ಕರ್ನಾಟಕ

karnataka

By

Published : Dec 15, 2020, 8:03 PM IST

Updated : Dec 15, 2020, 8:46 PM IST

ETV Bharat / sports

2022ರ ಮಹಿಳಾ ಏಕದಿನ ವಿಶ್ವಕಪ್​ ವೇಳಾಪಟ್ಟಿ ಪ್ರಕಟ

ಐಸಿಸಿ ಮಹಿಳಾ ಏಕದಿನ ವಿಶ್ವಕಪ್ 2022 ಮಾರ್ಚ್ 4 ರಿಂದ ನ್ಯೂಜಿಲ್ಯಾಂಡ್​​​​​‌ನಲ್ಲಿ ನಡೆಯಲಿದ್ದು, ಅಂತಿಮ ಪಂದ್ಯ ಏಪ್ರಿಲ್ 3ರಂದು ನಡೆಯಲಿದೆ ಎಂದು ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ) ಮಂಗಳವಾರ ಪ್ರಕಟಿಸಿದೆ.

Full match schedule for ICC Womens Cricket World Cup 2022 announced
ಏಕದಿನ ವಿಶ್ವಕಪ್​ ವೇಳಾಪಟ್ಟಿ

ದುಬೈ:2022ರ ಐಸಿಸಿ ಮಹಿಳಾ ಏಕದಿನ ವಿಶ್ವಕಪ್ ವೇಳಾಪಟ್ಟಿಯನ್ನು ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ ಪ್ರಕಟಿಸಿದ್ದು, ಮಾರ್ಚ್​ 4ರಿಂದ ನ್ಯೂಜಿಲ್ಯಾಂಡ್​​​​​​​​ನಲ್ಲಿ ಆರಂಭವಾಗಲಿರುವ ಈ ಟೂರ್ನಿ 31 ದಿನಗಳ ಕಾಲ ಅಂದರೆ ಏಪ್ರಿಲ್ 3ರವರೆಗೆ ನಡೆಯಲಿದೆ.

2021ರ ಫೆಬ್ರವರಿ - ಮಾರ್ಚ್‌ ಅವಧಿಯಲ್ಲಿ ಜರುಗಬೇಕಿದ್ದ ಐಸಿಸಿ ಮಹಿಳಾ ವಿಶ್ವಕಪ್ ಪಂದ್ಯಾವಳಿಯನ್ನು​ ಕೊರೊನಾ ಕಾರಣದಿಂದ 2022ಕ್ಕೆ ಮುಂದೂಡಲಾಗಿತ್ತು. ಮೊದಲ ಸೆಮಿಫೈನಲ್​ ಮಾರ್ಚ್​ 30ರಂದು ವೆಲ್ಲಿಂಗ್ಟನ್​​ನ ಬ್ಯಾಸಿನ್ ರಿಸರ್ವ್ ಮತ್ತು ಎರಡನೇ ಸೆಮಿಫೈನಲ್ ಮಾರ್ಚ್​​ 31ರಂದು ಕ್ರೈಸ್ಟ್‌ಚರ್ಚ್‌ನ ಹ್ಯಾಗ್ಲೇ​​ ಓವಲ್​​ನಲ್ಲಿ ನಡೆಯಲಿದ್ದು, ಏಪ್ರಿಲ್ 3ರಂದು ಓವಲ್‌ ಮೈದಾನದಲ್ಲಿ ಫೈನಲ್ ಪಂದ್ಯ ಜರುಗಲಿದೆ.

ಭಾರತ ಮಹಿಳಾ ತಂಡವು ಗ್ರೂಪ್​ ಹಂತದಲ್ಲಿ ಒಟ್ಟು ಏಳು ಪಂದ್ಯಗಳನ್ನು ಆಡಲಿದೆ. ಅದರಲ್ಲಿ ನ್ಯೂಜಿಲ್ಯಾಂಡ್​​​, ಆಸ್ಟ್ರೇಲಿಯಾ, ದಕ್ಷಿಣ ಆಫ್ರಿಕಾ ಮತ್ತು ಇಂಗ್ಲೆಂಡ್ ವಿರುದ್ಧ ನಾಲ್ಕು ಪಂದ್ಯಗಳಿದ್ದರೆ, ಉಳಿದ ಮೂರು ಪಂದ್ಯಗಳು ವಿಶ್ವಕಪ್ ಟೂರ್ನಿಗೆ ಅರ್ಹತೆ ಪಡೆಯುವ ತಂಡಗಳೊಂದಿಗೆ ಸೆಣಸಾಟ ನಡೆಸಲಿದೆ. ಭಾರತ ತಂಡವು ತನ್ನ ಮೊದಲ ಪಂದ್ಯವನ್ನು ಮಾರ್ಚ್​ 6ರಂದು ಆಡಲಿದೆ.

ಪಂದ್ಯಗಳು ಎಲ್ಲೆಲ್ಲಿ ಜರುಗಲಿವೆ:ಆಕ್ಲೆಂಡ್, ಟೌರಂಗಾ, ಹ್ಯಾಮಿಲ್ಟನ್, ವೆಲ್ಲಿಂಗ್ಟನ್, ಕ್ರೈಸ್ಟ್‌ಚರ್ಚ್ ಮತ್ತು ಡುನೆಡಿನ್.

ವಿಶ್ವಕಪ್ ವೇಳಾಪಟ್ಟಿ

Last Updated : Dec 15, 2020, 8:46 PM IST

ABOUT THE AUTHOR

...view details