ಕರ್ನಾಟಕ

karnataka

ETV Bharat / sports

ನ್ಯೂಜಿಲೆಂಡ್‌ ವಿರುದ್ಧ 2ನೇ ಟೆಸ್ಟ್‌ ಪಂದ್ಯ ಗೆದ್ದ ಟೀಂ ಇಂಡಿಯಾದ ಇಂದಿನ ದಾಖಲೆಗಳು ಇವು.. - ನ್ಯೂಜಿಲೆಂಡ್‌ ವಿರುದ್ಧ ಟೆಸ್ಟ್‌ ಸರಣಿ ಗೆದ್ದ ಭಾರತ

IND vs NZ Test Records : ನ್ಯೂಜಿಲೆಂಡ್ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ 372 ರನ್‌ಗಳ ಭಾರಿ ಅಂತರದಿಂದ ಗೆದ್ದು ಸರಣಿಯನ್ನು 1-0ಯಿಂದ ವಶಪಡಿಸಿಕೊಂಡಿದೆ. ಈ ಪಂದ್ಯದಲ್ಲಿ ಗೆಲುವಿನ ಯಶಸ್ಸಿನೊಂದಿಗೆ ಹಲವು ದಾಖಲೆಗಳನ್ನು ಮಾಡಿದೆ..

ind vs nz 2nd test here are some records in this match
ನ್ಯೂಜಿಲೆಂಡ್‌ ವಿರುದ್ಧ 2ನೇ ಟೆಸ್ಟ್‌ ಪಂದ್ಯ ಟೀಂ ಇಂಡಿಯಾದ ಇಂದಿನ ದಾಖಲೆಗಳು ಇವು...

By

Published : Dec 6, 2021, 3:58 PM IST

Updated : Dec 7, 2021, 12:21 AM IST

ಮುಂಬೈ: ವಾಂಖೆಡೆ ಸ್ಟೇಡಿಯಂನಲ್ಲಿ ನಡೆದ ನ್ಯೂಜಿಲೆಂಡ್ ವಿರುದ್ಧದ 2ನೇ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ 372 ರನ್‌ಗಳಿಂದ ಗೆದ್ದು ಸರಣಿಯನ್ನು 1-0 ಅಂತರದಲ್ಲಿ ವಶಪಡಿಸಿಕೊಂಡಿತು. ಇದು ಭಾರತಕ್ಕೆ ಟೆಸ್ಟ್‌ನಲ್ಲಿ ಅತಿ ಹೆಚ್ಚು ರನ್‌ಗಳ ಅಂತರದ ಜಯವಾಗಿದೆ. ಇದರ ಜೊತೆಗೆ ಇನ್ನೂ ಹಲವು ದಾಖಲೆಗಳನ್ನು ಕೊಹ್ಲಿ ಬಾಯ್ಸ್‌ ಬರೆದಿದ್ದಾರೆ.

  • ನಾಯಕ ವಿರಾಟ್ ಕೊಹ್ಲಿ ಎಲ್ಲಾ ಮಾದರಿಯ 50 ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಗೆಲುವು ಸಾಧಿಸಿದ ವಿಶ್ವದ ಮೊದಲ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾದರು.
  • ಟೆಸ್ಟ್‌ನಲ್ಲಿ ಟೀಂ ಇಂಡಿಯಾಗೆ 39 ಗೆಲುವು ತಂದುಕೊಟ್ಟಿರುವ ನಾಯಕ ಕೊಹ್ಲಿಗೆ ಅಗ್ರಸ್ಥಾನ. 27 ಪಂದ್ಯಗಳಲ್ಲಿ ಗೆಲುವಿನ ಕಾಣಿಕೆ ನೀಡಿದ ಮಾಜಿ ನಾಯಕ ಧೋನಿಗೆ 2ನೇ ಸ್ಥಾನ
  • ಭಾರತ ಗೆಲುವು ಸಾಧಿಸಿದ ಟೆಸ್ಟ್‌ ಪಂದ್ಯದಲ್ಲಿ ಹೆಚ್ಚು ಬಾರಿ 4ಕ್ಕೂ ಅಧಿಕ ವಿಕೆಟ್‌ ಕಬಳಿಸಿದ್ದ ಕುಂಬ್ಳೆ ಅವರ ದಾಖಲೆ ಸರಿಗಟ್ಟಿದ ಅಶ್ವಿನ್‌. ಇವರಿಬ್ಬರೂ 38 ಬಾರಿ ಈ ಸಾಧನೆ ಮಾಡಿದ್ದಾರೆ. ನಂತರದ ಸ್ಥಾನದಲ್ಲಿ ಹರ್ಭಜನ್‌ ಸಿಂಗ್‌ (23), ಮೂರನೇ ಸ್ಥಾನದಲ್ಲಿ ಯರ್ರಪಲ್ಲಿ ಪ್ರಸನ್ನ ಅವರಿದ್ದಾರೆ.
  • ಭಾರತ 372 ರನ್‌ಗಳ ಭಾರಿ ಅಂತರದಲ್ಲಿ ಕಿವೀಸ್‌ ವಿರುದ್ಧ ಟೆಸ್ಟ್‌ ಗೆಲುವು. 2015ರಲ್ಲಿ ದಕ್ಷಿಣ ಆಫ್ರಿಕಾವನ್ನು 337 ರನ್‌ಗಳ ಅಂತರದಲ್ಲಿ ಸೋಲಿಸಿತ್ತು.
  • 2013ರಿಂದ ಈವರೆಗೆ ಸ್ವದೇಶಿ ನೆಲದಲ್ಲಿ ಟೆಸ್ಟ್‌ ಸರಣಿಯಲ್ಲಿ ಟೀಂ ಇಂಡಿಯಾ ಸೋತೇ ಇಲ್ಲ. ಈ ಅವಧಿಯಲ್ಲಿ 14 ಟೆಸ್ಟ್‌ ಸರಣಿ ಗೆದ್ದ ಸಾಧನೆ.
  • ವಿರಾಟ್ ಕೊಹ್ಲಿ ಟೆಸ್ಟ್ ಕ್ರಿಕೆಟ್‌ನ ಯಶಸ್ವಿ ನಾಯಕರ ಪಟ್ಟಿಯಲ್ಲಿ ಮತ್ತೊಂದು ಮೆಟ್ಟಿಲು ಏರಿದ್ದಾರೆ. ಸದ್ಯ 39 ಪಂದ್ಯಗಳ ಗೆಲುವಿನೊಂದಿಗೆ ಭಾರತದ ಆಟಗಾರರ ಪೈಕಿ ಅಗ್ರಸ್ಥಾನದಲ್ಲಿದೆ. ಸ್ಟೀವ್ ವಾ (41), ಪಾಂಟಿಂಗ್ (48), ಗ್ರೇಮ್ ಸ್ಮಿತ್ (53) ಗೆಲುವಿನೊಂದಿಗೆ ಅಗ್ರಸ್ಥಾನದಲ್ಲಿದ್ದಾರೆ.
  • ಪ್ರಸ್ತುತ ಭಾರತ ಈ ವರ್ಷ 7 ಟೆಸ್ಟ್‌ ಸರಣಿಗಳಲ್ಲಿ ಗೆಲುವು ಸಾಧಿಸಿ ಅಗ್ರಸ್ಥಾನದಲ್ಲಿದೆ. ಪಾಕಿಸ್ತಾನ (6) ಹಾಗೂ ಇಂಗ್ಲೆಂಡ್ (4) ನಂತರದ ಸ್ಥಾನದಲ್ಲಿವೆ.
  • ಈ ವರ್ಷ ಆರ್‌. ಅಶ್ವಿನ್ 52 ವಿಕೆಟ್ ಪಡೆದಿದ್ದಾರೆ. ನಾಲ್ಕನೇ ಬಾರಿಗೆ ಅಶ್ವಿನ್‌ ಟೆಸ್ಟ್‌ನ ಕ್ಯಾಲೆಂಡರ್ ವರ್ಷದಲ್ಲಿ 50 ಅದಕ್ಕಿಂತ ಹೆಚ್ಚು ವಿಕೆಟ್ ಪಡೆದಿರುವುದು. 2015, 2016, 2017, 2021ರಲ್ಲಿ ಒಟ್ಟು 4 ಬಾರಿ ಈ ಸಾಧನೆ ಮಾಡಿದ ಭಾರತೀಯ ಬೌಲರ್ ಎಂಬ ದಾಖಲೆ. ಇದುವರೆಗೆ ಹರ್ಭಜನ್ ಮತ್ತು ಕುಂಬ್ಳೆ ಕೇವಲ 3 ಬಾರಿ ಮಾತ್ರ ಈ ಸಾಧನೆ ಮಾಡಿದ್ದಾರೆ.
  • ಭಾರತ, ನ್ಯೂಜಿಲೆಂಡ್‌ ಸರಣಿಯಲ್ಲಿ ಅಶ್ವಿನ್ ಕಿವೀಸ್‌ ವಿರುದ್ಧದ ಟೆಸ್ಟ್‌ ಪಂದ್ಯಗಳಲ್ಲಿ 66 ವಿಕೆಟ್ ಪಡೆದಿದ್ದಾರೆ. ಕಿವೀಸ್‌ನ ರಿಚರ್ಡ್ ಹ್ಯಾಡ್ಲಿ ಭಾರತ ವಿರುದ್ಧ 65 ವಿಕೆಟ್‌ ಪಡೆದಿದ್ದರು.
  • ಈ ಪಂದ್ಯದಲ್ಲಿ ಕಿವೀಸ್‌ ಸ್ಪಿನ್ನರ್‌ ಅಜಾಜ್‌ ಪಟೇಲ್‌ ಬೌಲಿಂಗ್‌ನಲ್ಲಿ ಮೋಡಿ ಮಾಡಿದ್ದಾರೆ. 225 ರನ್‌ ಕೊಟ್ಟು 14 ವಿಕೆಟ್‌ ಪಡೆದಿದ್ದಾರೆ. ಒಂದೇ ಇನ್ನಿಂಗ್ಸ್‌ನಲ್ಲಿ 10 ವಿಕೆಟ್‌ ಪಡೆದ 3ನೇ ಆಟಗಾರ ಎಂಬ ದಾಖಲೆ ಬರೆದರು. ಭಾರತದ ವಿರುದ್ಧ ಅತ್ಯುತ್ತಮ ಬೌಲಿಂಗ್‌ ಪ್ರದರ್ಶನ ನೀಡಿದ ಎಂಬ ಹೆಗ್ಗಳಿಕೆಗೂ ಪಾತ್ರವಾದರು. ನ್ಯೂಜಿಲೆಂಡ್ ಪರ ಅಜಾಜ್‌ ಅವರದು ಎರಡನೇ ಅತ್ಯುತ್ತಮ ಪ್ರದರ್ಶನವಾಗಿದೆ. ರಿಚರ್ಡ್‌ ಹ್ಯಾಡ್ಲಿ 1985ರಲ್ಲಿ ಆಸ್ಟ್ರೇಲಿಯಾ ವಿರುದ್ಧ 123ರನ್‌ ನೀಡಿ 15 ವಿಕೆಟ್‌ ಪಡೆದು ಅಗ್ರಸ್ಥಾನದಲ್ಲಿದ್ದಾರೆ.
  • ಭಾರತದಲ್ಲಿ ನ್ಯೂಜಿಲೆಂಡ್‌ ಆಡಿದ 12 ಟೆಸ್ಟ್‌ ಸರಣಿಗಳಲ್ಲಿ ಈವರೆಗೆ ಒಂದೇ ಒಂದು ಟೆಸ್ಟ್‌ ಸರಣಿ ಗೆದ್ದಿಲ್ಲ.
  • ಸ್ವದೇಶಿ ನೆಲದಲ್ಲಿ ಅತ್ಯಧಿಕ ವಿಕೆಟ್‌ ಪಡೆದ ಭಾರತ ಬೌಲರ್‌ಗಳ ಪಟ್ಟಿಯಲ್ಲಿ ಅಶ್ವಿನ್‌ ಎರಡನೇ ಸ್ಥಾನದಲ್ಲಿದ್ದಾರೆ. ಈತ ಈವರೆಗೆ 300 ವಿಕೆಟ್‌ ಪಡೆದಿದ್ದಾರೆ. ಅನಿಲ್‌ ಕುಂಬ್ಳೆ 350 ವಿಕೆಟ್‌ ಪಡೆದು ಮೊದಲ ಸ್ಥಾನದಲ್ಲಿದ್ದಾರೆ.
Last Updated : Dec 7, 2021, 12:21 AM IST

ABOUT THE AUTHOR

...view details