸದೃಢವಾಗಿರಬೇಕು. ವಿಶೇಷವಾಗಿ ಜನವರಿಯಲ್ಲಿ ನಡೆಯುವ ಮೂರನೇ ಮತ್ತು ನಾಲ್ಕನೇ ಟೆಸ್ಟ್ನಲ್ಲಿ ಉತ್ತಮ ಪ್ರದರ್ಶನ ನೀಡಬೇಕು ಎಂದಿದ್ದಾರೆ.
ಭಾರತ ತಂಡ ಕೊನೆಯ ಬಾರಿಗೆ ಆಸ್ಟ್ರೇಲಿಯಾ ಪ್ರವಾಸ ಕೈಗೊಂಡಾಗ (2018-19) ಟೆಸ್ಟ್ ಟೂರ್ನಿಯನ್ನು ತನ್ನತ್ತ ವಶಪಡಿಸಿಕೊಳ್ಳುವ ಮೂಲಕ 71 ವರ್ಷಗಳ ಇತಿಹಾಸವನ್ನು ಮತ್ತೆ ಮರುಕಳಿಸಿತ್ತು. ಅದೇ ಚಿತ್ತದತ್ತ ಮುನ್ನುಗ್ಗುವಂತೆ ಲಕ್ಷ್ಮಣ್ ಉತ್ಸಾಹದ ಮಾತುಗಳನ್ನು ಆಡಿದ್ದಾರೆ.
ಟೀಂ ಇಂಡಿಯಾದ ಆಟಗಾರರೆಲ್ಲರೂ ಫಿಟ್ ಆಗಿದ್ದಾರೆ. ಅತ್ಯುತ್ತಮ ಲಯದಲ್ಲಿದ್ದಾರೆ. ನನಗೆ ಅವರ ಮೇಲೆ ಸಂಪೂರ್ಣ ನಂಬಿಕೆ ಇದೆ. ತಂಡದ ಸದ್ಯದ ಕಾರ್ಯಕ್ಷಮತೆ ನೋಡಿದರೆ ಪ್ರವಾದಲ್ಲಿರುವ ಟೀಂ ಇಂಡಿಯಾ ಎಲ್ಲಾ ಸ್ವರೂಪಗಳಲ್ಲಿ ಗೆದ್ದು ಬರಬಹುದು. ಹಾಗೆ ಬದಲಾವಣೆ ಮಾಡಿಕೊಂಡಿದೆ. ವೈಟ್ ಬಾಲ್ ವಿಷಯಕ್ಕೆ ಬಂದರೂ ತಂಡ ಇದೀಗ ಪ್ರಾವಿಣ್ಯತೆ ಗಳಿಸಿಕೊಂಡಿದೆ. ಬಯೋ ಬಬಲ್ನಿಂದ ಒಂದು ಸ್ಥಳದಿಂದ ಒಂದು ಸ್ಥಳಕ್ಕೆ ಹೋಗುವುದು ಅಷ್ಟು ಸುಲಭವಲ್ಲ. ಎಲ್ಲರೂ ಒಪ್ಪುವ ಮಾತು. ಪ್ರವಾಸ ಮುಂದುವರೆಸಿದಂತೆ ಇದು ಸವಾಲಾಗಲಿದೆ ಎಂದಿದ್ದಾರೆ.
ಇನ್ನು ವಿರಾಟ್ ಕೊಹ್ಲಿ ಅನುಪಸ್ಥಿತಿಯಲ್ಲಿ (ಮೊದಲ ಟೆಸ್ಟ್ ಬಳಿಕ) ಟೆಸ್ಟ್ ನಡೆಯಲಿದ್ದು, ಇದು ಉಳಿದವರಿಗೆ ಅವಕಾಶವಾಗಿ ಪರಿಣಮಿಸಬಹುದು. ಯುವ ಆಟಗಾರರು ತಮ್ಮ ಸಾಮರ್ಥ್ಯವನ್ನು ಸಾಬೀತು ಮಾಡಿಕೊಳ್ಳಲು ಇದೊಂದು ವೇದಿಗೆ. ವಿರಾಟ್ ಜಾಗವನ್ನು ತುಂಬುವವರು ಯಾರು ಎನ್ನುವ ಬಗ್ಗೆ ತಂಡ ಆ ದಿನದಂದು ಈ ಬಗ್ಗೆ ನಿರ್ದಾರ ತಿಳಿಸುತ್ತದೆ.
ಕಾರಣ ತಂಡದಲ್ಲಿ ಸಾಕಷ್ಟು ಗುಣಮಟ್ಟದ ಆಟಗಾರರಿದ್ದಾರೆ. ಟೆಸ್ಟ್ ಪಂದ್ಯಗಳು ಡಿಸೆಂಬರ್ ಅಂತ್ಯದಲ್ಲಿ ನಡೆಯಲಿರುವುದರಿಂದ ಕೆಲವು ನಿರ್ಧಾರಗಳು ಬದಲಾಗಬಹುದು ಎಂದು ವಿರಾಟ್ ಕೊಹ್ಲಿ ಅನುಪಸ್ಥಿತಿಯಲ್ಲಿ ನಡೆಯವ ಟೆಸ್ಟ್ಗಳ ಬಗ್ಗೆ ತಮ್ಮ ಅನಿಸಿಕೆ ವ್ಯಕ್ತಪಡಿಸಿದರು. ಇದೇ ವೇಳೆ ಪಿತೃತ್ವ ರಜೆ ತೆಗೆದೆಕೊಂಡ ಕೊಹ್ಲಿ ನಿರ್ಧರವನ್ನು ಸ್ವಾಗತ ಮಾಡಿದ ಲಕ್ಷ್ಮಣ್, ತಮ್ಮ ದಿನಮಾನದ ಇತಿಹಾಸವನ್ನು ಮೆಲುಕು ಹಾಕಿದರು.
ಟೀಂ ಇಂಡಿಯಾದ ಈಗಿನ ಸಾಮರ್ಥ್ಯ ಸೇರಿದಂತೆ ನಡೆಯಲಿರುವ ಮೂರು (ಏಕದಿನ, ಟಿ-20 ಮತ್ತು ಟೆಸ್ಟ್) ಸ್ವರೂಪಗಳ ಬಗ್ಗೆ ಸಂದರ್ಶನಲ್ಲಿ ಹತ್ತು ಹಲವು ಪ್ರಶ್ನೆಗಳನ್ನು ಕೇಳಲಾಯಿತು. ಬಹುದಿನಗಳ ಕಾಲ ನಡೆದ ಐಪಿಎಲ್ ಬಗ್ಗೆ, ಕೋವಿಡ್-19, ಯುವ ಆಟಗಾಗರ ಬಗ್ಗೆಯೂ ಗಮನ ಹರಿಸಲಾಯಿತು. ಟೆಸ್ಟ್ ಸ್ಪೆಷಲಿಸ್ಟ್ ವಿ.ವಿ.ಎಸ್.ಲಕ್ಷ್ಮಣ್ ತಮ್ಮ ಅಂದಿನ ಆಟದ ಹಳೆಯ ನೆನಪುಗಳ ಜೊತೆ ಜೊತೆಗೆ ಉತ್ತಮ ಪಾರ್ಮ್ನಲ್ಲಿರುವ ಭಾರತಕ್ಕೆ ವಿಶ್ ಮಾಡಿದರು.