ಕರ್ನಾಟಕ

karnataka

ETV Bharat / sports

ಟಿ-20 ವಿಶ್ವಕಪ್​ ತಂಡಕ್ಕೆ ಕಮ್ ಬ್ಯಾಕ್ ಮಾಡಿದ ಆರ್ ಅಶ್ವಿನ್.. ಗಮನ ಸೆಳೆಯಿತು ಭಾವೋದ್ವೇಗದ ಟ್ವೀಟ್..

ಮುಂಬರುವ ಅಕ್ಟೋಬರ್​​​ನಿಂದ ಟಿ-20 ವಿಶ್ವಕಪ್ ಆರಂಭವಾಗುತ್ತಿದೆ. ಎಲ್ಲಾ ದೇಶಗಳು ತಮ್ಮ ತಂಡವನ್ನು ಪ್ರಕಟಿಸುತ್ತಿವೆ. ಭಾರತ ಸಹ ತಂಡವನ್ನ ಪ್ರಕಟಿಸಿದೆ. ಹಲವು ವರ್ಷಗಳ ಬಳಿಕ ಆರ್​ ಅಶ್ವಿನ್ ಮತ್ತೆ ತಂಡಕ್ಕೆ ವಾಪಸಾಗಿದ್ದಾರೆ..

Aswhin
ಆರ್ ಅಶ್ವಿನ್

By

Published : Sep 10, 2021, 3:03 PM IST

ನವದೆಹಲಿ :ಮುಂಬರುವ ಟಿ -20 ವಿಶ್ವಕಪ್‌ ಟೂರ್ನಿಗಾಗಿ ಭಾರತ ಕ್ರಿಕೆಟ್ ತಂಡ ಪ್ರಕಟವಾಗಿದೆ. ಟಿ-20ಗಾಗಿ ಸ್ಪಿನ್ನರ್ ಆರ್​ ಅಶ್ವಿನ್​​​ ಅವರನ್ನ ಆಯ್ಕೆ ಸಮಿತಿ ಪುನಃ ಆರಿಸಿದೆ. ಈ ಹಿನ್ನೆಲೆ ಆರ್ ಅಶ್ವಿನ್ ಅವರು ತಮ್ಮ ಆಯ್ಕೆ ಕುರಿತು ಸಂತಸ ಹಂಚಿಕೊಂಡಿದ್ದಾರೆ.

ಆರ್ ಅಶ್ವಿನ್ ತಮ್ಮ ಮನೆಯ ಗೋಡೆಯ ಮೇಲೆ ಬರೆದಿರುವ ಸಾಲುಗಳನ್ನು ಇದೀಗ ಟ್ವಿಟರ್​ನಲ್ಲಿ ಹಂಚಿಕೊಂಡಿದ್ದಾರೆ. ಮಿಲಿಯನ್​​​​ನಷ್ಟು ಬಾರಿ ನನ್ನ ಡೈರಿಯಲ್ಲಿ ಈ ಸಾಲನ್ನು ಬರೆದಿಟ್ಟ ಮೇಲೆ 2017ರಲ್ಲಿ ಈ ಸಾಲನ್ನು ಗೋಡೆಯ ಮೇಲೆ ಬರೆದಿದ್ದೆ. ನಾವು ಓದುವ ಮತ್ತು ಇಷ್ಟಪಡುವ ಸಾಲುಗಳು ನಮ್ಮ ಜೀವನದಲ್ಲೂ ಅಳವಡಿಸಿಕೊಂಡಾಗ ಅವು ಇನ್ನಷ್ಟು ಬಲವಾಗಿ ಗೋಚರವಾಗುತ್ತವೆ ಎಂದಿದ್ದಾರೆ.

ಅವರು ತಮ್ಮ ಮನೆಯ ಗೋಡೆಯಲ್ಲಿ ‘ಪ್ರತಿಯೊಂದು ಸುರಂಗವು ಅದರ ಕೊನೆಯಲ್ಲಿ ಬೆಳಕನ್ನು ಹೊಂದಿರುತ್ತದೆ. ಆದರೆ, ಆ ಬೆಳಕನ್ನು ನಂಬುವವರು ಮಾತ್ರ ಅದನ್ನು ನೋಡಲು ಬದುಕುತ್ತಾರೆ’ ಎಂದು ಬರೆದಿದ್ದಾರೆ.

ಮುಖ್ಯ ಆಯ್ಕೆಗಾರ ಚೇತನ್ ಶರ್ಮಾ ಐಪಿಎಲ್ ಪ್ರದರ್ಶನದ ಆಧಾರದ ಮೇಲೆ ಅಶ್ವಿನ್ ಅವರನ್ನು ತಂಡಕ್ಕೆ ಸೇರಿಸಿಕೊಳ್ಳಲಾಗಿದೆ ಎಂದಿದ್ದರು. ಅಲ್ಲದೆ ಕೆಲವರ ಹೆಸರು ಆಯ್ಕೆಪಟ್ಟಿಯಿಂದ ಕೈಬಿಟ್ಟಿದ್ದಕ್ಕೂ ಸಮರ್ಥನೀಯ ಉತ್ತರ ನೀಡಿದ್ದರು.

ಮುಂಬರುವ ಅಕ್ಟೋಬರ್​​​ನಿಂದ ಟಿ-20 ವಿಶ್ವಕಪ್ ಆರಂಭವಾಗುತ್ತಿದೆ. ಎಲ್ಲಾ ದೇಶಗಳು ತಮ್ಮ ತಂಡವನ್ನು ಪ್ರಕಟಿಸುತ್ತಿವೆ. ಭಾರತ ಸಹ ತಂಡವನ್ನ ಪ್ರಕಟಿಸಿದೆ. ಹಲವು ವರ್ಷಗಳ ಬಳಿಕ ಆರ್​ ಅಶ್ವಿನ್ ಮತ್ತೆ ತಂಡಕ್ಕೆ ವಾಪಸಾಗಿದ್ದಾರೆ.

ಓದಿ :India vs England: ಇಂದು ನಡೆಯಬೇಕಿದ್ದ 5ನೇ ಟೆಸ್ಟ್ ಪಂದ್ಯ ರದ್ದು

ABOUT THE AUTHOR

...view details