ನವದೆಹಲಿ :ಆಸ್ಟ್ರೇಲಿಯಾ ವಿರುದ್ಧ ಇಂದು ನಡೆದ ಮೊದಲ ಏಕದಿನ ಪಂದ್ಯದಲ್ಲಿ ಸಿಡಿಲಬ್ಬರದ ಬ್ಯಾಟಿಂಗ್ ಪ್ರದರ್ಶಿಸಿದ ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ ತಮ್ಮ ಈ ಬಲ ಪ್ರದರ್ಶನಕ್ಕೆ ಕಾರಣ ತಿಳಿಸಿದ್ದಾರೆ.
76 ಎಸೆತಗಳಲ್ಲಿ 90 ರನ್ ಸಿಡಿಸಿದ ಹಾರ್ದಿಕ್ ಪಾಂಡ್ಯ ಚೊಚ್ಚಲ ಶತಕ ಬಾರಿಸುವ ಅವಕಾಶದಿಂದ ವಂಚಿತರಾದರೂ ತಂಡದ ಅಗ್ರೆಸ್ಸಿವ್ ಅಟಗಾರರಾಗಿ ಹೊರಹೊಮ್ಮಿದ್ದಾರೆ. ಇಂದಿನ ಈ ಸ್ಫೋಟಕ ಬ್ಯಾಟಿಂಗ್ಗೆ ಅಸಲಿ ಕಾರಣವನ್ನು ಸಹ ಬಹಿರಂಗಪಡಿಸಿದ್ದಾರೆ.
ಸಿಡ್ನಿ ಕ್ರಿಡಾಂಗಣದಲ್ಲಿ ನಡೆದ ಮೊದಲ ಏಕದಿನ ಪಂದ್ಯದಲ್ಲಿ ಬಲಿಷ್ಟ ಆಸ್ಟ್ರೇಲಿಯಾ ವಿರುದ್ಧ 90 ರನ್ ಗಳಿಸಲು ಕಾರಣ ನನ್ನ ಜೀವನದಲ್ಲಾದ ಬದಲಾವಣೆ. ಈ ಉತ್ತಮ ಪ್ರದರ್ಶನಕ್ಕೆ ನನ್ನ ಮಗನ ಆಗಮನವೇ ಪ್ರೇರಣೆ. ತಂದೆಯಾದ ಬಳಿಕ ನನ್ನ ಜೀವನದ ದೃಷ್ಟಿಕೋನವೇ ಬದಲಾಗಿದೆ. ತಂಡಕ್ಕೆ ಇಷ್ಟು ಮೊತ್ತ ಸೇರಿಸಲು ಇತ್ತೀಚೆಗೆ ನನ್ನ ಜೀವನದಲ್ಲಾದ ಪರಿವರ್ತನೆಯೇ ಕಾರಣ ಎಂದಿದ್ದಾರೆ.