ನವದೆಹಲಿ:ಕೇಂದ್ರ ಸರ್ಕಾರ ಇಂದು ಮಂಡಿಸಿದ ಆಯವ್ಯಯದಲ್ಲಿ ಕ್ರೀಡಾ ಕ್ಷೇತ್ರಕ್ಕೆ ಅಲ್ಪಮಟ್ಟಿನ ನಿರಾಸೆ ಮೂಡಿದೆ. 2021-22ರ ಹಣಕಾಸು ವರ್ಷಕ್ಕೆ ಕ್ರೀಡಾ ವಲಯದ ಅಭಿವೃದ್ಧಿಗಾಗಿ ₹2,596.14 ಕೋಟಿ ಅನುದಾನ ಮೀಸಲಿಡಲಾಗಿದೆ. ಇದು ಕಳೆದ ವರ್ಷಕ್ಕೆ ಹೋಲಿಸಿದರೆ ₹230.78 ಕೋಟಿ ಅಂದರೆ ಶೇ 8.16ರಷ್ಟು ಅನುದಾನ ಕಡಿಮೆಯಾಗಿದೆ.
ಬಜೆಟ್ನಲ್ಲಿ ಕ್ರೀಡಾ ಕ್ಷೇತ್ರಕ್ಕೆ ಸಿಹಿ - ಕಹಿ: ₹2,596.14 ಕೋಟಿ ಮೀಸಲು
ಕ್ರೀಡಾ ವಲಯದ ಅಭಿವೃದ್ಧಿಗಾಗಿ ₹2,596.14 ಕೋಟಿ ಅನುದಾನ ಮೀಸಲಿಡಲಾಗಿದ್ದು, ಕಳೆದ ವರ್ಷಕ್ಕೆ ಹೋಲಿಸಿದರೆ ₹230.78 ಕೋಟಿ ಅನುದಾನ ಕಡಿಮೆಯಾಗಿದೆ.
ಬಜೆಟ್ನಲ್ಲಿ ಕ್ರೀಡಾ ಕ್ಷೇತ್ರಕ್ಕೆ ಸಿಹಿ-ಕಹಿ
ಆದರೆ, ಭಾರತೀಯ ಕ್ರೀಡಾ ಪ್ರಾಧಿಕಾರಕ್ಕೆ ಹಿಂದಿನ ಬಾರಿಗಿಂತ ಹೆಚ್ಚು ಅನುದಾನ ನೀಡಲಾಗಿದೆ. ಕಳೆದ ಬಾರಿ ₹500 ಕೋಟಿ ಅನುದಾನ ನೀಡಲಾಗಿದ್ದರೆ, ಈ ಬಾರಿ ಅದನ್ನು ₹660.41 ಕೋಟಿಗೆ ಹೆಚ್ಚಿಸಲಾಗಿದೆ. ಮತ್ತೊಂದೆಡೆ ರಾಷ್ಟ್ರೀಯ ಕ್ರೀಡಾ ಫೆಡರೇಷನ್ಗೆ ಈ ಬಾರಿ ₹35 ಕೋಟಿ ಹೆಚ್ಚು ಅನುದಾನ ನೀಡಲಾಗಿದ್ದು, ₹280 ಕೋಟಿ ಮೀಸಲಿಡಲಾಗಿದೆ.
ಇನ್ನು ಕ್ರೀಡಾ ಸಚಿವಾಲಯದ ಮಹತ್ವಾಕಾಂಕ್ಷಿ ಯೋಜನೆ ಖೇಲೋ ಇಂಡಿಯಾಗೆ ಅನುದಾನ ಕಡಿತ ಮಾಡಲಾಗಿದೆ. ಕಳೆದ ಬಾರಿ ಇದಕ್ಕೆ ₹ 890.42 ಕೋಟಿ ಅನುದಾನ ಮೀಸಲಿಡಲಾಗಿತ್ತು. ಆದರೆ, ಈ ಬಾರಿ ಅದನ್ನು ₹657.71 ಕೋಟಿಗೆ ಇಳಿಸಲಾಗಿದೆ.